Home
ಮೊಬೈಲ್

ಅಭಿಷೇಕ್ ಯಾದವ್ ಅವರಿಂದ OPPO Reno 14 Pro ಫೋನ್ ಬೆಲೆ ಸೋರಿಕೆ!

OPPO ತನ್ನ ಜನಪ್ರಿಯ Reno ಸರಣಿಯ OPPO Reno 14 ಮತ್ತು OPPO Reno 14 Pro 5G ಎಂಬ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸರಣಿಯು ಮೀಡಿಯಾ ಟೆಕ್ ಚಿಪ್‌ಸೆಟ್‌ಗಳು, 120Hz OLED ಡಿಸ್ಪ್ಲೇಗಳು, ಶಕ್ತಿಯುತ ಕ್ಯಾಮೆರಾಗಳು ಮತ್ತು ವೇಗದ ಚಾರ್ಜಿಂಗ್ ಬೆಂಬಲದಂತಹ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂಬ ಸುದ್ದಿಯನ್ನು ನೀವು ಈಗಾಗಲೇ ತಿಳಿದಿರಬಹುದು. ಇದೀಗ ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರು ಈ ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆಗಳ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ.! ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ OPPO Reno 14 Pro 5G ಸರಣಿ ಬೆಲೆಯ ಮಾಹಿತಿ
ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರ ಪ್ರಕಾರ, OPPO Reno 14 Pro ಫೋನ್ ಬೆಲೆಯು 54,999 ರೂ.ಗಳಲ್ಲಿ ಪಟ್ಟಿ ಮಾಡಲಾಗಿದೆ. ಆದರೆ, ಸಾಧನದ ನಿಖರ ಬೆಲೆ 49,999 ರೂ.ಗಳಿಂದ ಪ್ರಾರಂಭವಾಗಬಹುದು ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, OPPO Reno 14 ಬೆಲೆ 40,000 ರೂ.ಗಳಿಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. OPPO ಬ್ಯಾಂಕ್ ಕೊಡುಗೆಗಳು ಮತ್ತು ಇತರ ಪ್ರೋತ್ಸಾಹಕ ಕೊಡುಗೆಗಳನ್ನು ಪರಿಚಯಿಸುವ ಸಾಧ್ಯತೆಯು ಇದೆ, ಇದು ಸಾಧನದ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ಭಾರತದಲ್ಲಿ OPPO Reno 14 ಸರಣಿಯ ಬಿಡುಗಡೆ ಸಮಯ ಮತ್ತು ಲಭ್ಯತೆ
OPPO Reno 14 ಸರಣಿಯ ಬಿಡುಗಡೆ ದಿನಾಂಕವನ್ನು OPPO ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಜುಲೈ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಈ ಸರಣಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಿಡುಗಡೆ ನಂತರ, ಈ ಸ್ಮಾರ್ಟ್‌ಫೋನ್‌ಗಳು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಾಗುತ್ತವೆ. ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಈ ಸರಣಿಯ ಅಧಿಕೃತ ಉತ್ಪನ್ನ ಪುಟ ಲೈವ್ ಆಗಿದ್ದು, ಇದು ಬಿಡುಗಡೆ ಹತ್ತಿರವಿರುವುದಕ್ಕೆ ಸೂಚಿಸುತ್ತದೆ.

ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ OPPO Reno 14 Pro 5G ಸರಣಿ ವೈಶಿಷ್ಟ್ಯಗಳು ಹೀಗಿವೆ,

ಅಭಿಷೇಕ್ ಯಾದವ್ ಅವರಿಂದ OPPO Reno 14 Pro ಫೋನ್ ಬೆಲೆ ಸೋರಿಕೆ!

