Home
ಮೊಬೈಲ್

ಸುನಾಮಿ ಎಬ್ಬಿಸಿದ Oppo..! ಕಡೆಗೂ ಭಾರತಕ್ಕೆ ಬಂದೇಬಿಡ್ತು ಹೊಸ ಫೋನ್: ಜು.18ಕ್ಕೆ ಮಾರಾಟ

ಅಂತೂ ಇಂತೂ ಒಪ್ಪೋ ಅಭಿಮಾನಿಗಳ ಕಾಯುವಿಕೆ ಮುಗಿಯಿತು. ಒಪ್ಪೋ ಇಂದು ಭಾರತದಲ್ಲಿ ತನ್ನ ಬಹುನಿರೀಕ್ಷಿತ Reno 12 ಸರಣಿಯನ್ನು ಪ್ರಾರಂಭಿಸಿದೆ. ಈ ಸರಣಿಯ ಅಡಿಯಲ್ಲಿ ಎರಡು ಹೊಸ ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದುವೇ, Oppo Reno 12 5G ಮತ್ತು ಮತ್ತೊಂದು Oppo Reno 12 Pro 5G ಸ್ಮಾರ್ಟ್‌ಫೋನ್‌. ಈ ಎರಡೂ ಫೋನ್‌ಗಳು AI ಫೀಚರ್ಸ್‌ಗಳನ್ನು ಒಳಗೊಂಡಿವೆ. ಕಂಪನಿಯು ಈ ಫೋನ್‌ಗಳಲ್ಲಿ ಕ್ಯಾಮೆರಾ ಸೆಟಪ್‌ನಿಂದ ಸಾಫ್ಟ್‌ವೇರ್‌ವರೆಗೆ ಸಾಕಷ್ಟು AI ವೈಶಿಷ್ಟ್ಯಗಳನ್ನು ಅಳವಡಿಸಿದೆ. ಈ ಫೋನ್‌ನಲ್ಲಿ ಅದ್ಭುತ ವಿನ್ಯಾಸ, ಡಿಸ್ಲ್ಪೇ ಮತ್ತು ಅತ್ಯುತ್ತಮ AI ಕ್ಯಾಮೆರಾ ಸೆಟಪ್ ಲಭ್ಯವಿದೆ.

Oppo Reno 12 Pro 5G ಸ್ಮಾರ್ಟ್‌ಫೋನ್‌ ಬಹುತೇಕ Oppo Reno 12 5G ಪೋನಿನಲ್ಲಿರುವ ಫೀಚರ್ಸ್‌ಗಳನ್ನು ಹೊಂದಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ, 120Hz AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300-ಎನರ್ಜಿ ಚಿಪ್‌ಸೆಟ್ ಅನ್ನು ಹೊಂದಿದೆ. ಇನ್ನುಳಿದಂತೆ Oppo Reno 12 Pro 5Gನ ಬೆಲೆ ಎಷ್ಟು? ಫೀಚರ್ಸ್‌ಗಳೇನು? ಎನ್ನುವುದನ್ನು ಸಂಪೂರ್ಭವಾಗಿ ತಿಳಿಯೋಣ ಬನ್ನಿ.

ಸುನಾಮಿ ಎಬ್ಬಿಸಿದ Oppo..! ಕಡೆಗೂ ಬಂದೇಬಿಡ್ತು ಹೊಸ ಫೋನ್: ಜು.18ಕ್ಕೆ ಸೇಲ್

Oppo Reno 12 Pro 5G ಬೆಲೆ ಎಷ್ಟು?

ಕಂಪನಿಯು Oppo Reno 12 Pro 5G ಅನ್ನು ಎರಡು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಪರಿಚಯಿಸಿದೆ. 12+256GB ಮತ್ತು12+512GB ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 12+256GB ಮಾದರಿಯ ಬೆಲೆ 36,999 ರೂ.ನಿಂದ ಪ್ರಾರಂಭವಾಗಲಿದೆ. 12+512GB ರೂಪಾಂತರವು 40,999 ರೂ. ಬೆಲೆಯಲ್ಲಿ ಲಭ್ಯವಿದೆ. ನೀವು ಇದನ್ನು ಸ್ಪೇಸ್ ಬ್ರೌನ್ ಮತ್ತು ಸನ್‌ಸೆಟ್ ಗೋಲ್ಡ್ ಶೇಡ್‌ಗಳಲ್ಲಿ ಖರೀದಿಸಬಹುದು.

ಕಂಪನಿಯು Oppo Reno 12 Pro 5G ಫೋನ್‌ ಮೇಲೆ ಕೆಲವು ಲಾಂಚ್‌ ಆಫರ್‌ಗಳನ್ನು ಘೋಷಿಸಿದೆ. ಈ ಫೋನ್‌ ಖರೀದಿ ಮೇಲೆ ನೀವು 4,000 ರೂ. ವರೆಗಿನ ತ್ವರಿತ ಕ್ಯಾಶ್‌ಬ್ಯಾಕ್ ಮತ್ತು 9 ತಿಂಗಳ ನೋ ಕಾಸ್ಟ್ EMI ಸೌಲಭ್ಯವನ್ನು ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಜುಲೈ 18 ರಿಂದ ಅಧಿಕೃತವಾಗಿ ಮಾರಾಟವಾಗಲಿದೆ.

