ಒಪ್ಪೋದಿಂದ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್..! ವಿವೋಗೆ ಭಾರೀ ಹೊಡೆತ..!
ವಿಶ್ವದ ಸ್ಮಾರ್ಟ್‌ಫೋನ್ ಲೋಕಕ್ಕೆ ಮತ್ತೊಂದು ಸ್ಮಾರ್ಟ್‌ಫೋನ್ ಎಂಟ್ರೀ ಕೊಟ್ಟಿದೆ. ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒಪ್ಪೋ ಚೀನಾದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಒಪ್ಪೋ R15Xನ್ನು ಬಿಡುಗಡೆಗೊಳಿಸಿದ್ದು, ಮಧ್ಯಮವರ್ಗದ ಬೆಲೆಯಲ್ಲಿ ಭಾರೀ ಸ್ಪರ್ಧೆಯನ್ನು ಹುಟ್ಟುಹಾಕಿದೆ. ಶಿಯೋಮಿ, ವಿವೋ ಸ್ಮಾರ್ಟ್‌ಫೋನ್‌ಗಳಿಗೆ ಮತ್ತೊಂದು ಸ್ಪರ್ಧೆ ಏರ್ಪಟ್ಟಿದೆ.

ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರುವ ಒಪ್ಪೋ R15X ಸ್ಮಾರ್ಟ್‌ಫೋನ್ ಹೀಗಾಗಲೇ ಬಿಡುಗಡೆಯಾಗಿದ್ದ ಒಪ್ಪೋ K1 ಸ್ಮಾರ್ಟ್‌ಫೋನ್‌ನ ಅನೇಕ ಹೋಲಿಕೆಗಳನ್ನು ಹೊಂದಿದೆ. ನವೆಂಬರ್ 1ರಿಂದ ಚೀನಾದಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್‌ಫೋನ್ ಹಲವು ಫೀಚರ್ಸ್‌ಗಳನ್ನು ಹೊಂದಿದ್ದು, ಭಾರತದಲ್ಲಿ ಯಾವಾಗ ಲಾಂಚ್ ಆಗುತ್ತದೆ ಎಂಬುದು ತಿಳಿದು ಬಂದಿಲ್ಲ. ಆಗಿದ್ದರೆ ಒಪ್ಪೋ R15X ಸ್ಮಾರ್ಟ್‌ಫೋನ್ ಏನೇಲ್ಲಾ ಫೀಚರ್ಸ್ ಹೊಂದಿದೆ..? ಬೆಲೆ ಎಷ್ಟು..? ಎಂಬುದನ್ನು ಮುಂದೆ ನೋಡಿ.

ಡಿಸ್‌ಪ್ಲೇ
ಒಪ್ಪೋ R15X ಸ್ಮಾರ್ಟ್‌ಫೋನ್ 6.4 ಇಂಚು ಸಂಪೂರ್ಣ HD+ (2340x1080 ಪಿಕ್ಸೆಲ್ಸ್) AMOLED ಡಿಸ್‌ಪ್ಲೇ ಹೊಂದಿದೆ. 19.5:9 ಆಸ್ಪೆಕ್ಟ್ ರೇಷಿಯೋ ಹೊಂದಿದ ಡಿಸ್‌ಪ್ಲೇ ನೀರಿನ ಹನಿ ಆಕಾರದ ನೋಚ್‌ನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದ್ದು, ಶೇ.91ರಷ್ಟು ಸ್ಕ್ರೀನ್ ಟು ಬಾಡಿ ರೇಷಿಯೋ ಒಳಗೊಂಡಿದ್ದು, ಗೇಮಿಂಗ್ ಮತ್ತು ಮಲ್ಟಿಮೀಡಿಯಾಗೆ ಹೇಳಿಮಾಡಿಸಿದಂತಿದೆ.

ಪ್ರೊಸೆಸರ್ ಮತ್ತು ಕಾರ್ಯನಿರ್ವಹಣೆ
ಹೊಸ ಒಪ್ಪೋ R15X ಸ್ಮಾರ್ಟ್‌ಫೋನ್ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಹೊಂದಿದ್ದು, 6GB RAM ಮತ್ತು 128GB ಆಂತರಿಕ ಮೆಮೊರಿಯನ್ನು ಹೊಂದಿದೆ. ಆಂಡ್ರಾಯ್ಡ್ 8.1 ಒರಿಯೋ ಬೆಂಬಲಿತ ColorOS 5.2 ಒಎಸ್‌ನಿಂದ ಕಾರ್ಯನಿರ್ವಹಿಸುತ್ತಿದೆ.

ಕ್ಯಾಮೆರಾ
ಕ್ಯಾಮೆರಾ ವ್ಯವಸ್ಥೆಯನ್ನು ಗಮನಿಸಿದರೆ ಒಪ್ಪೋ R15X ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, 16MP ಪ್ರಾಥಮಿಕ ಸೆನ್ಸಾರ್ f/1.7 ಅಪಾರ್ಚರ್, 2MP ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಫ್ರಾಂಟ್ ಕ್ಯಾಮೆರಾ 25MP ಸೆನ್ಸಾರ್ ಹೊಂದಿದೆ. AI ಬೆಂಬಲಿತವಾಗಿದ್ದು, 800 ಡಿಟೆಕ್ಷನ್ ಮೋಡ್ಸ್ ಹೊಂದಿರುತ್ತೆ.

ಬ್ಯಾಟರಿ
ಬ್ಯಾಟರಿ ವಿಚಾರಕ್ಕೆ ಬಂದರೆ ಒಪ್ಪೋ R15X ಸ್ಮಾರ್ಟ್‌ಫೋನ್ 3,600 mAh ಬ್ಯಾಟರಿ ಹೊಂದಿದೆ. ಡ್ಯುಯಲ್ 4G VoLTE, WiFi 802.11ac, Bluetooth v5.0, GPS ಮತ್ತು GLONASS ಮತ್ತೀತರ ಫೀಚರ್ಸ್‌ಗಳನ್ನು ಹೊಂದಿದೆ.

ಬೆಲೆ
ಒಪ್ಪೋ R15X ಸ್ಮಾರ್ಟ್‌ಫೋನ್ ಗ್ಲಾಸಿಕಲ್ ಸಿಲ್ವರ್, ಐಸ್ ಬ್ಲೂ ಮತ್ತು ನೆಬೂಲಾ ವರ್ಣಗಳಲ್ಲಿ ಲಭ್ಯವಿದ್ದು, ಸುಮಾರು ರೂ. 26,400 ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ಚೀನಾದಲ್ಲಿ ಬಿಡುಗಡೆಯಾಗಿರುವ ಒಪ್ಪೋ R15X ಸ್ಮಾರ್ಟ್‌ಫೋನ್ ನವೆಂಬರ್ 1ರಿಂದ ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.


Click it and Unblock the Notifications








