ಭಾರತದಲ್ಲಿ Oppo A6 5G ಲಾಂಚ್: ಕಡಿಮೆ ಬೆಲೆಗೆ 7,000mAh ಬ್ಯಾಟರಿ ಫೋನ್!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಕುತೂಹಲಕ್ಕೆ ಕಾರಣವಾಗಿದ್ದ ಹೊಸ 'Oppo A6 5G' ಸ್ಮಾರ್ಟ್‌ಫೋನ್ ಇದೀಗ ಅಧಿಕೃತವಾಗಿ ಬಿಡುಗಡೆಯಾಗಿದೆ. ಉದ್ಯುಮದ ನಿರೀಕ್ಷೆಯಂತೆಯೇ, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಬ್ಯಾಟರಿ, ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಮತ್ತು IP66 + IP68 + IP69 ರೇಟಿಂಗ್‌ಗಳೊಂದಿಗೆ ಈ ಫೋನ್ ಪರಿಚಯಗೊಂಡಿದೆ. ದಿನನಿತ್ಯದ ಬಳಕೆದಾರರು ಹಾಗೂ ಮಧ್ಯಮ ಬಜೆಟ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ ಈ ಫೋನ್ ಈಗಾಗಲೇ ಖರೀದಿಗೆ ಸಹ ಲಭ್ಯವಿದೆ.
Oppo A6 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Oppo A6 5G ಬೆಲೆ ₹17,999 ರಿಂದ ಆರಂಭವಾಗುತ್ತದೆ. ಈ ದರದಲ್ಲಿ 4GB RAM ಮತ್ತು 128GB ಸ್ಟೋರೇಜ್ ರೂಪಾಂತರ ಲಭ್ಯ. 6GB RAM + 128GB ಸ್ಟೋರೇಜ್ ಮಾದರಿ ₹19,999ಕ್ಕೆ ದೊರೆಯಲಿದ್ದು, 6GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಟಾಪ್ ವೇರಿಯಂಟ್‌ಗೆ ₹21,999 ಬೆಲೆ ನಿಗದಿಯಾಗಿದೆ. ಆದರೆ, ಆಯ್ದ ಬ್ಯಾಂಕ್‌ಗಳ ಕಾರ್ಡ್‌ಗಳ ಮೂಲಕ ಖರೀದಿಸಿದರೆ ₹1,000 ತಕ್ಷಣದ ಕ್ಯಾಶ್‌ಬ್ಯಾಕ್ ಮತ್ತು 3 ತಿಂಗಳ ನೋ-ಕಾಸ್ಟ್ EMI ಸೌಲಭ್ಯ ದೊರೆಯುತ್ತದೆ.ಇನ್ನು ಈ ಫೋನ್ Sapphire Blue, Ice White ಮತ್ತು Sakura Pink ಬಣ್ಣಗಳಲ್ಲಿ ಲಭ್ಯವಿದೆ.
Oppo A6 5G: ಪ್ರಮುಖ ವೈಶಿಷ್ಟ್ಯಗಳು
ಈ ಹೊಸ Oppo A6 5G ಫೋನ್ 6.75-ಇಂಚಿನ HD+ (720x1,570 ಪಿಕ್ಸೆಲ್‌ಗಳು) LCD ಪರದೆಯನ್ನು ಹೊಂದಿದ್ದು, 120Hz ವರೆಗೆ ರಿಫ್ರೆಶ್ ರೇಟ್, 240Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರ, 83 ಪ್ರತಿಶತ DCI-P3 ಬಣ್ಣದ ಗ್ಯಾಮಟ್, 16.7 ಮಿಲಿಯನ್ ಬಣ್ಣಗಳು, 256ppi ಪಿಕ್ಸೆಲ್ ಸಾಂದ್ರತೆ ಮತ್ತು 1,125 ನಿಟ್‌ಗಳವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ. ಕಾರ್ಯಕ್ಷಮೆಗಾಗಿ, ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಇದೆ. ಇದನ್ನು RM Mali-G57 MC2 GPU, 6GB ವರೆಗಿನ LPDDR4x RAM ಮತ್ತು 256GB UFS 2.2 ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಸಂಯೋಜಿಸಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, Oppo A6 5G ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದ್ದು, ಇದು ಆಟೋಫೋಕಸ್‌ನೊಂದಿಗೆ 50-ಮೆಗಾಪಿಕ್ಸೆಲ್ (f/1.8) ಪ್ರಾಥಮಿಕ ಶೂಟರ್ ಮತ್ತು 2-ಮೆಗಾಪಿಕ್ಸೆಲ್ (f/2.4) ಮೊನೋಕ್ರೋಮ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ (f/2.0) ಮುಂಭಾಗದ ಕ್ಯಾಮೆರಾವನ್ನುನೀಡಲಾಗಿದೆ. ಇದು 1080p/ 60 fps ವರೆಗೆ ವೀಡಿಯೊವನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಂದರೆ, ಈ ಫೋನ್ ಫುಲ್ HD ಗುಣಮಟ್ಟದಲ್ಲಿ ವಿಡಿಯೋ ರೆಕಾರ್ಡಿಂಗ್ ಬೆಂಬಲಿಸುತ್ತದೆ.
ಬ್ಯಾಟರಿ ವಿಭಾಗದಲ್ಲಿ, Oppo A6 5G ಫೋನ್ 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ, 5G, 4G LTE, Wi-Fi 5, ಬ್ಲೂಟೂತ್ 5.4, USB ಟೈಪ್-C ಪೋರ್ಟ್, BeiDou, GPS, GLONASS, Galileo, ಮತ್ತು QZSS ಅನ್ನು ಒಳಗೊಂಡಿದೆ.ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ಬೆಂಬಲ, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಫೋನ್ IP66 + IP68 + IP69 ರೇಟಿಂಗ್, ಆಂಡ್ರಾಯ್ಡ್ 15 ಆಧಾರಿತ ಕಲರ್‌ಓಎಸ್ 15 ಸಾಫ್ಟ್‌ವೇರ್ ಫೀಚರ್ಸ್‌ಗಳನ್ನು ಫೋನ್ ಒಳಗೊಂಡಿದೆ.
ಒಟ್ಟಾರೆಯಾಗಿ, 7,000mAh ಬ್ಯಾಟರಿಯೊಂದಿಗೆ ದೀರ್ಘ ಬ್ಯಾಟರಿ ಬ್ಯಾಕಪ್, 5G ತಂತ್ರಜ್ಞಾನ, ಹೊಸ Android ಆವೃತ್ತಿ ಮತ್ತು ನಂಬಿಕಸ್ಥ ಬ್ರಾಂಡ್ ಬೆಂಬಲದೊಂದಿಗೆ Oppo A6 5G ಭಾರತೀಯ ಮಾರುಕಟ್ಟೆಯಲ್ಲಿ ಒಂದು ಆಕರ್ಷಕ ಆಯ್ಕೆಯಾಗಿ ಕಾಣಿಸಿಕೊಂಡಿದೆ. ಮಧ್ಯಮ ಬೆಲೆಯಲ್ಲಿ ಉತ್ತಮ ಫೀಚರ್‌ಗಳನ್ನು ಹುಡುಕುತ್ತಿರುವ ಬಳಕೆದಾರರಿಗೆ ಈ ಸ್ಮಾರ್ಟ್‌ಫೋನ್ ಗಮನಾರ್ಹ ಆಯ್ಕೆಯಾಗಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








