ಭಾರತದಲ್ಲಿ 'ಒಪ್ಪೊ ಆರ್17 ಪ್ರೊ' ರಿಲೀಸ್!..ಬೆಲೆ, ಫೀಚರ್ಸ್ ಸಂಪೂರ್ಣ ಮಾಹಿತಿ!!

|

ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆಯನ್ನು ಹುಟ್ಟಿಹಾಕಿದ್ದ 'ಒಪ್ಪೊ ಆರ್17' ಸೀರಿಸ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿಂದು ಬಿಡುಗಡೆಯಾಗಿವೆ. ಚೀನಾ ಮೂಲದ ಜನಪ್ರಿಯ ಮೊಬೈಲ್ ಸಂಸ್ಥೆ ಒಪ್ಪೋ, ಭಾರತದಲ್ಲಿ ಇದೇ ಮೊದಲ ಬಾರಿಗೆ ಆರ್ ಶ್ರೇಣಿಯ ಎರಡು ಅತ್ಯಾಕರ್ಷಕ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ.

ಅದರಲ್ಲಿಯೂ ಭಾರತೀಯರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದ 'ಒಪ್ಪೊ ಆರ್17 ಪ್ರೊ' ಸ್ಮಾರ್ಟ್‌ಪೋನಿನ ಎಲ್ಲಾ ಮಾಹಿತಿಗಳು ಹೊರಬಿದ್ದಿದೆ. ಟ್ರಿಪಲ್ ಕ್ಯಾಮೆರಾ, ವಾಟರ್ ಡ್ರಾಪ್ ನೋಚ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ರಕ್ಷಣೆ ಮತ್ತು ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ನಂತಹ ಅತ್ಯಾಧುನಿಕ ಫೀಚರ್ಸ್ 'ಒಪ್ಪೊ ಆರ್17 ಪ್ರೊ' ಸ್ಮಾರ್ಟ್‌ಪೋನ್ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿದೆ.

ಭಾರತದಲ್ಲಿ 'ಒಪ್ಪೊ ಆರ್17 ಪ್ರೊ' ರಿಲೀಸ್!..ಬೆಲೆ, ಫೀಚರ್ಸ್ ಸಂಪೂರ್ಣ ಮಾಹಿತಿ!!

ಹಾಗಾದರೆ, ಸ್ಯಾಮ್‌ಸಂಗ್, ಒನ್‌ಪ್ಲಸ್ ಕಂಪೆನಿಗಳಿಂದ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಮಿಡ್-ರೇಂಜ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಮಾರುಕಟ್ಟೆಗೆ ಎಂಟ್ರಿ ನೀಡಿರುವ 'ಒಪ್ಪೊ ಆರ್17 ಪ್ರೊ' ಸ್ಮಾರ್ಟ್‌ಫೋನ್ ಹೇಗಿದೆ? 'ಒಪ್ಪೊ ಆರ್17 ಪ್ರೊ' ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಮೊಬೈಲ್ ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ಒಪ್ಪೊ ಆರ್17 ಪ್ರೊ' ವಿನ್ಯಾಸ!

'ಒಪ್ಪೊ ಆರ್17 ಪ್ರೊ' ವಿನ್ಯಾಸ!

ಮಿಡ್-ರೇಂಜ್ ಪ್ರೀಮಿಯಮ್ ವಿನ್ಯಾಸದಲ್ಲಿ ಒಪ್ಪೊ R17 ಪ್ರೊ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ವಾಟರ್‌ಪ್ರೂಫ್ ಮತ್ತು ಡಸ್ಟ್ ಪ್ರೂಫ್ ಡಿಸ್‌ಪ್ಲೇ, 3D ಕರ್ವ್ ರಿಯರ್ ಗ್ಲಾಸ್ ಪ್ಯಾನಲ್ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದೆ. ಒಟ್ಟಿನಲ್ಲಿ ಪೋನ್ ಹೈ ಎಂಡ್ ವಿನ್ಯಾಸವನ್ನು ಹೊಂದಿದೆ ಎನ್ನಬಹದು.

