ಒಪ್ಪೋ ಬಿಡುಗಡೆ ಮಾಡುತ್ತಿದೆ ಮೂರು ಕ್ಯಾಮೆರಾ ಹೊಂದಿರು R11 ಸ್ಮಾರ್ಟ್ ಫೋನ್...!!!

By: Precilla Dias

ಚೀನಾ ಮೂಲದ ಒಪ್ಪೋ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚುನ ಸದ್ದು ಮಾಡುತ್ತಿದ್ದು, ಹೆಚ್ಚಾಗಿ ಕ್ಯಾಮೆರಾ ಫೋನ್ ಗಳನ್ನೇ ಮಾರುಕಟ್ಟೆಗೆ ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವ ಒಪ್ಪೋ R11 ಸ್ಮಾರ್ಟ್ ಫೋನಿನ ಕೆಲವು ಫೋಟೋಗಳು ಆನ್ ಲೈನಿನಲ್ಲಿ ಲೀಕ್ ಆಗಿದೆ.

ಒಪ್ಪೋ ಬಿಡುಗಡೆ ಮಾಡುತ್ತಿದೆ ಮೂರು ಕ್ಯಾಮೆರಾ ಹೊಂದಿರು R11 ಸ್ಮಾರ್ಟ್ ಫೋನ್...!!!

ಈಗಾಗಲೇ ಒಪ್ಪೋ R11 ಫೋನಿನ ಉತ್ಪಾದನೆಯನ್ನು ಪೂರ್ಣಗೊಳಿಸಿದ್ದು, ಇನ್ನೇನು ಜಾಹೀರಾತು ಕಾರ್ಯವನ್ನು ಆರಂಭಿಸುವ ಹಂತದಲ್ಲಿದೆ. ಇದೇ ಸಂದರ್ಭದಲ್ಲಿ ಈ ಸ್ಮಾರ್ಟ್ ಫೋನಿನ ಚಿತ್ರಗಳು ಲೀಕ್ ಆಗಿದೆ ಎನ್ನಲಾಗಿದೆ. ಚಿತ್ರದಲ್ಲಿ ಕಾಣುವಂತೆ ಈ ಫೋನ್ ಒಟ್ಟು ಮೂರು ಕ್ಯಾಮೆರಾಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೇ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹತ್ತಿರದಿಂದ ನೋಡುವುದಾದರೆ:

ಹತ್ತಿರದಿಂದ ನೋಡುವುದಾದರೆ:

ಲೀಕ್ ಆಗಿರುವ ಫೋಟೋವನ್ನು ಹತ್ತಿರದಿಂದ ನೋಡುವುದಾದರೆ, R11 ಸ್ಮಾರ್ಟ್ ಫೋನ್ ಈ ಹಿಂದೆ ಬಿಡುಗಡೆಯಾಗಿದ್ದ ಒಪ್ಪೋ R9 ಸರಣಿಯ ವಿನ್ಯಾಸವನ್ನೇ ಹೊಂದಿದೆ ಎನ್ನಬಹುದು. ಆದರೆ ಹಿಂಭಾಗದಲ್ಲಿ ಇದೇ ಮೊದಲ ಬಾರಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದೇ ಈ ಫೋನಿನ ವಿಶೇಷತೆ ಎಂದರೆ ತಪ್ಪಾಗುವುದಿಲ್ಲ.

ಈ ಫೋನಿನಲ್ಲಿ ಉತ್ತಮ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂಬುದಕ್ಕೆ ಸಾಕ್ಷಿ ಎನ್ನುವಂತೆ ಈ ಫೋನಿನಲ್ಲೇ ತೆಗೆದ ಚಿತ್ರವೊಂದು ಸದ್ಯ ಲೀಕ್ ಆಗಿದೆ, ಅದನ್ನು ನೋಡಿದರೆ ಇದರ ಕ್ಯಾಮೆರಾ ಎಷ್ಟು ಪವರ್ ಫುಲ್ ಎನ್ನುವುದು ತಿಳಿಯುತ್ತದೆ.

ವಿಶೇಷತೆಗಳನ್ನು ನೋಡುವುದಾದರೆ:

ವಿಶೇಷತೆಗಳನ್ನು ನೋಡುವುದಾದರೆ:

R11 ಒಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಆಗಿರಲಿದ್ದು, ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಪ್ರೋಸೆಸರ್, ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ 16 MP+20 MP. ಇದರೊಂದಿಗೆ 2X ಲಾಸ್ ಲೈಸ್ ಜೂಮ್ ನೀಡಲಿದೆ. ಈ ಫೋನಿನಲ್ಲಿ ಕ್ಯಾಮೆರಾ ಕ್ಲಾರಿಟಿಯನ್ನು ಹೆಚ್ಚಿಸುವ ಸಲುವಾಗಿಯೇ ಉತ್ತಮ ಹಾರ್ಡ್ ವೇರ್ ಬಳಸಲಾಗಿದೆ.

ಡಿಜಿಟಲ್ ಇಂಡಿಯಾ: ಪ್ರಧಾನಿ ಮೋದಿಯಿಂದ ಪ್ರತಿಯೊಬ್ಬರಿಗೂ ಉಚಿತ ಲಾಪ್‌ಟಾಪ್ ಆಫರ್: ಹೌದಾ..?

ಇವುಗಳನ್ನು ಬಿಟ್ಟರೆ..?

ಇವುಗಳನ್ನು ಬಿಟ್ಟರೆ..?

ಇದಲ್ಲದೇ ಈ ಫೋನಿನಲ್ಲಿ 5.5 ಇಂಚಿನ 1080p ಅಮೊಲೈಡ್ ಡಿಸ್ ಪ್ಲೇ, 4GB RAM ಜೊತೆಗೆ 64 GB ಇಂಟರ್ನಲ್ ಮೆಮೊರಿ ಹೊಂದಿದ್ದು, 2900mAh ಬ್ಯಾಟರಿಯೊಂದಿಗೆ ಆಂಡ್ರಾಯ್ಡ್ 7.1ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಕಲರ್ 3.1 ಇದರಲ್ಲಿದೆ.

Source

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
A close shot of the same device has appeared online along with three new camera samples. This as expected, speaks a lot about the specs and features of the smartphone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot