ವಿಶ್ವದ ಮೊದಲ ತಿರುಗುವ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಡಿ.10ಕ್ಕೆ ಮಾರುಕಟ್ಟೆಗೆ ಬಿಡುಗಡೆ

Posted By:

ವಿಶ್ವದ ಮೊದಲ ತಿರುಗುವ ಕ್ಯಾಮೆರಾವಿರುವ ಒಪ್ಪೋ ಎನ್‌1 ಸ್ಮಾರ್ಟ್‌ಫೋನ್‌ ಡಿಸೆಂಬರ್‌ 10ರಂದು ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಆರಂಭದಲ್ಲಿ ಈ ಸ್ಮಾರ್ಟ್‌ಫೋನ್ ಯುರೋಪ್‌ ಮತ್ತು ಅಮೆರಿಕದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಅಲ್ಯೂಮಿನಿಯಂ ದೇಹವಿರುವ ಸ್ಮಾರ್ಟ್‌ಫೋನ್‌ ಎರಡು ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಲಿದೆ. 16/32 GB ಆಂತರಿಕ ಮೆಮೊರಿಯನ್ನು ಹೊಂದಿರುವ ಸ್ಮಾರ್ಟ್‌‌‌ಫೋನ್‌ ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಸ್‌ ಮತ್ತು ಶಕ್ತಿಶಾಲಿಯಾದ 3610 mAh ಬ್ಯಾಟರಿಯನ್ನು ಹೊಂದಿದೆ.

ಬಹುತೇಕ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಹಿಂದೆ ಮತ್ತು ಮುಂದೆ ಕ್ಯಾಮೆರಾ ಇರುತ್ತದೆ.ಆದರೆ ಈ ಸ್ಮಾರ್ಟ್‌ಫೋನಿಗೆ ಒಂದೇ ಕ್ಯಾಮೆರಾವಿದ್ದು ಈ ಕ್ಯಾಮೆರಾವನ್ನು206 ಡಿಗ್ರಿಯವರೆಗೆ ತಿರುಗಿಸಬಹುದಾಗಿದೆ.ಹೀಗಾಗಿ ಕ್ಯಾಮೆರಾವನ್ನು ಗ್ರಾಹಕರು ಕೈಯಲ್ಲಿ ತಿರುಗಿಸುವ ಮೂಲಕ ಹಿಂದೆ ಮತ್ತು ಮುಂದುಗಡೆಯ ದೃಶ್ಯವನ್ನು ಕ್ಲಿಕ್ಕಿಸಬಹುದು.ಅಷ್ಟೇ ಅಲ್ಲದೇ ಒಪ್ಪೊ ಸ್ಮಾರ್ಟ್‌‌ಫೋನ್‌ ಆರು ಲೆನ್ಸ್‌ ಜೊತೆಗೆ ಸಿಮೊಸ್‌ ಸೆನ್ಸರ್‌‌ಗಳನ್ನು ಹೊಂದಿದೆ. f/2.0 ಅಪರ್ಚರ್‌ ಮೂಲಕ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋಗಳನ್ನು ತೆಗೆಯಬಹುದಾಗಿದೆ.

ಚೀನಾ ಮೂಲದ ಒಪ್ಪೋ ಕಂಪೆನಿ ಭಾರತದಲ್ಲಿ ಈ ಸ್ಮಾರ್ಟ್‌‌ಫೋನನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎನ್ನುವ ಮಾಹಿತಿಯನ್ನು ಪ್ರಕಟಿಸಿಲ್ಲ. ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಮತ್ತು ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ಬಳಸಲಾಗಿರುವ ತಂತ್ರಜ್ಞಾಮವನ್ನು ತೋರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಸ್ಮಾರ್ಟ್‌‌‌ಫೋನ್‌ಗಳ ಆಕರ್ಷಕ ಚಿತ್ರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪ್ರೊಸೆಸರ್‌,ರ್‍ಯಾಮ್‌ ಮತ್ತು ಆಂತರಿಕ ಮೆಮೊರಿ:

ಒಪ್ಪೋದಿಂದ ವಿಶ್ವದ ಮೊದಲ ತಿರುಗುವ ಕ್ಯಾಮೆರಾ ಸ್ಮಾರ್ಟ್‌ಫೋನ್

1.7 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ 600 ಕ್ವಾಡ್‌ ಕೋರ್‌ ಪ್ರೊಸೆಸರ್‌,Adreno 320 ಗ್ರಾಫಿಕ್‌ ಪ್ರೊಸೆಸರ್‍,2 GB ರ್‍ಯಾಮ್‌,16/32 GB ಆಂತರಿಕ ಮೆಮೊರಿಯನ್ನು ಹೊಂದಿದೆ.