OPPO Reno12 Pro 5G ವಿಶೇಷತೆಗಳು

ಡಿಸ್ಲ್ಪೇ: ಈ ಫೋನ್‌ 6.7 ಇಂಚಿನ ಕ್ವಾಡ್ ಕರ್ವ್ಡ್ ಇನ್ಫೈನೈಟ್ ವ್ಯೂ ಡಿಸ್ಲ್ಪೇಯನ್ನು ಹೊಂದಿದೆ. ಇದು 120Hz AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಕಂಪನಿಯು ಈ ಫೋನ್‌ನಲ್ಲಿ 60/90/120Hz ವರೆಗೆ ಡೈನಾಮಿಕ್ ರಿಫ್ರೆಶ್ ದರದ ಸೌಲಭ್ಯವನ್ನು ಒದಗಿಸಿದೆ.

ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 7300-ಎನರ್ಜಿ ಚಿಪ್‌ಸೆಟ್ ಅನ್ನು ಈ ಫೋನ್‌ನಲ್ಲಿ ಪ್ರೊಸೆಸರ್‌ಗಾಗಿ ಬಳಸಲಾಗಿದೆ. ಇದು 4nm ಅತ್ಯಾಧುನಿಕ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಈ ಫೋನ್‌ನ ಈ ಚಿಪ್‌ಸೆಟ್ ಗ್ರಾಫಿಕ್ಸ್‌ಗಾಗಿ ಆರ್ಮ್ ಮೇಲ್-G615 GPU ನೊಂದಿಗೆ ಬರುತ್ತದೆ. ಇದರಿಂದಾಗಿ ಈ ಫೋನ್‌ನ ಗ್ರಾಫಿಕ್ಸ್ ದೃಶ್ಯಗಳು ಸಹ ಸಾಕಷ್ಟು ಅದ್ಭುತವಾಗಿ ಕಾಣುತ್ತವೆ.

ಕ್ಯಾಮೆರಾ: ಈ ಫೋನ್‌ನ ಮುಖ್ಯ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ 50MP Sony LYT-600 ಸಂವೇದಕದೊಂದಿಗೆ ಬರುತ್ತದೆ. ಈ ಫೋನ್‌ನ ಎರಡನೇ ಹಿಂಭಾಗದ ಕ್ಯಾಮೆರಾ 50MP Samsung S5KJN5 ಪೋಟ್ರೇಟ್ ಕ್ಯಾಮೆರಾ ಲೆನ್ಸ್‌ನೊಂದಿಗೆ ಬರುತ್ತದೆ. ಮೂರನೇ ಕ್ಯಾಮೆರಾವು 8MP ಸೋನಿ IMX355 ಸಂವೇದಕದ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಬರುತ್ತದೆ. Oppo ಈ ಫೋನ್‌ನಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 50MP ಫ್ರಂಟ್‌ ಕ್ಯಾಮೆರಾವನ್ನು ಒದಗಿಸಿದೆ. ಇದು ಆಟೋಫೋಕಸ್ ಮತ್ತು ಪೋಟ್ರೇಟ್ ಮೋಡ್ ಎರಡನ್ನೂ ಬೆಂಬಲಿಸುತ್ತದೆ.

ಸಾಫ್ಟ್‌ವೇರ್: ಈ ಫೋನ್ Android 14 ಆಧಾರಿತ ColorOS 14.1 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ OS 3 ವರ್ಷಗಳ OS ಅಪ್ಡೇಟ್‌ಗಳ ಗ್ಯಾರಂಟಿ ಮತ್ತು 4 ವರ್ಷಗಳ ಭದ್ರತಾ ಪ್ಯಾಚ್ ನವೀಕರಣಗಳೊಂದಿಗೆ ಬರುತ್ತದೆ.

ಬ್ಯಾಟರಿ: Reno12 Pro ಮೊಬೈಲ್ 161.5 x 74.8x 7.4mm ಅಳತೆ ಮತ್ತು 180 ಗ್ರಾಂ ತೂಕ ಹೊಂದಿದೆ. ಇದು 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಒಳಗೊಂಡಿದೆ.

ಕನೆಕ್ಟಿವಿಟಿ ಆಯ್ಕೆಗಳು: 5G SA/ NSA, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.4, GPS, ಗ್ಲೋನಾಸ್, ಗೆಲಿಲಿಯೋ, QZSS, USB ಟೈಪ್-ಸಿ ನಂತಹ ಸೌಲಭ್ಯಗಳನ್ನು ಪಡೆದಿದೆ.

Best Mobiles in India

English summary
Oppo Reno 12 Pro 5G were launched in India. The new flagship lineup runs on MediaTek Dimensity 7300-Energy chipsets and boasts AMOLED displays with up to 120Hz refresh rate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+