ಅಸಾಧಾರಣ ಹ್ಯಾಂಡ್‌ಸೆಟ್ ಆಗಿರುವ ಒಪ್ಪೊ ಎನ್1 ಮಿನಿ

By Shwetha
|

ಚೈನೀಸ್ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಒಪ್ಪೊ ನಿಜಕ್ಕೂ ಭಾರತೀಯ ಹ್ಯಾಂಡ್‌ಸೆಟ್ ಲೋಕದಲ್ಲಿ ಹೆಚ್ಚಿನ ಸದ್ದನ್ನು ಉಂಟುಮಾಡುತ್ತಿದೆ. ಭಾರತದಲ್ಲಿ ತನ್ನ ಫೋನ್ ಪ್ರಯಾಣವನ್ನು ತುಸು ಹೆಚ್ಚುಗಾರಿಕೆಯಿಂದಲೇ ಆರಂಭಿಸಿರುವ ಕಂಪೆನಿ ತನ್ನ ಎನ್ 1 ಫ್ಲ್ಯಾಗ್‌ಶಿಪ್ ಉಳ್ಳ ಡಿವೈಸ್ ಅನ್ನು ಲಾಂಚ್ ಮಾಡುವ ಮೂಲಕ ಅದ್ಭುತವನ್ನು ಉಂಟುಮಾಡುವ ಯೋಜನೆಯನ್ನು ಆರಂಭಿಸಿದೆ.

ಒಪ್ಪೊ ಎನ್1 ಮಿನಿ ನಿಜಕ್ಕೂ ಅಸಾಧಾರಣ ಹ್ಯಾಂಡ್‌ಸೆಟ್ ಆಗಿದ್ದು ಅತ್ಯದ್ಭುತ ವಿಶೇಷತೆಗಳನ್ನು ಒಳಗೊಂಡು ಗ್ರಾಹಕರಲ್ಲಿ ಖರೀದಿಯ ಹುಮ್ಮಸ್ಸನ್ನು ಹೆಚ್ಚಿಸುತ್ತಿದೆ. ಇದರ ಬೆಲೆ ರೂ 26,990 ಆಗಿದ್ದು ನಿಜಕ್ಕೂ ವಿಶಿಷ್ಟತೆಗಳಿಗೆ ಅನುಗುಣವಾಗಿ ಇದರ ಬೆಲೆ ನಿರ್ಧರಿತವಾಗಿದೆ. ಒಪ್ಪೊ ಎನ್1 ಮಿನಿ, ಹೆಸರೇ ಹೇಳುವಂತೆ, N1 ಫ್ಲ್ಯಾಗ್‌ಶಿಪ್‌ನ ಮಿನಿಯೇಚರ್ ಆವೃತ್ತಿಯಾಗಿದೆ. ಇದು 5 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದ್ದು, ಪೂರ್ಣ ಗಾತ್ರದ ಫ್ಯಾಬ್ಲೆಟ್ ಆಗಿ ಇದು ಮೂಡಿ ಬಂದಿದೆ. ಎನ್1 ಹ್ಯಾಂಡ್‌ಸೆಟ್‌ಗೆ ಹೋಲಿಸಿದಾಗ ಇದು ತುಸು ದಪ್ಪವಾಗಿದೆ. ಫೋನ್ ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಅನ್ನು ಚಾಲನೆ ಮಾಡುತ್ತಿದ್ದು ಕಸ್ಟಮ್ ಬಿಲ್ಟ್ ROM, ಕಲರ್ ಓಎಸ್ ಮುಂತಾದ ಅಂಶಗಳನ್ನು ಒಳಗೊಂಡಿದೆ.

ಒಪ್ಪೊ ಎನ್1 ಮಿನಿ ಫೋನ್ ವೀಡಿಯೊ ವಿಮರ್ಶೆ

ಮಧ್ಯಮ ಶ್ರೇಣಿಯ ಹ್ಯಾಂಡ್‌ಸೆಟ್ ಆಗಿರುವ ಒಪ್ಪೊ ಎನ್1 ಮಿನಿ 1.6GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಜೊತೆಗೆ ಬಂದಿದ್ದು, 2ಜಿಬಿ RAM ಅನ್ನು ಹೊಂದಿದ್ದು ಅತ್ಯಾಧುನಿಕ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಇದರಲ್ಲಿದೆ. ಒಪ್ಪೊ ಎನ್1 ಮಿನಿ ಸಂಪರ್ಕ ವಿಶೇಷತೆಗಳು 3 ಜಿ ಸಂಪರ್ಕ, ಬ್ಲ್ಯೂಟೂತ್, ವೈಫೈ, GPS ಆಗಿದೆ . ಫೋನ್ LTE ಸಂಪರ್ಕದಲ್ಲಿ ವಿಫಲತೆಯನ್ನು ಹೊಂದಿದೆ. ಇದು 16ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದ್ದು ಇದು ಹೆಚ್ಚುವರಿ ಮೆಮೊರಿ ಬೆಂಬಲವನ್ನು ಹೊಂದಿಲ್ಲ.

ಇದರ ಕ್ಯಾಮೆರಾವು 13MP ಸ್ವೈವಲ್ ಅನ್ನು ಒಳಗೊಂಡಿದ್ದು ಇದು 2140mAh ಬ್ಯಾಟರಿಯನ್ನು ಹೊಂದಿದೆ. ಇದರ ಕಾರ್ಯಕ್ಷಮತೆ ಅತ್ಯಂತ ಮನಮೋಹಕವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Best Mobiles in India

English summary
This article tells about Oppo N1 Mini Hands-On and First Look: Sophisticated, Yet Far From Epic.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X