Oppo: ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಒಪ್ಪೋ ರೆನೋ 12 !; ಫೀಚರ್ಸ್ ತಿಳಿಯಿರಿ
ಕಡಿಮೆ ವಚ್ಚದಲ್ಲಿ ಅತ್ಯತ್ತಮ ಗುಣಮಟ್ಟದ ಸ್ಮಾರ್ಟ್‌ಫೂನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿರುವ ಒಪ್ಪೋ (Oppo) ಸಂಸ್ಥೆ ಇದೀಗ ರೆನೋ 12(Reno) ಸರಣಿಯ ನೂತನ ಸ್ಮಾರ್ಟ್‌ಫೋನ್ ಒಂದನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಸಿದ್ದತೆ ಮಾಡಿಕೊಂಡಿದೆ ಎಂಬ ವರದಿ ಬೆಳಕಿಗೆ ಬಂದಿದೆ, ಹಾಗಿದ್ರೆ ಬನ್ನಿ ಈ ರೆನೋ ಸರಣಿಯ ನೂತನ ಸ್ಮಾರ್ಟ್‌ಫೋನ್‌ನ ಬೆಲೆ ಎಷ್ಟಿದೆ ಫೀಚರ್ಸ್ ಏನಿದೆ ಎಂಬ ಸಂಪೂರ್ಣ ವರದಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಕಳೆದ ತಿಂಗಳು ಚೀನಾದಲ್ಲಿ ಒಪ್ಪೋ ಸಂಸ್ಥೆ ರೆನೋ 12 ಸರಣಿಯನ್ನು ನೂತನ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಿತ್ತು. ಇದೀಗ ಶೀಘ್ರದಲ್ಲೇ ಹೊಸ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ತರಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ ಕಾಣುತ್ತಿದೆ. ಈಗಾಗಲೇ ಗ್ರಾಹಕರು ಈ ಮೊಬೈಲ್‌ಗಾಗಿ ವಿವಿಧ ಸೈಟ್‌ಗಳಿಗೆ ಭೇಟಿ ನೀಡಿ ಹುಡುಕಲು ಪ್ರಾರಂಭಿಸಿದ್ದಾರೆ. ಈಗ, ರೆನೋ 12 ರ ಜಾಗತಿಕ ರೂಪಾಂತರವನ್ನು ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (ಎಫ್‌ಸಿಸಿ) ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದೆ, ಇದು ಫೋನ್‌ನ ಲೈವ್ ಚಿತ್ರಗಳನ್ನು ಹಂಚಿಕೊಂಡಿದೆ.

ಒಪ್ಪೋ ರೆನೋ 12 5G (Oppo Reno 12 5G) ಈ ಸ್ಮಾರ್ಟ್‌ಫೋನ್ ಎಫ್‌ಸಿಸಿ ಪ್ರಮಾಣೀಕರಣದಲ್ಲಿ ಗುರುತಿಸಲ್ಪಟ್ಟಿದ್ದು, ಇದರ ಲೈವ್ ಚಿತ್ರಗಳು (MySmartPrice ಮೂಲಕ ಗುರುತಿಸಲ್ಪಟ್ಟಿದೆ) ರೆನೋ 12 ಜಾಗತಿಕ ರೂಪಾಂತರವು ಚೈನೀಸ್ ರೂಪಾಂತರದಂತೆ ಇರಲಿದೆ ಎಂದು ಸೂಚಿಸಿದೆ. ಇದರ ಹೊರತಾಗಿಯೂ ಈ ಸ್ಮಾರ್ಟ್‌ಫೋನ್ ಕೆಲವು ವ್ಯತ್ಯಾಸಗಳನ್ನು ಹೊಂದಿರಬಹುದು ಎಂದು ತಿಳಿಸಿದೆ.
