Home
ಮೊಬೈಲ್

ಜೂನ್ 18 ರಂದು ಜಾಗತಿಕವಾಗಿ Oppo Reno 12 ಮೊಬೈಲ್ ಲಾಂಚ್; ಫೀಚರ್ಸ್‌ ತಿಳಿಯಿರಿ

ಬಜೆಟ್‌ ಸ್ನೇಹಿ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುವ ಒಪ್ಪೋ ಸಂಸ್ಥೆ ಜಾಗತಿಕ ಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶೇಷ ಬೇಡಿಕೆ ಹೊಂದಿದೆ. ಇದೀಗ ಒಪ್ಪೋ (Oppo) ತನ್ನ ಗ್ರಾಹಕರಿಗಾಗಿ ತನ್ನ ಪ್ರಸಿದ್ದ ರೆನೋ ಸರಣಿಯ ನೂತನ ಸ್ಮಾರ್ಟ್‌ಫೋನ್‌ ಒಂದನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಸಿದ್ದವಾಗಿದೆ. Oppo ತನ್ನ Reno 12 ಸರಣಿಯ ಮೊಬೈಲ್‌ ಅನ್ನು ಜಾಗತಿಕವಾಗಿ ಅನಾವರಣಗೊಳಿಸಲು ಸಜ್ಜಾಗಿದೆ. Oppo Reno 12 ಸರಣಿಯನ್ನು ಈಗಾಗಲ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದೀಗ ಜಾಗತಿಕವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ.

Oppo Reno 12 ಸರಣಿಯು MediaTek ಚಿಪ್‌ಸೆಟ್‌, ರೋಮಾಂಚಕ OLED ಡಿಸ್‌ಪ್ಲೇ, ಟ್ರಿಪಲ್ ಕ್ಯಾಮೆರಾ ಸೆಟಪ್‌ಗಳು, ಹೈ ರೆಸ್ ಸೆಲ್ಫಿ ಕ್ಯಾಮೆರಾಗಳು ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ ಗಾತ್ರದ ಬ್ಯಾಟರಿಯನ್ನು ಒಳಗೊಂಡಿದೆ.

ಜೂನ್ 18 ರಂದು ಜಾಗತಿಕವಾಗಿ Oppo Reno 12 ಮೊಬೈಲ್ ಲಾಂಚ್

Oppo Reno 12 Series ಜಾಗತಿಕ ಬಿಡುಗಡೆ: ಚೀನಾದಲ್ಲಿ ಈಗಾಗಲೆ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ ಅನ್ನು ಜೂನ್ 18 ರಂದು ಸ್ಪೇನ್‌ನ ಇಬಿಜಾದಲ್ಲಿ ಜಾಗತಿಕವಾಗಿ ಲಾಂಚ್ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ. Reno 12 ಸರಣಿಯ ಟೀಸರ್‌ನ ಅಧಿಕೃತ ಪೋಸ್ಟರ್ Reno 12 ಸರಣಿಯು ಕೆಲವು AI ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಸಿದೆ. ರೆನೋ 12 ಸರಣಿಯು AI ಪೋರ್ಟ್ರೇಟ್ ಮತ್ತು AI ಲಿಂಕ್‌ ಬೂಸ್ಟ್ ಅನ್ನು ನೀಡುತ್ತದೆ ಎಂದು ಅಧಿಕೃತ ವೆಬ್‌ಸೈಟ್ ಖಚಿತಪಡಿಸಿದೆ. ಭಾರತದಲ್ಲಿ ಈ ಮೊಬೈಲ್‌ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

Oppo Reno 12 ಸರಣಿಯ ಫೀಚರ್ಸ್:

ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8250 (ಸ್ಟಾರ್ ಎಡಿಷನ್) ಚಿಪ್‌ಸೆಟ್‌ನಿಂದ 16GB ವರೆಗೆ LPDDR5X RAM ಮತ್ತು 512GB ವರೆಗಿನ UFS 3.1 ಸ್ಟೋರೆಜ್ ಜೊತೆಗೆ ಜೋಡಿಸಲ್ಪಟ್ಟಿದೆ. ಇದರ 16GB ಯ LPDDR5X RAM ಮತ್ತು 512GB ವರೆಗಿನ UFS 3.1 ಸಂಗ್ರಹಣೆಯ ವೇರಿಯಂಟ್ MediaTek ಡೈಮೆನ್ಸಿಟಿ 9200+ (ಸ್ಟಾರ್ ಎಡಿಷನ್) ಚಿಪ್ ಅನ್ನು ಹೊಂದಿದೆ.

ಈ ಸರಣಿಯು 6.7-ಇಂಚಿನ ಫುಲ್ HD+ OLED ಡಿಸ್‌ಪ್ಲೇ 1,200 nits ನ ಗರಿಷ್ಠ ಬ್ರೈಟ್ನೆಸ್‌ ಹೊಂದಿದೆ. ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಮಾದರಿಯ ದರವನ್ನು ಬೆಂಬಲಿಸುತ್ತದೆ. ಫಲಕವು HDR10+ ಅನ್ನು ಬೆಂಬಲಿಸುತ್ತದೆ, ಹಾರ್ಡ್‌ವೇರ್ ಮಟ್ಟದಲ್ಲಿ ಬ್ಲೂ ಲೈಟ್ ಕಡಿತ ಮತ್ತು 2160Hz ಹೆಚ್ಚಿನ ಆವರ್ತನ PWM ಬ್ಲರ್ ಮಾಡುವ ಸಾಮರ್ಥ್ಯ ಹೊಂದಿದೆ.

ಜೊತೆಗೆ ಈ ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಬ್ಯಾಟರಿಯನ್ನು ಹೊಂದಿದೆ. 4G, 5G, Wi-Fi 6, ಬ್ಲೂಟೂತ್ 5.4, NFC, USB ಟೈಪ್-C ಪೋರ್ಟ್ ಮತ್ತು ಹೆಚ್ಚಿನ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ. ಮುಂಭಾಗದಲ್ಲಿ, Reno 12 ಸರಣಿಯು ಆಟೋಫೋಕಸ್ ಮತ್ತು f/2.0 ದ್ಯುತಿರಂಧ್ರದೊಂದಿಗೆ 50 MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ಕ್ಯಾಮೆರಾಕ್ಕಾಗಿ Oppo Reno 12 ಮತ್ತು Reno 12 Pro ಎರಡೂ ಕೂಡ OIS ಮತ್ತು f/1.8 ದ್ಯುತಿರಂಧ್ರದೊಂದಿಗೆ 50 MP ಪ್ರಾಥಮಿಕ ಸೆನ್ಸಾರ್ ಹೊಂದಿವೆ. ಎರಡೂ ಫೋನ್‌ಗಳು 8 MP ಅಲ್ಟ್ರಾವೈಡ್ ಶೂಟರ್‌ಗಳನ್ನು ಮತ್ತು 50 MP ಟೆಲಿಫೋಟೋ ಘಟಕಗಳನ್ನು f/2.0 ದ್ಯುತಿರಂಧ್ರದೊಂದಿಗೆ ಹೊಂದಿವೆ. ಎರಡೂ ಫೋನ್‌ಗಳು 60fps ವರೆಗೆ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತವೆ. Oppo Reno 12 ಸರಣಿಯು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸಹ ಹೊಂದಿವೆ.

Best Mobiles in India

English summary
Oppo is all set to unveil its Reno 12 series mobile globally. Oppo Reno 12 series was launched in China last month. It is now set for a global release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+