Home
ಮೊಬೈಲ್

ಶೀಘ್ರದಲ್ಲೇ ಭಾರತದಲ್ಲಿ Oppo Reno 12 ಸರಣಿಯ ಸ್ಮಾರ್ಟ್‌ಫೋನ್ ಲಾಂಚ್ ! ಫಿಚರ್ಸ್‌ ಲೀಕ್

ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಾ ಬಂದಿರುವ ಒಪ್ಪೋ ಸಂಸ್ಥೆ, ಇದೀಗ Oppo Reno 12 Pro ಸ್ಟ್ಯಾಂಡರ್ಡ್ Reno 12 ಮಾದರಿಯೊಂದಿಗೆ ಶೀಘ್ರದಲ್ಲೇ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಳೆದ ತಿಂಗಳು ಚೀನಾದಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಈ ಹ್ಯಾಂಡ್‌ಸೆಟ್‌ಗಳು ಇತರ ಪ್ರದೇಶಗಳಲ್ಲಿಯೂ ಸಹ ಪಾದಾರ್ಪಣೆ ಮಾಡುತ್ತವೆ ಎಂದು ಕಂಪನಿಯು ಈಗ ದೃಢಪಡಿಸಿದೆ. ಆದರೆ ನಿಖರವಾದ ಲಾಂಚ್‌ ಸಮಯವನ್ನು ಕಂಪನಿ ಇನ್ನೂ ದೃಢಪಡಿಸಿಲ್ಲ. ರೆನೋ 12 ಸರಣಿಯಲ್ಲಿನ ಎರಡೂ ಫೀಚರ್ಸ್‌ ಟಿಪ್‌ಸ್ಟರ್‌ನಲ್ಲಿ ಸೋರಿಕೆಯಾಗಿವೆ.

ವದಂತಿ ಆಧಾರದಲ್ಲಿ Oppo Reno 12 Pro, Reno 12 ವಿನ್ಯಾಸ:

ಈ ಸ್ಮಾರ್ಟ್‌ಫೋನ್‌ಗಳ ಕುರಿತು ಟಿಪ್‌ಸ್ಟರ್‌ನ ಸುಧಾಂಶು ಅಂಬೋರ್‌ನಿಂದ ಮಾಹಿತಿ ಸೋರಿಕೆ ಮಾಡಿದ್ದು, ಮೇ 23ರಂದು ಚೀನಾಕ್ಕೆ ಆಗಮಿಸಿದ ಮಾದರಿಗಳಿಗೆ ಈ ಫೋನ್‌ಗಳು ಹೋಲುತ್ತವೆ. ಪ್ರಮಾಣಿತ ವೇರಿಯಂಟ್‌ ಎಡ ಮತ್ತು ಬಲ ಅಂಚುಗಳಲ್ಲಿ ಬಾಗಿದ ಡಿಸ್‌ಪ್ಲೇಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಒಪ್ಪೋ ರೆನೋ 12 ನ ಚೈನೀಸ್ ರೂಪಾಂತರವು ರೆನೋ 12 Pro ಮಾದರಿಯಂತೆಯೇ 4 ಬಾಗಿದ ಅಂಚುಗಳೊಂದಿಗೆ ಸೇಮ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ತಿಳಿದು ಬಂದಿದೆ.

ಟಿಪ್‌ಸ್ಟರ್‌ನಿಂದ ಸೋರಿಕೆಯಾದ ರೆಂಡರ್‌ಗಳ ಪ್ರಕಾರ ಈ ಹ್ಯಾಂಡ್‌ಸೆಟ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿರಲಿವೆ ಮತ್ತು ಫ್ಲಾಟ್ ಎಡ್ಜ್‌ಗಳನ್ನು ಒಳಗೊಂಡಿರುತ್ತವೆ ಎಂದು ಸೂಚಿಸುತ್ತದೆ. ವಾಲ್ಯೂಮ್ ಮತ್ತು ಪವರ್ ಬಟನ್‌ಗಳನ್ನು ಫೋನ್‌ನ ಬಲ ತುದಿಯಲ್ಲಿ ತೋರಿಸಲಾಗಿದೆ. ಸೋರಿಕೆಯಾಗಿರುವ ಚಿತ್ರಗಳು ಫೋನ್ ಅನ್ನು ಚೀನಾದಲ್ಲಿ ಪ್ರಾರಂಭಿಸಲಾದ ಮೂರು ಬಣ್ಣಗಳ ಪೈಕಿ ಎರಡು ಬಣ್ಣಗಳಲ್ಲಿ ತೋರಿಸಲಾಗಿದೆ.

