Home
ಮೊಬೈಲ್

ಇಂದು OPPO Reno 13 ಫಸ್ಟ್ ಸೇಲ್; 3999 ರಿಯಾಯಿತಿ.. ಬೆಲೆ, ವಿಶೇಷತೆಗಳೇನು?

ಒಪ್ಪೋ ಇತ್ತೀಚೆಗೆ ಭಾರತದಲ್ಲಿ ಬಹುನಿರೀಕ್ಷಿತ ಒಪ್ಪೋ ರೆನೋ 13 5G (OPPO Reno 13 5G) ಫೋನನ್ನು ಬಿಡುಗಡೆ ಮಾಡಿದೆ. ಇದನ್ನು ಒಪ್ಪೋ ರೆನೋ 13 (OPPO Reno 13 Series 5G) ಸರಣಿಯ ಅಡಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅಂದಹಾಗೆ, ಈ ಮೊಬೈಲ್ ಇಂದಿನಿಂದ (ಜನವರಿ 11) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಇದನ್ನು ಮಧ್ಯಮ ಶ್ರೇಣಿಯ ಬಜೆಟ್‌ನಲ್ಲಿ ಲಾಂಚ್ ಮಾಡಲಾಗಿದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಒಪ್ಪೋ ರೆನೋ 13 ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್‌ 6.59 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 8350 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 + 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 5600mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಆಫರ್‌ ಬೆಲೆ ತಿಳಿಯಲು ಮುಂದೆ ಓದಿ.

ಇಂದು OPPO Reno 13 ಫಸ್ಟ್ ಸೇಲ್; 3999 ರಿಯಾಯಿತಿ.. ಬೆಲೆ, ವಿಶೇಷತೆಗಳೇನು?

ಒಪ್ಪೋ ರೆನೋ 13: ಟಾಪ್ 5 ಫೀಚರ್ಸ್

ಡಿಸ್ಪ್ಲೇ ಹೇಗಿದೆ

ಒಪ್ಪೋ ರೆನೋ 13 5G ಸ್ಮಾರ್ಟ್‌ಫೋನ್ 6.59 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್‌ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2760 x 1256 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಯಾವುದು?

ಒಪ್ಪೋ ರೆನೋ 13 5G ಮೊಬೈಲ್ ಮೀಡಿಯಾಟೆಕ್‌ ಡೈಮೆನ್ಸಿಟಿ 8350 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ColorOS 15.0 ಜೊತೆಗೆ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್

ಒಪ್ಪೋ ರೆನೋ 13 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ OIS ಮತ್ತು ಎಲ್‌ಇಡಿ ಫ್ಲ್ಯಾಷ್ ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ದೊಡ್ಡ ಬ್ಯಾಟರಿ

ಒಪ್ಪೋ ರೆನೋ 13 5G ಮೊಬೈಲ್ 5600mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇಂದು OPPO Reno 13 ಫಸ್ಟ್ ಸೇಲ್; 3999 ರಿಯಾಯಿತಿ.. ಬೆಲೆ, ವಿಶೇಷತೆಗಳೇನು?

ಇತರೆ ವೈಶಿಷ್ಟ್ಯಗಳು

ಒಪ್ಪೋ ರೆನೋ 13 5G ಸ್ಮಾರ್ಟ್‌ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿದ IP66 + IP68 + IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ ಯುಎಸ್‌ಬಿ ಟೈಪ್ ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಒಪ್ಪೋ ರೆನೋ 13 5G ಬೆಲೆ ಮತ್ತು ಆಫರ್‌ಗಳು

ಒಪ್ಪೋ ರೆನೋ 13 5G ಫೋನನ್ನು ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವು 37,999 ರೂ.ಗೆ ಮಾರಾಟವಾಗಲಿದೆ. ಹಾಗೆಯೇ 8GB RAM + 256GB ಸ್ಟೋರೇಜ್ ವೇರಿಯಂಟ್ 39,999 ರೂ.ಗೆ ಲಭ್ಯವಿದೆ. ಈ ಮೊಬೈಲ್ ಇಂದು (ಜನವರಿ 11) ಮಧ್ಯಾಹ್ನ 12 ಗಂಟೆಗೆ ಮೊದಲ ಮಾರಾಟ ಶುರು ಮಾಡಲಿದೆ.

ಕಂಪನಿಯು ಮೊದಲ ಮಾರಾಟದ ಪ್ರಯುಕ್ತ 128GB ರೂಪಾಂತರದ ಮೇಲೆ 3,799 ರೂ. ಮತ್ತು 256GB ರೂಪಾಂತರದ ಮೇಲೆ 3,999 ರೂ. ರಿಯಾಯಿತಿ ನೀಡುತ್ತದೆ. ಎಸ್‌ಬಿಐ, ಎಚ್‌ಡಿಎಫ್‌ಸಿವಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ 9 ತಿಂಗಳವರೆಗೆ ನೋ ಕಾಸ್ಟ್‌ ಇಎಂಐ ಆಯ್ಕೆ ಸಹ ಲಭ್ಯವಿದೆ. ನೀವು ಈ ಫೋನನ್ನು ಐವರಿ ವೈಟ್ ಮತ್ತು ಲುಮಿನಸ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು.

Best Mobiles in India

English summary
Oppo Reno 13 5G Goes on First Sale in India Today via Flipkart: Check Price and Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+