ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ 'ಒಪ್ಪೊ ರೆನೊ 10ಎಕ್ಸ್ ಝೂಮ್' ಹವಾ!!

|

ಒಪ್ಪೊ ಫೈಂಡ್ ಎಕ್ಸ್ ಮತ್ತು ಆರ್ 17 ಸೀರಿಸ್ ಸ್ಮಾರ್ಟ್‌ಪೋನ್‌ಗಳಿಂದ ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದಿರುವ ಜನಪ್ರಿಯ ಮೊಬೈಲ್ ತಯಾರಿಕ ಕಂಪೆನಿ ಒಪ್ಪೊ ಇದೀಗ ಮತ್ತೊಂದು ಜನಪ್ರಿಯ ಕ್ಯಾಮೆರಾ ಆಧಾರಿತ ಪ್ರೀಮಿಯಂ ಸ್ಮಾರ್ಟ್‌ಪೋನ್ ಒಂದನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಪ್ರೀಮಿಯಂ ಸ್ಮಾರ್ಟ್‌ಪೋನ್‌ಗಳ ಖರೀದಿಗೆ ಒಲವು ಹೆಚ್ಚುತ್ತಿರುವುದರಿಂದ, ಇದೇ ಮೊದಲ ಬಾರಿಗೆ ಮೊಬೈಲ್ ಮಾರುಕಟ್ಟೆಯೇ ತನ್ನತ್ತ ತಿರುಗಿನೋಡುವಂತಹ 'ಒಪ್ಪೊ ರೆನೊ 10ಎಕ್ಸ್ ಝೂಮ್' ಸ್ಮಾರ್ಟ್‌ಫೋನ್ ಪ್ರೀ ಬುಕ್ಕಿಂಗ್ ಅನ್ನು ಒಪ್ಪೊ ಕಂಪೆನಿ ಆರಂಭಿಸಿದೆ.

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ 'ಒಪ್ಪೊ ರೆನೊ 10ಎಕ್ಸ್ ಝೂಮ್' ಹವಾ!!

ಹೌದು, ಮೊಬೈಲ್ ಕ್ಯಾಮೆರಾ ಲೋಕದಲ್ಲಿ ಮತ್ತೊಂದು ಚರಿತ್ರೆ ಬರೆಯಲು ಮುಂದಾಗಿರುವ ಒಪ್ಪೊ ತನ್ನ ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಸೆಟಪ್ ಹೊಂದಿರುವ 'ಒಪ್ಪೊ ರೆನೊ 10ಎಕ್ಸ್ ಝೂಮ್' ಸ್ಮಾರ್ಟ್‌ಫೋನನ್ನು ಇತ್ತೀಚಿಗಷ್ಟೇ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪ್ರೀಮಿಯಂ ಫ್ಲಾಗ್‌ಶಿಪ್ ಫೀಚರ್ಸ್ ಜತೆಗೆ ಅತ್ಯಾಕರ್ಷಕ ವಿನ್ಯಾಸದಲ್ಲಿ ಮೂಡಿಬಂದಿರುವ ಈ ಸ್ಮಾರ್ಟ್‌ಪೋನ್ ಡಿಎಸ್‌ಎಲ್‌ಆರ್ ಹೊಂದಿರುವ ಕ್ಯಾಮೆರಾ ಪ್ರಿಯರಿಗೂ ಸಹ ಕಣ್ಣು ಕುಕ್ಕುವಂತಹ ಶಕ್ತಿಶಾಲಿ ಕ್ಯಾಮೆರಾ ಸೆಟಪ್ ಹೊಂದಿರುವುದು ಇದರ ಪ್ರಮುಖ ವಿಶೇಷವಾಗಿದೆ.

ಇನ್ನು ಒಮ್ಮೆ ಸ್ಮಾರ್ಟ್‌ಫೋನನ್ನು ಕೈನಲ್ಲಿ ಹಿಡಿದರೆ ಸಾಕು ಅದನ್ನು ಖರೀದಿಸಬೇಕು ಎನ್ನುವಷ್ಟು ಪ್ರೀಮಿಯಂ ಡಿಸೈನ್‌ ಹೊಂದಿರುವ ಈ 'ಒಪ್ಪೊ ರೆನೊ 10ಎಕ್ಸ್ ಝೂಮ್' ಸ್ಮಾರ್ಟ್‌ಫೋನ್ ಈಗಾಗಲೇ ಪ್ರೀ ಬುಕ್ಕಿಂಗ್ ನಲ್ಲಿ ಲಭ್ಯವಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್ ಮಾರುಕಟ್ಟೆಯೇ ತನ್ನತ್ತ ತಿರುಗಿನೋಡುವಂತೆ ಮಾಡಿರುವ 'ಒಪ್ಪೊ ರೆನೊ 10ಎಕ್ಸ್ ಝೂಮ್' ಸ್ಮಾರ್ಟ್‌ಫೋನ್ ಹೇಗಿದೆ?, ಫೀಚರ್ಸ್ ಯಾವುವು? ಮತ್ತು ಸ್ಮಾರ್ಟ್‌ಫೋನ್ ಕ್ಯಾಮೆರಾದ ವಿಶೇಷತೆಗಳು ಏನೇನಿವೆ ಎಂಬುದನ್ನು ನಾವು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯೋಣ.

