OPPO Reno 13 ಸರಣಿ ಬಿಡುಗಡೆಗೆ ಮುಹೂರ್ತ ಫಿಕ್ಸ್; ಬರಲಿವೆ 2 ಸೊಗಸಾದ ಫೋನ್.. ಬೆಲೆ, ವಿಶೇಷತೆಗಳೇನು?
ಒಪ್ಪೋ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಕಂಪನಿಯು ತನ್ನ ಬಹುನಿರೀಕ್ಷಿತ ರೆನೋ 13 (OPPO Reno 13) ಸರಣಿಯ ಭಾರತದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಹೌದು, ಈ ಸರಣಿಯ ಅಡಿಯಲ್ಲಿ ಒಪ್ಪೋ ರೆನೋ 13 (OPPO Reno 13) ಮತ್ತು ಒಪ್ಪೋ ರೆನೋ 13 ಪ್ರೊ (OPPO Reno 13 Pro) ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಬನ್ನಿ, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಕಂಪನಿಯು ತನ್ನ ಹೊಸ ಒಪ್ಪೋ ರೆನೋ 13 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದಾಗಿನಿಂದ, ಮೊಬೈಲ್ ಪ್ರಿಯರು ಈ ಫೋನ್‌ಗಳಲ್ಲಿ ಕಾಯುತ್ತಿದ್ದಾರೆ. ಇದೀಗ, ತನ್ನ ಅಭಿಮಾನಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಲು ಸಜ್ಜಾಗಿದ್ದು, ಹೊಸ ಸರಣಿಯ ಬಿಡುಗಡೆ ದಿನಾಂಕವನ್ನು ಸಹ ಪ್ರಕಟಿಸಿದೆ. ಈ ಫೋನ್ ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದೆ. ಇದು ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಒಪ್ಪೋ ರೆನೋ 13 ಸರಣಿಯ ಬೆಲೆಯನ್ನು ತಿಳಿಯಲು ಮುಂದೆ ಓದಿ.

ಒಪ್ಪೋ ರೆನೋ 13 ಸರಣಿಯ ಬಿಡುಗಡೆ ದಿನಾಂಕ
ಒಪ್ಪೋ ರೆನೋ 13 ಸರಣಿಯನ್ನು ಜನವರಿ 9 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಒಪ್ಪೋ ರೆನೋ 13 ಮತ್ತು ಒಪ್ಪೋ ರೆನೋ 13 ಪ್ರೊ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಇವುಗಳ ಬೆಲೆ ಮತ್ತು ಮಾರಾಟದ ದಿನಾಂಕವನ್ನು ಸಹ ಅಂದೇ ಬಹಿರಂಗಪಡಿಸಲಾಗುತ್ತದೆ. ಕಂಪನಿಯು ಈಗಾಗಲೇ, ತನ್ನ ವೆಬ್‌ಸೈನ್‌ನಲ್ಲಿ ಮುಂಬರುವ ಒಪ್ಪೋ ರೆನೋ 13 ಸರಣಿಯ ಮೈಕ್ರೋ ಸೈಟ್ ಲೈವ್ ಮಾಡಿದೆ. ಈ ಮೂಲಕ ಮುಂಬರುವ 5G ಫೋನ್‌ಗಳ ಫೋಟೋ ಮತ್ತು ಡಿಸೈನ್ ಬಹಿರಂಗಪಡಿಸಿದೆ. ಕಂಪನಿಯು ಇದನ್ನು OPPO AI ಫೋನ್ ಎಂದು ಹೆಸರಿಸಿದೆ.
ಒಪ್ಪೋ ರೆನೋ 13 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ ರೆನೋ 13 ಮೊಬೈಲ್ 6.59 ಇಂಚಿನ 1.5K ಅಲ್ಟ್ರಾ ಹೈ ಡೆಫಿನಿಷನ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2,760 x 1,256 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂದಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ರೆನೋ 13 ಫೋನ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 8350 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ColorOS 15.0 ಜೊತೆಗೆ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಒಪ್ಪೋ ರೆನೋ 13 ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿದೆ. ಇದು OIS ಮತ್ತು ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಬರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ ರೆನೋ 13 ಮೊಬೈಲ್ 5,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಒಪ್ಪೋ ರೆನೋ 13 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ ರೆನೋ 13 ಪ್ರೊ ಮೊಬೈಲ್ 6.83 ಇಂಚಿನ 1.5K ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ರೆನೋ 13 ಪ್ರೊ ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ColorOS 15.0 ಜೊತೆಗೆ ಕೆಲಸ ಮಾಡುತ್ತದೆ.
ಕ್ಯಾಮೆರಾ ಸೆಟಪ್
ಒಪ್ಪೋ ರೆನೋ 13 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ ರೆನೋ 13 ಪ್ರೊ ಮೊಬೈಲ್ 5800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಒಪ್ಪೋ ರೆನೋ 13 ಸರಣಿಯ ಬೆಲೆ
ಒಪ್ಪೋ ರೆನೋ 13 ಮತ್ತು ಒಪ್ಪೋ ರೆನೋ 13 ಫೋನ್‌ಗಳು ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿವೆ. ಒಪ್ಪೋ ರೆನೋ 13 ಫೋನನ್ನು 12GB RAM ಮತ್ತು 16GB RAM ನೊಂದಿಗೆ ಒಟ್ಟು 5 ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಈ ಫೋನಿನ ಆರಂಭಿಕ ಬೆಲೆ 44,190 ರೂ. ಆಗಿದೆ.
ಒಪ್ಪೋ ರೆನೋ 13 ಪ್ರೊ ಫೋನನ್ನು ಚೀನಾದಲ್ಲಿ 12 B RAM ಮತ್ತು 16GB RAM ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 256GB, 512GB ಮತ್ತು 1 TB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಒಪ್ಪೋ ರೆನೋ 13 ಪ್ರೊ ಬೆಲೆ 52,350 ರೂ. ಆಗಿದೆ.


Click it and Unblock the Notifications








