Home
ಮೊಬೈಲ್

OPPO: ಸದ್ದಿಲ್ಲದೆ 2 ಸೊಗಸಾದ ಫೋನ್ ಲಾಂಚ್; 32MP ಸೆಲ್ಫಿ ಕ್ಯಾಮೆರಾ.. 5800mAh ಬ್ಯಾಟರಿ.. ಬೆಲೆ ಇಷ್ಟು!

ಒಪ್ಪೋ ಅಭಿಮಾನಿಗಳಿಗೆ ಡಬಲ್ ಧಮಾಕಾ! ಒಪ್ಪೋ ರೆನೋ 13 (OPPO Reno 13) ಮತ್ತು ಒಪ್ಪೋ ರೆನೋ 13 ಪ್ರೊ (OPPO Reno 13 Pro) ಮೊಬೈಲ್ ಜನವರಿ 9 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಆದರೆ, ಈ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬರುವ ಮುಂಚೆಯೇ, ಕಂಪನಿಯು ಈ ಸರಣಿಯ ಅಡಿಯಲ್ಲಿ ಮತ್ತೊಂದು ಹೊಸ ಫೋನನ್ನು ಪರಿಚಯಿಸಿದೆ. ಹೌದು, ಒಪ್ಪೋ ರೆನೋ 13F (OPPO Reno 13F) ಸದ್ದಿಲ್ಲದೆ ರಿಲೀಸ್ ಆಗಿದೆ. ಬನ್ನಿ, ಈ ಫೋನಿನ ವಿಶೇಷತೆಗಳನ್ನು ತಿಳಿಯೋಣ.

ಒಪ್ಪೋ ರೆನೋ 13F ಮೊಬೈಲ್ 5G ಮತ್ತು 4G ಎರಡೂ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. 5G ರೂಪಾಂತರವು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. 4G ರೂಪಾಂತರವು ಮೀಡಿಯಾಟೆಕ್ ಹೆಲಿಯೊ G100 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 5800mAh ಬ್ಯಾಟರಿ ಮತ್ತು 45W ಸೂಪರ್‌ವೋಕ್ ಚಾರ್ಜಿಂಗ್ ಒಳಗೊಂಡಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

OPPO Reno 13F 5G ಮತ್ತು 4G ಫೋನ್‌ ಲಾಂಚ್; ಬೆಲೆ, ವಿಶೇಷತೆಗಳೇನು?

ಒಪ್ಪೋ ರೆನೋ 13F ಫೀಚರ್ಸ್‌

ಡಿಸ್ಪ್ಲೇ ವಿವರ

ಒಪ್ಪೋ ರೆನೋ 13F ಫೋನಿನ 5G ಮತ್ತು 4G ರೂಪಾಂತರಗಳು 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿವೆ. ಇದು ರಿಜಿಡ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು ಇದು 1080 x 2400 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಎರಡೂ ಮೊಬೈಲ್‌ಗಳು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನ ಹೊಂದಿವೆ.

ಪ್ರೊಸೆಸರ್ ಸಾಮರ್ಥ್ಯ

ಒಪ್ಪೋ ರೆನೋ 13F 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಅಡ್ರಿನೊ 710 ಜಿಪಿಯು ಹೊಂದಿದೆ. ಒಪ್ಪೋ ರೆನೋ 13F 4G ಮೊಬೈಲ್ ಮೀಡಿಯಾಟೆಕ್ ಹೆಲಿಯೊ G100 ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ, ಇದು ಆರ್ಮ್ G57 ಜಿಪಿಯು ಹೊಂದಿದೆ. ಈ ಎರಡೂ ಮೊಬೈಲ್‌ಗಳು ಆಂಡ್ರಾಯ್ಡ್‌ 15 ಆಧಾರಿತ ColorOS 15.0 ನಲ್ಲಿ ಕೆಲಸ ನಿರ್ವಹಿಸುತ್ತವೆ.

ಕ್ಯಾಮೆರಾ ಸೆಟಪ್

ಒಪ್ಪೋ ರೆನೋ 13F ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ ಮತ್ತು OIS ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

OPPO Reno 13F 5G ಮತ್ತು 4G ಫೋನ್‌ ಲಾಂಚ್; ಬೆಲೆ, ವಿಶೇಷತೆಗಳೇನು?

ಬ್ಯಾಟರಿ ಮತ್ತು ಚಾರ್ಜಿಂಗ್

ಒಪ್ಪೋ ರೆನೋ 13F 5G ಮತ್ತು ಒಪ್ಪೋ ರೆನೋ 13F 4G ಸ್ಮಾರ್ಟ್‌ಫೋನ್‌ಗಳು 5800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಎರಡೂ ಮೊಬೈಲ್‌ಗಳು, 45W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿವೆ.

ಇತರೆ ವೈಶಿಷ್ಟ್ಯಗಳು

ಒಪ್ಪೋ ರೆನೋ 13F ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್‌ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈಫೈ 5, ಬ್ಲೂಟೂತ್ 5.3 ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ಒಪ್ಪೋ ರೆನೋ 13F 5G ಮತ್ತು ಒಪ್ಪೋ ರೆನೋ 13F 4G ಲಭ್ಯತೆ

ಒಪ್ಪೋ ರೆನೋ 13F 5G ಫೋನ್ 8GB + 128GB, 8GB + 256GB, 12GB + 256GB, ಮತ್ತು 12GB + 512GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಒಪ್ಪೋ ರೆನೋ 13F 4G ಮೊಬೈಲ್ 8GB + 256GB ಮತ್ತು 8GB + 512GB ಸ್ಟೋರೇಜ್‌ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿಯು ಈ ಫೋನಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಈ ಎರಡೂ ಫೋನ್‌ಗಳು ಗ್ರ್ಯಾಫೈಟ್ ಗ್ರೇ ಮತ್ತು ಪ್ಲಮ್ ಪರ್ಪಲ್ ಬಣ್ಣಗಳಲ್ಲಿ ಬರುತ್ತವೆ. 5G ರೂಪಾಂತರವು ಮೂರನೇ ಲುಮಿನಸ್ ಬ್ಲೂ ಬಣ್ಣ ಮತ್ತು 4G ರೂಪಾಂತರವು ಸ್ಕೈಲೈನ್ ಬ್ಲೂ ಆಯ್ಕೆಯನ್ನು ಹೊಂದಿದೆ.

Best Mobiles in India

English summary
Oppo Reno 13F 5G, Reno 13F 4G launched Globally: price, specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+