Home
ಮೊಬೈಲ್

ಒಪ್ಪೋದಿಂದ 10 GB RAM ಹೊಂದಿರುವ ವಿಶ್ವದ ಮೊದಲ ವೇಗದ ಫೋನ್...!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒಪ್ಪೋ, ಹೊಸ ಮಾದರಿಯ ಪ್ರಯತ್ನಗಳಿಗೆ ಕೈ ಹಾಕುವುದರಲ್ಲಿಯೂ ಖ್ಯಾತಿಯನ್ನು ಪಡೆದುಕೊಂಡಿದೆ. ಹಲವು ಹೊಸ ಮಾದರಿಯ ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿಯೂ ಒಪ್ಪೋಗೆ ಸಲ್ಲುತ್ತದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿಯೇ ಮೊದಲ ಬಾರಿಗೆ 10 GB RAM ಹೊಂದಿರುವ ಟಾಪ್ ಎಂಡ್ ಫೋನ್ ವೊಂದನ್ನು ಪರಿಚಯ ಮಾಡಲಿದೆ ಎನ್ನಲಾಗಿದೆ.

ಒಪ್ಪೋದಿಂದ 10 GB RAM ಹೊಂದಿರುವ ವಿಶ್ವದ ಮೊದಲ ವೇಗದ ಫೋನ್...!

ಈಗಾಗಲೇ ಮಾರುಕಟ್ಟೆಯಲ್ಲಿ ಒಪ್ಪೋ ಟಾಪ್ ಎಂಡ್ ಫೋನ್‌ ಎನ್ನಿಸಿಕೊಂಡಿರುವ ಒಪ್ಪೋ R ಸ್ಮಾರ್ಟ್‌ಫೋನ್ ಸರಣಿಯ ಮುಂದಿನ ಭಾಗವಾಗಿ ಕಾಣಿಸಿಕೊಳ್ಳಲಿರುವ ಒಪ್ಪೋ R17 ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರಿಗೆ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ವೇಗದ RAM ಅನ್ನು ಅಳವಡಿಸಲಿದೆ. ಈಗಾಗಲೇ 8GB RAM ಫೋನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಇದನ್ನು ಮೀರಿಸುವಂತೆ 10 GB RAM ಅನ್ನು ಈ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಮಾರುಕಟ್ಟೆಯಲ್ಲಿ ದೊಡ್ಡ RAM:

ಮಾರುಕಟ್ಟೆಯಲ್ಲಿ ದೊಡ್ಡ RAM:

ಒಪ್ಪೋ R17 ಸ್ಮಾರ್ಟ್‌ಫೋನಿನಲ್ಲಿ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ RAM ಅನ್ನು ನೀಡಲಿದೆ ಎನ್ನಲಾಗಿದೆ. ಇದು ಬೆಸ್ಟ್ RAM ಹೊಂದಿರುವ ಸ್ಮಾರ್ಟ್‌ಫೋನ್ ಎನ್ನಿಸಿಕೊಳ್ಳಲಿದೆ. ಮಾರುಕಟ್ಟೆಯಲ್ಲಿ ಇದುವರೆಗೂ ಯಾವುದೇ ಸ್ಮಾರ್ಟ್‌ಫೋನಿನಲ್ಲಿ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ.

4K ಡಿಸ್‌ಪ್ಲೇ ಇರಲಿದೆ:

4K ಡಿಸ್‌ಪ್ಲೇ ಇರಲಿದೆ:

10 GB RAM ಹೊಂದಿರುವ ಒಪ್ಪೋ R17 ಸ್ಮಾರ್ಟ್‌ಫೋನಿನಲ್ಲಿ ಎಲ್ಲವೂ ಟಾಪ್ ಎಂಡ್ ಆಯ್ಕೆಗಳು ದೊರೆಯಲಿದೆ. ಇದರಂತೆ 4K ಗುಣಮಟ್ಟದ ಡಿಸ್‌ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದೆ. ಇದು OLED ಡಿಸ್‌ಪ್ಲೇಯಾಗಲಿದ್ದು, 92.9 ಅನುಪಾತದಲ್ಲಿ ಡಿಸ್‌ಪ್ಲೇ ವಿನ್ಯಾಸವನ್ನು ಮಾಡಲಿದೆ. ಇದು ಬೆಸ್ಟ್ ಎನ್ನಬಹುದಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ಇದಲ್ಲದೇ ಒಪ್ಪೋ R17 ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ. 256 GB ಮತ್ತು 512 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಇದು ಸಹ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಳ್ಳಲಿದೆ.

ಬೆಲೆ:

ಬೆಲೆ:

ಮೂಲಗಳ ಪ್ರಕಾರ ಒಪ್ಪೋ R17 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರೂ.31800ಕ್ಕೆ ಮಾರಾಟವಾಗಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದ್ದು, ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಳ್ಳಲಿದೆ. ಇದಾದ ನಂತರದಲ್ಲಿ ಬೇರೆ ಮಾರುಕಟ್ಟೆಯಲ್ಲಿಯೂ ಮಾರಾಟವಾಗಲಿದೆ. ಭಾರತದಲ್ಲಿಯೂ ಕಾಣಿಸಿಕೊಳ್ಳಲಿದೆ.

ವಿವೋ ಫೋನಿನಲ್ಲಿ:

ವಿವೋ ಫೋನಿನಲ್ಲಿ:

ಮೂಲಗಳ ಪ್ರಕಾರ ವಿವೋ ಎಕ್ಸ್‌ಪ್ಲೇ 7 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಿದೆ ಎನ್ನುವ ರೂಮರ್ ಹರಿದಾಡುತ್ತಿದೆ. ಈ ಬಗ್ಗೆಯೂ ಹೆಚ್ಚಿನ ಮಾಹಿತಿಯೂ ಲಭ್ಯವಾಗಿಲ್ಲ. ಇದು ಸಹ ರೂಮರ್ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನಿನಲ್ಲಿ 10 GB RAM ಅಳವಡಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ.

Best Mobiles in India

English summary
Oppo R17 Reportedly Teased in China. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+