 ಸ್ಕ್ರೀನ್‌

ಒಪ್ಪೋದಿಂದ ವಿಶ್ವದ ಮೊದಲ ತಿರುಗುವ ಕ್ಯಾಮೆರಾ ಸ್ಮಾರ್ಟ್‌ಫೋನ್

1920 x 1080 ಪಿಕ್ಸೆಲ್‌ ರೆಸೂಲೂಶನ್‌,377 ಪಿಪಿಐ ,ಗೊರಿಲ್ಲಾ ಗ್ಲಾಸ್‌ ಹೊಂದಿರುವ 5.9 ಇಂಚಿನ ಐಪಿಎಸ್‌ ಕೆಪಾಸಿಟಿ‌ವ್‌ ಟಚ್‌ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

 ಕ್ಯಾಮೆರಾ:

ಒಪ್ಪೋದಿಂದ ವಿಶ್ವದ ಮೊದಲ ತಿರುಗುವ ಕ್ಯಾಮೆರಾ ಸ್ಮಾರ್ಟ್‌ಫೋನ್

ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13 ಎಂಪಿ ಕ್ಯಾಮೆರಾ,f/2.0 ಅಪರ್ಚರ್‌ನ್ನು ಕ್ಯಾಮೆರಾ ಹೊಂದಿದೆ.ಜೊತೆಗೆ ನಾರ್ಮಲ್‌,ಪನೋರಮಾ,ಹೈಸ್ಪೀಡ್‌,ರಿವಿಂಡ್‌‌, ಬ್ಯೂಟಿಫೈ,ಮತ್ತು ಸ್ಲೋ ಶಟರ್‌ ಮೊಡ್‌ಗಳ ಮೂಲಕ ಫೋಟೋ ಕ್ಲಿಕ್‌ ಮಾಡಬಹುದಾಗಿದೆ.

 ಕನೆಕ್ಟಿವಿಟಿ ವಿಶೇಷತೆ:

ಒಪ್ಪೋದಿಂದ ವಿಶ್ವದ ಮೊದಲ ತಿರುಗುವ ಕ್ಯಾಮೆರಾ ಸ್ಮಾರ್ಟ್‌ಫೋನ್

ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿ ವಿಶೇಷತೆಯನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

 ಸೆನ್ಸರ್‌ ಮತ್ತು ಬ್ಯಾಟರಿ

ಒಪ್ಪೋದಿಂದ ವಿಶ್ವದ ಮೊದಲ ತಿರುಗುವ ಕ್ಯಾಮೆರಾ ಸ್ಮಾರ್ಟ್‌ಫೋನ್

ಲೈಟ್‌ ಸೆನ್ಸರ್‌,ಜಿ ಸೆನ್ಸರ್‌,4 ಡಿ ಗೈರೋಸ್ಕೋಪ್ ಸೆನ್ಸರ್‌ ಮತ್ತು 3610 mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

ಗಾತ್ರ

ಒಪ್ಪೋದಿಂದ ವಿಶ್ವದ ಮೊದಲ ತಿರುಗುವ ಕ್ಯಾಮೆರಾ ಸ್ಮಾರ್ಟ್‌ಫೋನ್

170.7x82.6x9 ಮಿ.ಮೀ ಗಾತ್ರ,213 ಗ್ರಾಂ ತೂಕವನ್ನು ಹೊಂದಿದೆ.

ಒಪ್ಪೋದಿಂದ ವಿಶ್ವದ ಮೊದಲ ತಿರುಗುವ ಕ್ಯಾಮೆರಾ ಸ್ಮಾರ್ಟ್‌ಫೋನ್

ವಿಡಿಯೋ ವೀಕ್ಷಿಸಿ

ಒಪ್ಪೋದಿಂದ ವಿಶ್ವದ ಮೊದಲ ತಿರುಗುವ ಕ್ಯಾಮೆರಾ ಸ್ಮಾರ್ಟ್‌ಫೋನ್

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot