'ರಿಯಲ್ ಮಿ' ಮುಂದೆ 'ರೆಡ್ ಮಿ' ಎನ್ನೇನೂ ಅಲ್ಲ: ಬಜೆಟ್ ಬೆಲೆಯ ಪ್ರೀಮಿಯಮ್ ಸ್ಮಾರ್ಟ್‌ಪೋನ್..!
ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ನೆಲೆ ಕಂಡುಕೊಳ್ಳುವ ಮೂಲಕ ಟಾಪ್ ಒನ್ ಸ್ಮಾರ್ಟ್‌ಫೋನ್ ಮಾರಾಟಗಾರ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಚೀನಾ ಮೂಲದ ಶಿಯೋಮಿಗೆ ಚೀನಾದ ಮತ್ತೊಂದು ಕಂಪನಿ ಸೆಡ್ಡು ಹೊಡೆಯಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಒಪ್ಪೋ ತನ್ನದೇ ಬ್ರಾಂಡಿನ ಅಡಿಯಲ್ಲಿ ರಿಯಲ್ ಮಿ ಎನ್ನುವ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದ್ದು, ಮಾರುಕಟ್ಟೆಗೆ 'ರಿಯಲ್ ಮಿ 1' ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಶಿಯೋಮಿಗೆ ಸೆಡ್ಡು ಹೊಡೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.

ಮಾರುಕಟ್ಟೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಯೂವ ಸಮುಹವನ್ನು ಗುರಿಯಾಗಿ ಇಟ್ಟುಕೊಂಡು ಲಾಂಚ್ ಆಗಿರುವ ರಿಯಲ್ ಮಿ 1 ಸ್ಮಾರ್ಟ್‌ಫೋನ್, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುವುದಲ್ಲದೇ, ಶಿಯೋಮಿಗೆ ನಡುಕ ಹುಟ್ಟಿಸುವುದು ಗ್ಯಾರೆಂಟಿ ಎನ್ನಲಾಗಿದೆ. ಈಗಾಗಲೇ ತನ್ನ ವಿನ್ಯಾಸದಿಂದಲೇ ಬಹುಜನರನ್ನು ತಲುಪಿದ್ದ ರಿಯಲ್ ಮಿ 1 ಸ್ಮಾರ್ಟ್‌ಫೋನ್ ಬಿಡುಗಡೆಯ ನಂತರದಲ್ಲಿ ಹೆಚ್ಚಿನ ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ರಿಯಲ್ ಮಿ 1 ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಮಾಹಿತಿ ಮುಂದಿನಂತೆ ಇದೆ.

ಲಾಂಚ್:
ಅಮೆಜಾನ್ ನಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದ್ದು, ಮೇ.25ರಂದು ಮಾರಾಟಕ್ಕೆ ಲಭ್ಯವಿರಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಮೇಲೆ ಆಫರ್ ಗಳನ್ನು ನೀಡಲು ಅಮೆಜಾನ್ ಮುಂದಾಗಿದೆ ಎನ್ನಲಾಗಿದೆ. ಹೊಸ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಇದು ಬೆಸ್ಟ್ ಫೋನ್ ಎನ್ನಲಾಗಿದೆ.

ವಿಶೇಷತೆ:
ರಿಯಲ್ ಮಿ 1 ಸ್ಮಾರ್ಟ್‌ಫೋನಿನಲ್ಲಿ 6 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು FHD+ ಗುಣಮಟ್ಟದ ಡಿಸ್‌ಪ್ಲೇಯಾಗಿದ್ದು, ಹೆಚ್ಚಿನ ಪ್ರಮಾಣದ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ ವಿಡಿಯೋ ಮತ್ತು ಗೇಮ್ ಆಡುವ ಅನುಭವನ್ನು ಉತ್ತಮವಾಗಿ ಹೊಂದಿದೆ ಎನ್ನಲಾಗಿದೆ.

ವೇಗದ ಪ್ರೋಸೆಸರ್:
ರಿಯಲ್ ಮಿ 1 ಸ್ಮಾರ್ಟ್‌ಫೋನಿನಲ್ಲಿ ಮಿಡಿಯಾ ಟೆಕ್ ಹೆಲಿಯೋ P60 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದು 2GHz ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ವಿವಿಧ ಆವೃತ್ತಿಗಳಲ್ಲಿ ದೊರೆಯಲಿದೆ. ಇದಲ್ಲದೇ ಕೃತಕ ಬುದ್ದಿಮತ್ತೆಯ ಚಿಪ್ ಅನ್ನು ಕಾಣಬಹುದಾಗಿದೆ.

ಉತ್ತಮ ಕ್ಯಾಮೆರಾ:
ಇದಲ್ಲದೇ ರಿಯಲ್ ಮಿ 1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ LED ಫ್ಲಾಷ್ ಲೈಟ್ ಅನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಬ್ಯೂಟಿ 2.0ವನ್ನು ನೀಡಲಾಗಿದ್ದು, ಬಳಕೆದಾರರ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ.

AI ಸ್ಟಿಕರ್:
ಈ ಸ್ಮಾರ್ಟ್‌ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಿಲ್ಲ, ಇದರ ಬದಲಾಗಿ ಫೇಷಿಯಲ್ ರೆಕಗ್ನೇಷನ್ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೇ AI ಸ್ಟಿಕರ್ ಗಳನ್ನು ಕ್ರಿಯೇಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. 3410mAh ಬ್ಯಾಟರಿಯನ್ನು ನೀಡಲಾಗಿದೆ.

ಮೂರು ಸ್ಟೋರೆಜ್:
ರಿಯಲ್ ಮಿ 1 ಸ್ಮಾರ್ಟ್‌ಫೋನ್ ಮೂರು ಆವೃತ್ತಿಯಲ್ಲಿ ದೊರೆಯಲಿದ್ದು, 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯೊಂದಿಗೆ, 4GB RAM ಮತ್ತು 64 GB ಇಂಟರ್ನಲ್ ಮೆಮೊರಿ ಜೊತೆಗೆ ಹಾಗೂ 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ.


ಬೆಲೆಗಳು:
3 GB RAM ಮತ್ತು 32 GB ಇಂಟರ್ನಲ್ ಮೆಮೊರಿ ಆವೃತ್ತಿಯ ಬೆಲೆ ರೂ.8990, 4 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿಯೂ ರೂ.10,990 ಮತ್ತು 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ರೂ.13,990ಕ್ಕೆ ದೊರೆಯಲಿದೆ ಎನ್ನಲಾಗಿದೆ.


Click it and Unblock the Notifications
