Oppo Reno ಸರಣಿಯ ಫೋನ್ ಲಾಂಚ್: 512 GB ಸ್ಟೋರೇಜ್, ವಾವ್ ಎನಿಸುವ ಕ್ಯಾಮೆರಾ!
ಒಪ್ಪೋ (Oppo) ಕಂಪನಿಯು ಬಹುನಿರೀಕ್ಷಿತ Reno 12 ಸರಣಿಯ ಮೊಬೈಲ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪ್ರಸಿದ್ದ ರೆನೋ ಸರಣಿಯ ನೂತನ Oppo Reno 12 ಮತ್ತು Reno 12 pro ಸ್ಮಾರ್ಟ್‌ಫೋನ್‌ಗಳು ಜಾಗತಿಕವಾಗಿ ಅನಾವರಣಗೊಂಡಿವೆ. ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಮೊಬೈಲ್ 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ವೇರಿಯಂಟ್‌ನಲ್ಲಿ ಬಿಡುಗಡೆಯಾಗಿದೆ. ಇನ್ನೂ, Oppo Reno 12 ಸರಣಿಯು ಕಳೆದ ತಿಂಗಳು ಚೀನಾದಲ್ಲಿ ಲಾಂಚ್ ಆಗಿತ್ತು.
ಹೌದು, ಗ್ರಾಹಕರಿಗೆ ಭರವಸೆ ನೀಡಿದಂತೆ ಒಪ್ಪೋ ತನ್ನ Oppo Reno 12 ಮತ್ತು Reno 12 pro ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ Oppo Reno 12 ಮತ್ತು Reno 12 pro 5G ಮೊಬೈಲ್‌ಗಳು 6.7-ಇಂಚಿನ ಫುಲ್ HD+ AMOLED ಡಿಸ್‌ಪ್ಲೇ, MediaTek ಡೈಮೆನ್ಸಿಟಿ 7300 ಪ್ರೊಸೆಸರ್, 12 GB ವರೆಗೆ ಇಂಟರ್ನಲ್ RAM ಮತ್ತು 12 GB ವಿಸ್ತರಿಸಬಹುದಾದ ವರ್ಚುವಲ್ RAM ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಹೊಂದಿವೆ.

OPPO Reno 12, Reno 12 Pro ಫೀಚರ್ಸ್
Oppo Reno 12 ಮತ್ತು Reno 12 Pro 6.7 ಇಂಚಿನ FullHD+ (2412x1080 ಪಿಕ್ಸೆಲ್‌ಗಳು) ಡಿಸ್ಲ್ಪೇಯನ್ನು ಹೊಂದಿವೆ. Reno 12 OLED ಡ್ಯುಯಲ್ ಡಿಸ್ಲ್ಪೇ ಹೊಂದಿದ್ದರೆ, Reno 12 Pro 120Hzನ ರಿಫ್ರೆಶ್ ದರದೊಂದಿಗೆ ಬಾಗಿದ ಡಿಸ್ಲ್ಪೇ ಹೊಂದಿದೆ. ಡಿಸ್ಲ್ಪೇಯು 1200nits ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ. ಡಿಸ್ಲ್ಪೇ ರಕ್ಷಣೆಗಾಗಿ, ರೆನೋ 12 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಹೊಂದಿದ್ದರೆ, ರೆನೋ 12 ಪ್ರೊ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.
ಎರಡೂ ಫೋನ್‌ಗಳು ಆಕ್ಷಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಾಲಿತ 4nm ಪ್ರೊಸೆಸರ್ ಮತ್ತು ಗ್ರಾಫಿಕ್ಸ್‌ಗಾಗಿ Mali-G615 MC2 GPUನೊಂದಿಗೆ ಬರುತ್ತವೆ. Reno 12 ಫೋನ್ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದ್ದರೆ, Reno 12 Pro 12GB RAM ಮತ್ತು 512GB ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಬಹುದು. ಫೋನ್ Android 14 ಆಧಾರಿತ ColorOS 14.1 ನೊಂದಿಗೆ ಬರುತ್ತದೆ.
ವಾವ್ ಎನಿಸುವ ಕ್ಯಾಮೆರಾ ಸೆಟಪ್
ಈ ಮೊಬೈಲ್‌ಗಳ ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, Oppo Reno 12 ಫೋನ್ 50 MP ಪ್ರೈಮರಿ ಕ್ಯಾಮೆರಾ ಹೊಂದಿದೆ. Reno 12 ಅಪರ್ಚರ್ ಎಫ್/1.8, 8 ಮೆಗಾಪಿಕ್ಸೆಲ್ ಅಲ್ಮಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಹೊಂದಿದೆ. Reno 12 Pro 50 ಮೆಗಾಪಿಕ್ಸೆಲ್ ಪ್ರಾಥಮಿಕ, 8 ಮೆಗಾಪಿಕ್ಸೆಲ್ ಅಲ್ಟಾ- ವೈಡ್, 50 ಮೆಗಾಪಿಕ್ಸೆಲ್ 2x ಟೆಲಿಫೋಟೋ ಕ್ಯಾಮೆರಾ ಸೆನ್ಸಾರ್ ಜೊತೆಗೆ ಅಪರ್ಚರ್ F/1.8 ಹೊಂದಿದೆ.