ಶೀಘ್ರದಲ್ಲೇ ಭಾರತದಲ್ಲಿ Oppo Reno 12 ಸರಣಿಯ ಸ್ಮಾರ್ಟ್‌ಫೋನ್ ಲಾಂಚ್ !

ವದಂತಿ ಪ್ರಕಾರ Oppo Reno 12 Pro, Reno 12 ವಿಶೇಷತೆಗಳು:

ಟಿಪ್‌ಸ್ಟರ್ ಹಂಚಿಕೊಂಡಿರುವ ಸೋರಿಕೆಯಾದ ಮಾಹಿತಿಯ ಪ್ರಕಾರ ಒಪ್ಪೋ ರೆನೋ 12 ಹ್ಯಾಂಡ್‌ಸೆಟ್‌ಗಳು 6.7 ಇಂಚಿನ ಫುಲ್ HD+ (1,080x2,412 ಪಿಕ್ಸೆಲ್‌ಗಳು) 3D ಅಮೋಲ್ಡ್‌ ಸ್ಕ್ರೀನ್‌ ಜೊತೆಗೆ ರಿಫ್ರೆಶ್ ದರದೊಂದಿಗೆ ಮತ್ತು 1,200nits ಗರಿಷ್ಠ ಬ್ರೈಟ್‌ನೆಸ್‌ ಹೊಂದಿರಲಿದೆ. ಈ ಎರಡೂ ಮಾದರಿಯಲ್ಲಿ ಕ್ರಮವಾಗಿ ಕಾರ್ನಿಂಗ್‌ನ ಗೊರಿಲ್ಲಾ ಗ್ಲಾಸ್ 7i ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿವೆ.

ಈ ಎರಡೂ ಡಿವೈಸ್‌ಗಳನ್ನು Mali G615 GPU ಜೊತೆಗೆ MediaTek ಡೈಮನ್ಸಿಟಿ, 7300 ಎನರ್ಜಿ SoC ಯಿಂದ ನಿಯಂತ್ರಿಸಲಾಗುತ್ತದೆ, 12GB ಯ LPDDR4X RAM ಮತ್ತು 512GB ವರೆಗಿನ UFS 3.1 ಸ್ಟೋರೇಜ್‌ ಜೊತೆಗೆ ಜೋಡಿಸಲಾಗಿದೆ. ಫೋನ್‌ಗಳು ಆಂಡ್ರಾಯ್ಡ್ 14 ಆಧಾರಿತ ColorOS 14.1 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ. ಹ್ಯಾಂಡ್‌ಸೆಟ್‌ಗಳು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಹೊಂದಿವೆ ಎಂದು ಹೇಳಲಾಗುತ್ತದೆ.

ಈ ಎರಡೂ ಹ್ಯಾಂಡ್‌ಸೆಟ್‌ಗಳು ಸೋನಿ LYT-600 ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ 50 MP ಪ್ರಾಥಮಿಕ ಕ್ಯಾಮೆರಾ ಮತ್ತು IMX355 ಸೆನ್ಸಾರ್ 8 MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಒಳಗೊಂಡಿರುತ್ತವೆ. ಸ್ಟ್ಯಾಂಡರ್ಡ್ ಮಾದರಿಯು 2MP ಮ್ಯಾಕ್ರೋ ಕ್ಯಾಮೆರಾ ಮತ್ತು 32MP ಮುಂಭಾಗದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ, ಆದರೆ ಪ್ರೊ ಮಾದರಿಯು 50MP ಟೆಲಿಫೋಟೋ ಕ್ಯಾಮೆರಾ ಮತ್ತು 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಈ ಎರಡೂ ಡಿವೈಸ್‌ಗಳೂ ಕೂಡ 5,000mAH ಬ್ಯಾಟರಿಯೊಂದಿಗೆ ಸಜ್ಜುಗೊಂಡಿದೆ ಮತ್ತು 80W SuperVOOC ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರಲಿವೆ ಮತ್ತು 46 ನಿಮಿಷಗಳಲ್ಲಿ ಶೂನ್ಯದಿಂದ 100 ಪ್ರತಿಶತದವರೆಗೆ ಚಾರ್ಜ್ ಮಾಡುತ್ತದೆ ಎಂದು ಸೋರಿಕೆಯಾದ ವಿವರಣೆಯು ಬಹಿರಂಗಪಡಿಸುತ್ತದೆ.

Best Mobiles in India

English summary
Information has leaked that Oppo will soon launch its Oppo Reno 12 series of smartphones globally
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+