OPPO Reno 14 ನ ಪ್ರಮುಖ ವೈಶಿಷ್ಟ್ಯಗಳು

  • OPPO Reno 14 ಫೋನ್ ಮೀಡಿಯಾ ಟೆಕ್‌ನ ಶಕ್ತಿಯುತ ಡೈಮೆನ್ಸಿಟಿ 8350 SoC ಯೊಂದಿಗೆ ಬರುತ್ತದೆ. ಇದು 16GB RAM ಮತ್ತು 512GB ವರೆಗೆ ಆಂತರಿಕ ಸಂಗ್ರಹಣೆಯನ್ನು ಬೆಂಬಲಿಸುತ್ತದೆ. ಈ ಫೋನ್ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000 mAh ಬ್ಯಾಟರಿಯನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 15 ಆಧಾರಿತ ColorOS 15 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
  • ಡಿಸ್ಪ್ಲೇ ವಿಷಯದಲ್ಲಿ, Reno 14 120Hz ರಿಫ್ರೆಶ್ ದರ ಮತ್ತು HDR10+ ಬೆಂಬಲದೊಂದಿಗೆ 6.59-ಇಂಚಿನ 1.5K OLED ಡಿಸ್ಪ್ಲೇ ಹೊಂದಿದೆ. ಇದು ಧೂಳು ಮತ್ತು ನೀರಿಗೆ ನಿರೋಧಕ IP68+IP69 ರೇಟಿಂಗ್ ಹೊಂದಿದೆ. ಆಡಿಯೋ ಅನುಭವಕ್ಕಾಗಿ ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಸುರಕ್ಷತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಒಳಗೊಂಡಿದೆ.
  • ಕ್ಯಾಮೆರಾ ವಿಭಾಗದಲ್ಲಿ, Reno 14 ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು OIS ನೊಂದಿಗೆ 50MP ಪ್ರಾಥಮಿಕ ಸೆನ್ಸರ್, 3.5x ಆಪ್ಟಿಕಲ್ ಜೂಮ್ ಮತ್ತು OIS ನೊಂದಿಗೆ 50MP ಟೆಲಿಫೋಟೋ ಶೂಟರ್, ಮತ್ತು ಆಟೋಫೋಕಸ್ ಮತ್ತು f/2.2 ಅಪರ್ಚರ್‌ನೊಂದಿಗೆ 8MP ಅಲ್ಟ್ರಾವೈಡ್ ಲೆನ್ಸ್. ಸೆಲ್ಫಿಗಾಗಿ, ಆಟೋಫೋಕಸ್ ಹೊಂದಿರುವ 50MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ.

OPPO Reno 14 Pro ನ ವೈಶಿಷ್ಟ್ಯಗಳು

  • OPPO Reno 14 Pro ಹೆಚ್ಚು ಶಕ್ತಿಶಾಲಿ MediaTek Dimensity 8450 SoC ಯೊಂದಿಗೆ ಬರುತ್ತದೆ, ಇದು 16GB RAM ಮತ್ತು 512GB ವರೆಗೆ ಸಂಗ್ರಹಣೆಯೊಂದಿಗೆ ಲಭ್ಯವಿದೆ. ಇದು 80W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,200 mAh ಬ್ಯಾಟರಿಯನ್ನು ಹೊಂದಿದೆ. Reno 14 Pro ಕೂಡ ಆಂಡ್ರಾಯ್ಡ್ 15 ಆಧಾರಿತ ColorOS 15 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
  • ಡಿಸ್ಪ್ಲೇ ವಿಷಯದಲ್ಲಿ, Reno 14 Pro 120Hz ರಿಫ್ರೆಶ್ ದರ ಮತ್ತು HDR10+ ಬೆಂಬಲದೊಂದಿಗೆ 6.83-ಇಂಚಿನ 1.5K OLED ಡಿಸ್ಪ್ಲೇ ಹೊಂದಿದೆ. ಈ ಮಾದರಿಯು IP68+IP69 ರೇಟಿಂಗ್, ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
  • ಕ್ಯಾಮೆರಾ ವಿಭಾಗದಲ್ಲಿ, Reno 14 Pro ಕೂಡ ಟ್ರಿಪಲ್-ಕ್ಯಾಮೆರಾ ಸೆಟಪ್ ಹೊಂದಿದೆ: OIS ನೊಂದಿಗೆ 50MP ಪ್ರಾಥಮಿಕ ಸೆನ್ಸರ್, 3.5x ಆಪ್ಟಿಕಲ್ ಜೂಮ್ ಮತ್ತು OIS ನೊಂದಿಗೆ 50MP ಟೆಲಿಫೋಟೋ ಶೂಟರ್, ಮತ್ತು ಆಟೋಫೋಕಸ್ ಮತ್ತು f/2.2 ಅಪರ್ಚರ್ ಹೊಂದಿರುವ 50MP ಅಲ್ಟ್ರಾವೈಡ್ ಲೆನ್ಸ್. ಮುಂಭಾಗದಲ್ಲಿ, ಆಟೋಫೋಕಸ್ ಹೊಂದಿರುವ 50MP ಸೆಲ್ಫಿ ಕ್ಯಾಮೆರಾ ಇದೆ.
Best Mobiles in India

English summary
OPPO Reno 14 series is expected to launch in India during the second week of July, with pricing information already leaked ahead of the release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+