Reno 12 ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಅಪರ್ಚರ್ F/2.0 ಜೊತೆಗೆ 32- ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಆದರೆ, Reno 12 Pro ಮೊಬೈಲ್ 50 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಅಪರ್ಚರ್ F/2.0 ಹೊಂದಿದೆ. Oppo Reno 12 ಮತ್ತು Oppo Reno 12 Pro ಸ್ಮಾರ್ಟ್‌ಫೋನ್‌ಗಳು ಇನ್ ಡಿಸ್ಲ್ಪೇ ಫಿಂಗರ್ ಪ್ರಿಂಟ್ ಸಂವೇದಕ ಮತ್ತು ಅತಿಗೆಂಪು ಸಂವೇದಕವನ್ನು ಹೊಂದಿವೆ.
ಈ ಫೋನ್‌ಗಳ ಬ್ಯಾಟರಿ ಬ್ಯಾಕಪ್ ಬೊಂಬಾಟ್
ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟೀರಿಯೊ ಸ್ಪೀಕರ್‌ಗಳನ್ನು ಸಾಧನದಲ್ಲಿ ನೀಡಲಾಗಿದೆ. ಧೂಳು ಮತ್ತು ಸ್ಮಾಶ್ ನಿರೋಧಕದಂತಹ ವೈಶಿಷ್ಟ್ಯಗಳು ಈ ಫೀನ್‌ನಲ್ಲಿ ಲಭ್ಯವಿದೆ. Oppoನ ಈ ಫೋನ್‌ಗಳಿಗೆ ಶಕ್ತಿ ನೀಡಲು, 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಒದಗಿಸಲಾಗಿದೆ. ಕನೆಕ್ಟಿವಿಟಿಗಾಗಿ ಮೊಬೈಲ್‌ನಲ್ಲಿ 5G, 4G VoLTE, Wi-Fi 802.11 AX, ಬ್ಲೂಟೂತ್ 5.4, GPS, GLONASS & USB -C ನಂತಹ ಸೌಲಭ್ಯಗಳನ್ನು ಪಡೆದಿದೆ.
OPPO Reno 12 ಮತ್ತು Reno 12 Pro ಬೆಲೆ
Oppo Reno 12 ಸ್ಮಾರ್ಟ್‌ಫೋನ್ ಆಸ್ಟೋ ಸಿಲ್ವರ್ ಮತ್ತು ಮ್ಯಾಟ್ ಬ್ರೌನ್ ಬಣ್ಣದಲ್ಲಿ ಬಿಡುಗಡೆಯಾಗಿದೆ. Reno 12ನ 12 GB RAM ಮತ್ತು 256 GB ಸ್ಟೋರೇಜ್ ರೂಪಾಂತರದ ಬೆಲೆ 44,660 ರೂ.(499 ಯುರೋ). Reno 12 Pro ಮೊಬೈಲ್ ನೆಬ್ಯುಲಾ ಸಿಲ್ವರ್ ಮತ್ತು ಸ್ಪೇಸ್ ಬ್ರೌನ್ ಬಣ್ಣಗಳಲ್ಲಿ ಬರುತ್ತದೆ. ಈ ಫೋನ್‌ನ 12GB RAM ಮತ್ತು 512GB ಸ್ಟೋರೇಜ್ ರೂಪಾಂತರದ ಬೆಲೆ 53,600 ರೂ.(599 ಯುರೋ).
ಒಟ್ನಲ್ಲಿ, ಒಪ್ಪೋ ತನ್ನ ಗ್ರಾಹಕರಿಗೆ ಬಜೆಟ್ ಸ್ನೇಹಿ ಫೋನ್‌ಗಳನ್ನು ನೀಡುತ್ತಲೇ ಬಂದಿದೆ. ಇದೀಗ ಅನಾವರಣಗೊಂಡಿರುವ Oppo Reno 12 ಮತ್ತು Oppo Reno 12 Pro ಫೋನ್‌ಗಳು ಜೂನ್‌ನಿಂದ ಯುರೋಪ್ ಮತ್ತು ಯುಕೆಯಲ್ಲಿ ಮಾರಾಟ ಪ್ರಾರಂಭವಾಗಲಿದೆ. ಕ್ರಮೇಣ ಎರಡೂ ಫೋನ್‌ಗಳು ಇತರ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿವೆ.


Click it and Unblock the Notifications