'ಒಪ್ಪೊ ಆರ್17 ಪ್ರೊ' ಡಿಸ್‌ಪ್ಲೇ!

'ಒಪ್ಪೊ ಆರ್17 ಪ್ರೊ' ಡಿಸ್‌ಪ್ಲೇ!

ಒಪ್ಪೊ R17 ಪ್ರೊ ಸ್ಮಾರ್ಟ್‌ಫೋನ್ 19.5: 9 ಆಕಾರ ಅನುಪಾತದ 6.4-ಇಂಚಿನ FHD + (2340X1080) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಶೇಕಡಾ 91.5 ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿರುವ ಈ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ರಕ್ಷಣೆ ಪಡೆದಿದ್ದು ಬಹಳ ಗಟ್ಟಿಮುಟ್ಟಾಗಿದೆ. ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಡಿಸ್‌ಪ್ಲೇ ಇದಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಒಪ್ಪೊ R17 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಓಕ್ಟಾ ಕೋರ್ ಸ್ನ್ಯಾಪ್ಡ್ರಾಗನ್ 710 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ. ಅಡ್ರಿನೊ 616 ಜಿಪಿಯು ಜೊತೆಗೆ 8GB RAM ಹಾಗೂ 128GB ಆಂತರಿಕ ಸಂಗ್ರಹಣೆ ಸಾಮರ್ಥ್ಯವನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಆದರೆ, ಈ ಸ್ಮಾರ್ಟ್‌ಫೋನ್ ಆಂತರಿಕ ಸಂಗ್ರಹಣೆ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಎಸ್‌ಡಿ ಕಾರ್ಡ್ ಆಯ್ಕೆ ಲಭ್ಯವಿಲ್ಲ.

ಟ್ರಿಪಲ್ ರಿಯರ್ ಕ್ಯಾಮೆರಾ!

ಟ್ರಿಪಲ್ ರಿಯರ್ ಕ್ಯಾಮೆರಾ!

ಒಪ್ಪೊ R17 ಪ್ರೊ'ಅತ್ಯಾಧುನಿಕ ತ್ರಿವಳಿ-ಲೆನ್ಸ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಎಫ್1.5 /ಎಫ್2.4 ಅಪಾರ್ಚರ್‌ನಲ್ಲಿ 12 ಎಂಪಿ ಕ್ಯಾಮೆರಾ ವೇರಿಯೇಬಲ್ ದ್ಯುತಿರಂಧ್ರ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. f/ 2.6 ಅಪಾರ್ಚರ್‌ನಲ್ಲಿ 20MP ಸೆಕೆಂಡರಿ ಕ್ಯಾಮೆರಾ ಲಭ್ಯವಿದೆ. ಇನ್ನು ಮೂರನೇ TOF 3D ಸಂವೇದಕವು 3D ಚಿತ್ರಗಳನ್ನು ಚಿತ್ರಿಸಲಿದೆ.

ಸೆಲ್ಫಿ ಕ್ಯಾಮೆರಾ!

ಸೆಲ್ಫಿ ಕ್ಯಾಮೆರಾ!

ಒಪ್ಪೊ R17 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಎಫ್ / 2.0 ಅಪರ್ಚರ್ನೊಂದಿಗೆ 25 ಎಂಪಿ ಸ್ಪೋರ್ಟ್ಸ್ ಸೆಲ್ಫಿ ಕ್ಯಾಮರಾವನ್ನು ನಾವು ಕಾಣಬಹುದಾಗಿದೆ. ಇನ್ನು ಸೆಲ್ಫಿ ಕ್ಯಾಮೆರಾ ಕೃತಕ ಬುದ್ದಿಮತ್ತೆ ತಂತ್ರಜ್ಞಜಾನದಲ್ಲಿ ಒಂದೆಜ್ಜೆ ಮುಂದೆ ಇದೆ ಎನ್ನಬಹುದು. ಒಟ್ಟಿನಲ್ಲಿ ಕ್ಯಾಮೆರಾ ವಿಷಯದಲ್ಲಿ ಮಾತ್ರ ಒನ್‌ಪ್ಲಸ್, ಸ್ಯಾಮ್‌ಸಂಗ್ ಕಂಪೆನಿಗಳನ್ನು ಈ ಸ್ಮಾರ್ಟ್‌ಬಫೋನ್ ಮೀರಿಸಿದೆ.

