ಖುಷಿ ಸುದ್ದಿ! ಇಂದು Oppoನ ಎರಡು ಹೊಸ ಫೋನ್ ಲಾಂಚ್: ರಾಶಿ ಫೀಚರ್ಸ್, ಬೆಲೆ ಎಷ್ಟು?
ಒಪ್ಪೋ ಮೊಬೈಲ್ ಪ್ರಿಯರಿಗೆ ಖುಷಿ ಸುದ್ದಿ ಇದೆ. ಒಪ್ಪೋ ಕಂಪನಿಯ ಬಹುನಿರೀಕ್ಷಿತ Reno 12 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಇಂದು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಪ್ರಸಿದ್ದ ರೆನೋ ಸರಣಿಯ ನೂತನ Oppo Reno 12 ಮತ್ತು Reno 12 Pro ಮೊಬೈಲ್‌ಗಳನ್ನು ಭಾರತದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತದೆ. Reno12 ಸರಣಿಯು ಈಗಾಗಲೇ ಚೀನಾ ಮತ್ತು ಜಾಗತಿಕವಾಗಿ ಕಳೆದ ತಿಂಗಳು ಲೋಕಾರ್ಪಣೆಯಾಗಿದೆ.
Oppo Reno 12 ಸರಣಿಯು MediaTek ಚಿಪ್‌ಸೆಟ್, 120Hz AMOLED ಡಿಸ್ಪ್ಲೇ, ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ ಬ್ಯಾಟರಿ ಮತ್ತು ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳೊಂದಿಗೆ ಬಿಡುಗಡೆಯಾಗಲಿದೆ. Oppo Reno 12 ಫೋನ್ AI ಫೀಚರ್ಸ್‌ನೋಂದಿಗೆ ಲಾಂಚ್ ಆಗಲಿದೆ. ಇದನ್ನು ಈಗಾಗಲೇ 'Your Everyday AI Companion' ಎಂದು ಪ್ರಚಾರ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ಫೀಚರ್ಸ್‌ಗಳ ಬಗ್ಗೆ ತಿಳಿಯೋಣ ಬನ್ನಿ.

Oppo Reno 12 ಸರಣಿಯ ಭಾರತದಲ್ಲಿ ಬಿಡುಗಡೆ
ಇಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ Oppo Reno 12 ಸರಣಿಯ ಬಿಡುಗಡೆ ನಡೆಯಲಿದೆ. ಒಪ್ಪೋ ತನ್ನ YouTube ಚಾನಲ್‌ನ ಮೂಲಕ Reno 12 ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ಲೈವ್-ಸ್ಟ್ರೀಮ್ ಮಾಡುತ್ತಿದೆ. ನೇರಪ್ರಸಾದರ ವಿಡಿಯೋ ಲಿಂಕ್ ಕೆಳಗೆ ಇದೆ. ಆಸಕ್ತಿಯುಳ್ಳವರು ಇದನ್ನು ವೀಕ್ಷಿಸಬಹುದು.
Oppo Reno 12 ಸರಣಿಯ ಬೆಲೆ ಎಷ್ಟು?
ಜಾಗತಿಕ ಮಾರುಕಟ್ಟೆಗಳಲ್ಲಿ Oppo Reno 12 5G ಸ್ಮಾರ್ಟ್‌ಫೋನ್‌ನ 12+256GB ಸ್ಟೋರೇಜ್ ವೇರಿಯಂಟ್ ಸುಮಾರು 44,700 ರೂ. (EUR 499) ನಿಂದ ಪ್ರಾರಂಭವಾಗುತ್ತದೆ. Reno 12 Pro 5Gಯ 12+512 GB ಸ್ಟೋರೇಜ್ ಮಾದರಿ ಬೆಲೆ ಸುಮಾರು 53,600 ರೂ. (EUR 599) ಇದೆ.
ಭಾರತದಲ್ಲಿ Reno 12 35,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಪ್ರಾರಂಭವಾಗಲಿದೆ. Reno 12 Pro ಬೆಲೆ 45,000 ರೂ.ಗಿಂತ ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನೂ, Reno 11 ಭಾರತದಲ್ಲಿ 29,999 ರೂ.ಗಳ ಆರಂಭಿಕ ಬೆಲೆಗೆ ಬಿಡುಗಡೆಯಾಗಿತ್ತು ಮತ್ತು Reno 12 Pro 39,999 ರೂ.ನಿಂದ ಪ್ರಾರಂಭಿಸಲಾಗಿತ್ತು.
OPPO Reno 12 ಸರಣಿಯ ವಿಶೇಷತೆಗಳು
ಡಿಸ್‌ಪ್ಲೇ: OPPO Reno 12 ಮತ್ತು Reno 12 Pro 6.7-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. FHD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 1200nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ. ರೆನೋ 12 ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಆದರೆ, ರೆನೋ 12 ಪ್ರೊ ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಪಡೆದಿದೆ.

ಪ್ರೊಸೆಸರ್: ಎರಡೂ ಫೋನ್‌ಗಳು ಆಕ್ಷಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300-ಚಾಲಿತ 4nm ಪ್ರೊಸೆಸರ್ ಹೊಂದಿವೆ. ಗ್ರಾಫಿಕ್ಸ್‌ಗಾಗಿ Mali-G615 MC2 GPU ನೊಂದಿಗೆ ಬರುತ್ತವೆ. ಇದು 2.5GHz ಗಡಿಯಾರದ ವೇಗದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, Reno 11 Pro ಒಳಗೆ ಡೈಮೆನ್ಸಿಟಿ 8200 ಗರಿಷ್ಠ 3.1GHz ಆಗಿದೆ.
ಸಾಫ್ಟ್‌ವೇರ್: ಈ ಫೋನ್ Android 14 ಅನ್ನು ಆಧರಿಸಿ ColorOS 14.1 ಅನ್ನು ಪಡೆಯುವ ಸಾಧ್ಯತೆಯಿದೆ.
ಸ್ಟೋರೇಜ್: Reno 12 ಫೋನ್ 8+256GB ಸ್ಟೋರೇಜ್ ವೇರಿಯಂಟ್‌ನಲ್ಲಿ ಬರಬಹುದು. ಆದರೆ, ರೆನೋ 12 ಪ್ರೊ 12+256GB ಮತ್ತು 12+512GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿರುವ ಸಾಧ್ಯತೆಯಿದೆ.
ಕ್ಯಾಮೆರಾ: ಒಪ್ಪೋ ರೆನೋ 12 ಫೋನ್ 50MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 8MP (ಅಲ್ಟ್ರಾವೈಡ್), 2MP (ಮ್ಯಾಕ್ರೋ) ಟ್ರಿಪಲ್ ಮತ್ತು 32MP ಸೆಲ್ಫಿ ಶೂಟರ್ ಅನ್ನು ಒಳಗೊಂಡಿರಲಿದೆ. Reno 12 Pro ಮಾದರಿಯು 50MP (OIS), 8MP (ಅಲ್ಟ್ರಾವೈಡ್) ಮತ್ತು 50MP (ಟೆಲಿಫೋಟೋ) ಟ್ರೋಕಾವನ್ನು ಹೊಂದಿರಬಹುದು. ರೆನೋ ಪ್ರೊ 50 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ರೆನೋ 11 ಸರಣಿಯು ಎರಡೂ ಮಾದರಿಗಳಲ್ಲಿ ಒಂದೇ ರೀತಿಯ ಕ್ಯಾಮೆರಾಗಳನ್ನು ಹೊಂದಿತ್ತು. ಕಂಪನಿಯು ಈ ಬಾರಿ ಎರಡು ಮಾದರಿಗಳ ನಡುವೆ ಸ್ವಲ್ಪ ವ್ಯತ್ಯಾಸವನ್ನು ತರಲು ನಿರ್ಧರಿಸಿದೆ.
ಬ್ಯಾಟರಿ: ಬ್ಯಾಟರಿಯ ಗಾತ್ರ ಮತ್ತು ಚಾರ್ಜಿಂಗ್ ವೇಗವು ಎರಡೂ ರೂಪಾಂತರಗಳಲ್ಲಿ ಒಂದೇ ಇರಲಿದೆ. ಕಂಪನಿಯು ಈ ಫೋನ್‌ಗಳಲ್ಲಿ 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಅಳವಡಿಸಿದೆ.
ಕನೆಕ್ಟಿವಿಟಿ ಆಯ್ಕೆಗಳು: ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟೀರಿಯೊ ಸ್ಪೀಕರ್‌ಗಳನ್ನು ನೀಡಲಾಗಿದೆ. 5G, 4G VoLTE, Wi-Fi 802.11 AX, ಬ್ಲೂಟೂತ್ 5.4, GPS, GLONASS & USB -C ನಂತಹ ಸೌಲಭ್ಯಗಳನ್ನು ಪಡೆದಿರಲಿದೆ.


Click it and Unblock the Notifications