ರೈಸಿಂಗ್ ಕ್ಯಾಮೆರಾ ಜೊತೆ ಪ್ರೀಮಿಯಂ ವಿನ್ಯಾಸ!

ರೈಸಿಂಗ್ ಕ್ಯಾಮೆರಾ ಜೊತೆ ಪ್ರೀಮಿಯಂ ವಿನ್ಯಾಸ!

'ಒಪ್ಪೊ ರೆನೊ 10ಎಕ್ಸ್ ಝೂಮ್' ಸ್ಮಾರ್ಟ್‌ಫೋನ್ ವಿನ್ಯಾಸದ ಬಗ್ಗೆ ಒಂದೇ ಮಾತಿನಲ್ಲಿ ಹೆಳುವುದಾದರೆ ಇದೊಂದು ಅತ್ಯುತ್ತಮ ಪ್ರೀಮಿಯಂ ಡಿಸೈನ್ ಹೊಂದಿರುವ ಡಿವೈಸ್ ಎನ್ನಬಹುದು. ಇದೇ ಮೊದಲ ಬಾರಿಗೆ ರೈಸಿಂಗ್ ಸೆಲ್ಫೀ ಕ್ಯಾಮೆರಾ ವಿನ್ಯಾಸವನ್ನು ಹೊಂದಿರುವ ಸ್ಮಾರ್ಟ್‌ಪೋನ್ ಸುವ್ಯವಸ್ಥಿತ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಬಾಗಿದ 3D ಕರ್ವ್ಡ್ ಸ್ಲಾಸ್ ಮತ್ತು ಮೆಟಲ್ ಫ್ರೇಮ್‌ಗಳಲ್ಲಿ ಉತ್ತಮ ಹಿಡಿತವನ್ನು ಖಾತ್ರಿಗೊಳಿಸುವ ಸ್ಮಾರ್ಟ್‌ಪೋನ್ ಹಿಂಬಾಗದಲ್ಲಿ ಮೂರು ರಿಯರ್ ಕ್ಯಾಮೆರಾಗಳನ್ನು ಹೊತ್ತು ಅಂದವಾಗಿ ಕಾಣಿಸುತ್ತಿದೆ.

ಮೊದಲ ಶಾರ್ಕ್-ಫಿನ್ ರೈಸಿಂಗ್ ಸೆಲ್ಫೀ ಕ್ಯಾಮರಾ!

ಮೊದಲ ಶಾರ್ಕ್-ಫಿನ್ ರೈಸಿಂಗ್ ಸೆಲ್ಫೀ ಕ್ಯಾಮರಾ!

'ಒಪ್ಪೊ ರೆನೊ 10ಎಕ್ಸ್ ಝೂಮ್' ಸ್ಮಾರ್ಟ್‌ಫೋನಿನಲ್ಲಿ ಒಂದು ಆಸಕ್ತಿದಾಯಕ ವಿನ್ಯಾಸ ಅಂಶವಾಗಿರುವ 'ರೈಸಿಂಗ್ ಸೆಲ್ಫೀ ಕ್ಯಾಮರಾ' ಒಂದು ಅನನ್ಯ ಯಾಂತ್ರಿಕ ಉಪಸ್ಥಿತಿ ಎಂದು ಹೇಳಬಹುದು. 16MP ಮುಂಬಾಗ ಸೆಲ್ಫೀ ಕ್ಯಾಮೆರಾವು ಇದೇ ಮೊದಲ ಬಾರಿಗೆ 0.8 ಸೆಕೆಂಡ್ಸ್ ಫಾಸ್ಟ್ ರೈಸಿಂಗ್ ಸ್ಲೈಡರ್‌ ಆಗಿ ತೆರೆದುಕೊಳ್ಳುವ ವಿಶೇಷತೆಯನ್ನು ಹೊಂದಿದೆ. ಈ ರೈಸಿಂಗ್ ಸ್ಲೈಡರ್‌ನಲ್ಲೇ ಮುಂಭಾಗದ ಕ್ಯಾಮರಾ ಹಾಗೂ ಎಲ್ಇಡಿ ಫ್ಲ್ಯಾಷ್ ಅನ್ನು ನೀಡಲಾಗಿದೆ. ಇಂತಹ ವಿಶೇಷತೆಯನ್ನು ಹೊಂದಿರುವ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.