ಸೂಪರ್ VOOK ಫ್ಲಾಶ್‌ಚಾರ್ಜ್!

ಸೂಪರ್ VOOK ಫ್ಲಾಶ್‌ಚಾರ್ಜ್!

ಒಪ್ಪೊ R17 ಪ್ರೊ ಫೋನಿನಲ್ಲಿ ಸೂಪರ್ VOOK ಫ್ಲಾಶ್‌ಚಾರ್ಜ್ ತಂತ್ರಜ್ಞಾನವನ್ನು ತರಲಾಗಿದೆ. ಸೂಪರ್ VOOC ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ತಂತ್ರಜ್ಞಾನವಾಗಿದ್ದು, ವೇಗವಾಗಿ ಬ್ಯಾಟರಿಯನ್ನು ರೀಚಾರ್ಜ್ ಮಾಡುವ ಶಕ್ತಿಯನ್ನು ಹೊಂದಿದೆ. 3,700 mAh ನಷ್ಟು ಶಕ್ತಿಯುತವಾದ ದೊಡ್ಡ ಬ್ಯಾಟರಿ ಮರುಪೂರಣಗೊಳಿಸಲು ಈ ಸೂಪರ್ VOOK ಫ್ಲಾಶ್‌ಚಾರ್ಜ್ ಅತ್ಯುತ್ತಮ .

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಕೇವಲ 10 ನಿಮಿಷಗಳಲ್ಲಿ 40% ಚಾರ್ಜ್ ಬ್ಯಾಟರಿ ಚಾರ್ಜ್ ಆಗುವ ತಂತ್ರಜ್ಞಾನವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 8.1 Oreo ಆಧಾರಿತ ColorOS 5.2 ಒಎಸ್‌ನಿಂದ ಚಾಲಿತವಾಗಲಿದೆ. ಬೆಜೆಲ್ ಲೆಸ್‌ ಡಿಸ್‌ಪ್ಲೇ, ಒಟ್ಟು ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ಇತರೆ ಫೀಚರ್ಸ್ ಕೂಡ ಪ್ರೀಮಿಯಮ್ ಆಗಿವೆ ಎಂದು ಹೇಳಬಹುದು.

ಬೆಲೆ ಎಷ್ಟು?, ಮಾರಾಟ ಯಾವಾಗ?

ಬೆಲೆ ಎಷ್ಟು?, ಮಾರಾಟ ಯಾವಾಗ?

ಭಾರತದಲ್ಲಿ Oppo R17 ಪ್ರೊ ಸ್ಮಾರ್ಟ್‌ಫೋನ್ ಅನ್ನು 45,990 ರೂಪಾಯಿಗಳಿಗೆ ಬಿಡುಗಡೆ ಮಾಡಲಾಗಿದೆ. ಸ್ಮಾರ್ಟ್‌ಫೋನ್ 8GB RAM ಮತ್ತು 128GB ಆಂತರಿಕ ಸಂಗ್ರಹಣೆಯ ಒಂದೇ ಮಾದಿಯಲ್ಲಿ ದೇಶದಲ್ಲಿ ಲಭ್ಯವಿದೆ. ಅಮೆಜಾನ್ ಇಂಡಿಯಾ ಮತ್ತು ಒಪ್ಪೊ ಮಳಿಗೆಗಳಲ್ಲಿ ಮುಂಗಡ ಬುಕ್ ಮಾಡಬಹುದಾಗಿದ್ದು, ಇದೇ ಡಿಸೆಂಬರ್ 7 ರಿಂದ ಮೊಬೈಲ್ ಗ್ರಾಹಕರ ಕೈಸೇರಲಿದೆ.

Best Mobiles in India

English summary
Oppo R17 Pro launched: Key specs, features, India price and everything you need to know. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X