ಗೀಕ್‌ಬೆಂಚ್ ಬೆಂಚ್‌ಮಾರ್ಕ್ ಡೇಟಾಬೇಸ್‌ನ ಪ್ರಕಾರ, ಚೀನಾ ಮಾದರಿಯಲ್ಲಿ ಕಾಣಿಸಿಕೊಂಡಿರುವ ಮೀಡಿಯಾ ಟೆಕ್ ಡೈಮೆನ್ಸಿಟಿ 8250 ಸ್ಟಾರ್ ಸ್ಪೀಡ್ ಎಡಿಷನ್ ಪ್ರೊಸೆಸರ್‌ಗೆ ಬದಲಾಗಿ ಜಾಗತಿಕ ರೂಪಾಂತರವು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ಚಾಲಿತವಾಗಿರಲಿದೆ ಎಂದು ತಿಳಿಸಿದೆ.
ಒಪ್ಪೋ ರೆನೋ 12 ಜಾಗತಿಕ ರೂಪಾಂತರ ಎಫ್‌ಸಿಸಿ ಪಟ್ಟಿ ಬಹಿರಂಗಪಡಿಸಿರುವಂತೆ ಎಐ ಕ್ಯಾಮೆರಾ ಸಾಮರ್ಥ್ಯದ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ. ಇದಲ್ಲದೆ ಫೋನ್ 4,880 mAh ಬ್ಯಾಟರಿಯೊಂದಿಗೆ 80W ಸೂಪರ್ VOOC ಚಾರ್ಜರ್ ಬೆಂಬಲ ಪಡೆದಿರಲಿದೆ ಎಂದು ಹೇಳಲಾಗಿದೆ.
ಇದಲ್ಲದೆ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಅನ್ನು ಆಧರಿಸಿದ ಕಲರ್ OS 14.1 ಮೂಲಕ ರನ್ ಆಗಲಿದೆ ಎಂದು ಎಫ್‌ಸಿಸಿ ಪಟ್ಟಿ ಸೂಚಿಸಿದೆ. ಇದು ಡ್ಯುಯಲ್ ಬ್ಯಾಂಡ್ ವೈಫೈ ( Wi-Fi), ಬ್ಲೂಟೂತ್, NFC ಮತ್ತು 5G ನೆಟ್‌ವರ್ಕ್ ಅನ್ನು ಬೆಂಬಲಿಸಲಿದೆ. ಕ್ಯಾಮರಾ ರೆಸಲ್ಯೂಶನ್, ಸ್ಟೋರೇಜ್ ಕಾನ್ಫಿಗರೇಶನ್‌ಗಳು ಮತ್ತು ಡಿಸ್‌ಪ್ಲೇಯಂತಹ ಇತರ ವೈಶಿಷ್ಟ್ಯಗಳ ಇನ್ನೂ ಕೂಡ ಮಾಹಿತಿ ಸಿಗಬೇಕಿದೆ.
ಒಪ್ಪೋ ರೆನೋ 12 5G (Oppo Reno 12 5G) ಸ್ಮಾರ್ಟ್‌ಫೋನ್ ಚೈನೀಸ್ ರೂಪಾಂತರವು 6.7 ಇಂಚಿನ ಬಾಗಿದ OLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದೆ. ಇದು ಧೂಳು ಮತ್ತು ನೀರಿನ ರಕ್ಷಣೆಗಾಗಿ IP65 ರೇಟಿಂಗ್ ಹೊಂದಿದೆ. ಇದು 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಸೆನ್ಸಾರ್ ಮತ್ತು 50MP ಟೆಲಿಫೋಟೋ ಸೆನ್ಸಾರ್ ಹೊಂದಿದೆ. ಈಗ, ಫೋನ್‌ನ ಜಾಗತಿಕ ರೂಪಾಂತರವು ಚೈನೀಸ್ ರೂಪಾಂತರದಂತೆಯೇ ಇರಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದಲ್ಲದೆ, ರೆನೋ 12 5G (Reno 12 5G) BIS ಪ್ರಮಾಣೀಕರಣ ಪಡೆದುಕೊಂಡಿದೆ, ಇದು ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿರುವ ಸುಳಿವು ನೀಡಿದ್ದು, ಭಾರತ ಸೇರಿದಂತೆ ಜಾಗತಿಕವಾಗಿ ಏಕ ಕಾಲದಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ


Click it and Unblock the Notifications