ಹೆಸರಾದಂತೆ 10x ಹೈಬ್ರಿಡ್ ಝೂಮ್ ಸಂಯೋಜನೆ!

ಹೆಸರಾದಂತೆ 10x ಹೈಬ್ರಿಡ್ ಝೂಮ್ ಸಂಯೋಜನೆ!

ಸ್ಮಾರ್ಟ್‌ಫೋನಿನ 48MP ಸಂವೇದಕ f / 1.7 ರ ದ್ಯುತಿರಂಧ್ರವು ಪ್ರತಿಕೂಲವಾದ ಸ್ಥಿತಿಯಲ್ಲಿ ಹೆಚ್ಚು ಬೆಳಕನ್ನು ಸೆರೆಹಿಡಿಯಬಲ್ಲದು. ಜೊತೆಗೆ ಕ್ಯಾಮರಾವು 5x ಪರಿದರ್ಶಕ ರಚನೆಯನ್ನು ಸಹ ಹೊಂದಿದೆ. ಇದರ ಒಳಗೆ ಟೆಲಿಫೋಟೋ ಮಸೂರವು 10x ಹೈಬ್ರಿಡ್ ಝೂಮ್ ಸಾಧಿಸಬಲ್ಲದು. ಈ 10x ಹೈಬ್ರಿಡ್ ಝೂಮ್ ನಿಮ್ಮ ಸ್ಥಳದಿಂದ ಚಲಿಸದೆ ದೂರದ ವಸ್ತುಗಳನ್ನು ನಿಖರವಾಗಿ ಚಿತ್ರಿಸಲು ಸಹಾಯವಾಗುತ್ತದೆ. ಹೀಗೆ ಚಿತ್ರ ಸ್ಥಿರೀಕರಣವನ್ನು ಉತ್ತಮಗೊಳಿಸುವಲ್ಲಿ AI ಎಂಜಿನ್ ಸಹಾಯ ಮಾಡುತ್ತದೆ ಮತ್ತು ಹಿನ್ನೆಲೆಗಳನ್ನು ಪ್ರತ್ಯೇಕವಾಗಿ ಸಂಸ್ಕರಿಸಲಾಗುತ್ತದೆ.

AMOLED

AMOLED

'ಒಪ್ಪೊ ರೆನೊ 10ಎಕ್ಸ್ ಝೂಮ್' ಸ್ಮಾರ್ಟ್‌ಫೋನಿನಲ್ಲಿ ಅತ್ಯಂತ ಕರಿದಾದ ಬೆಜೆಲ್‌ಗಳನ್ನು ಕಾಣಬಹುದಾಗಿದ್ದು, 6.6-ಇಂಚಿನ FHD + AMOLED ಡಿಸ್‌ಪ್ಲೇಯು ಮಲ್ಟಿಮೀಡಿಯಾ ವಿಷಯವನ್ನು ಆನಂದಿಸಲು ಸಹಕಾರಿಯಾಗಿದೆ. ಫೋನಿನ ಡಿಸ್‌ಪ್ಲೇ ತಂತ್ರಜ್ಞಾನ ಕೂಡ ಸಂಪೂರ್ಣವಾಗಿ ಪ್ರಾಬಲ್ಯವಿದೆ ಎಂದು ಹೇಳುವುದು ಒಂದು ಉತ್ಪ್ರೇಕ್ಷೆಯಾಗಿರುವುದಿಲ್ಲ. ಏಕೆಂದರೆ, . 19.5: 9 ರ ಅನುಪಾತದ ಪರದೆ-ದೇಹಕ್ಕೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ರಕ್ಷಣೆ. 10x ಜೂಮ್ನಲ್ಲಿ ನೀವು ತಲ್ಲೀನಗೊಳಿಸುವ ಮಲ್ಟಿಮೀಡಿಯಾ ಅನುಭವವನ್ನು ಆನಂದಿಸಬಹುದಾಗಿದೆ.

ಪ್ರೀಮಿಯಂ ಫೀಚರ್ಸ್ ನೀಡುವಲ್ಲಿ ರಾಜಿಯಾಗಿಲ್ಲ!

ಪ್ರೀಮಿಯಂ ಫೀಚರ್ಸ್ ನೀಡುವಲ್ಲಿ ರಾಜಿಯಾಗಿಲ್ಲ!

ಅಸಾಧಾರಣ ಪ್ರದರ್ಶನ ಮತ್ತು ಕ್ಯಾಮರಾ ಸಾಮರ್ಥ್ಯಗಳನ್ನು ಮತ್ತು ಆಶ್ಚರ್ಯಕರ ವಿನ್ಯಾಸವನ್ನು ಹೊಂದಿರುವ 'ಒಪ್ಪೊ ರೆನೊ 10ಎಕ್ಸ್ ಝೂಮ್' ಸ್ಮಾರ್ಟ್‌ಫೋನಿನ ಫೀಚರ್ಸ್ ವಿಷಯದಲ್ಲೂ ಕೂಡ ಕಂಪೆನಿ ರಾಜಿಯಾಗಿಲ್ಲ. ಓಕ್ಟಾ-ಕೋರ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್, 4,065 mAh ಬ್ಯಾಟರಿ, VOOC 3.0 ಫಾಸ್ಟ್ ಚಾರ್ಜಿಂಗ್, ಟ್ರಿಪಲ್ ಕೂಲಿಂಗ್ ಕಂಟ್ರೋಲ್ ಮತ್ತು ಆಧುನಿಕ ಸ್ಕ್ರೀನ್-ಫಿಂಗರ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಫೀಚರ್ಸ್ ಸ್ಮಾರ್ಟ್‌ಪೋನಿನ ಬೆಲೆಯನ್ನು ಹೆಚ್ಚಿಸಿವೆ. ಅತ್ಯುತ್ತಮ ದರ್ಜೆಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿ ಈ ಡಿವೈಸ್ ರೂಪುಗೊಂಡಿದೆ.

ಪರಿಪೂರ್ಣ ಸ್ಮಾರ್ಟ್‌ಪೋನ್ ಅತ್ಯುತ್ತಮ ಬೆಲೆಯಲ್ಲಿ!

ಪರಿಪೂರ್ಣ ಸ್ಮಾರ್ಟ್‌ಪೋನ್ ಅತ್ಯುತ್ತಮ ಬೆಲೆಯಲ್ಲಿ!

ಸಾಟಿಯಿಲ್ಲದ ಕ್ಯಾಮೆರಾ ಸಾಮರ್ಥ್ಯಗಳು, ಆಧುನಿಕ ಸ್ಕ್ರೀನ್-ಫಿಂಗರ್ ಫಿಂಗರ್ಪ್ರಿಂಟ್ ಸ್ಕ್ಯಾನರ್, ಪ್ರೀಮಿಯಂ ವಿನ್ಯಾಸ ಮತ್ತು ಶಕ್ತಿಯುತವಾದ ಕಾರ್ಯಕ್ಷಮತೆ ಹೊಂದಿರುವ 'ಒಪ್ಪೊ ರೆನೊ 10ಎಕ್ಸ್ ಝೂಮ್' ಸ್ಮಾರ್ಟ್‌ಫೋನಿನ ಬೆಲೆಯು ಪರಿಪೂರ್ಣ ಸ್ಮಾರ್ಟ್‌ಪೋನ್ ಅತ್ಯುತ್ತಮ ಬೆಲೆಯಲ್ಲಿ ಸಿಗುವಂತಿದೆ. ಶೈಲಿ ಮತ್ತು ತಂತ್ರಜ್ಞಾನದ ಮೇಲೆ ರಾಜಿ ಮಾಡಲು ಇಷ್ಟಪಡದ ಜನರಿಗೆ 'ಒಪ್ಪೊ ರೆನೊ 10ಎಕ್ಸ್ ಝೂಮ್' 8GB + 256GB ರೂ. 49,990. ಹಾಗೂ 6 ಜಿಬಿ + 128 ಜಿಬಿ ರೂ. 39,990.ಗಳಿಗೆ ಇದೀಗ ಪ್ರೀ ಬುಕ್ ಮಾಡಲು ಅವಕಾಶವಿದೆ.

Most Read Articles
Best Mobiles in India

English summary
OPPO Reno 10x Zoom is a perfect amalgamation of superior performance and mesmerizing design. The new camera design and the top-level hardware configuration make OPPO Reno 10x Zoom a must have. Let's find out why OPPO Reno 10x Zoom is the perfect smartphone for technology and photography enthusiasts. to know more visit

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more