Home
ಮೊಬೈಲ್

ಭಾರತದಲ್ಲಿ Oppo Reno 15 5G ಸರಣಿ ಲಾಂಚ್: ಮೊದಲ ಬಾರಿಗೆ Pro Mini ಪರಿಚಯ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Oppo ತನ್ನ ಹೊಸ Reno 15 5G ಸ್ಮಾರ್ಟ್‌ಫೋನ್ ಸರಣಿಯನ್ನು ಭಾರತದಲ್ಲಿ ಇಂದು (ಜ.8 ಗುರುವಾರ) ಅಧಿಕೃತವಾಗಿ ಬಿಡುಗಡೆ ಮಾಡಿದೆ. 2024ರ Reno 14 ಸರಣಿಗೆ ಮುಂದುವರಿದ ಈ ಹೊಸ ಲೈನ್‌ಅಪ್‌ನಲ್ಲಿ Reno 15, Reno 15 Pro, Reno 15 Pro Mini ಮತ್ತು Reno 15C ಎಂಬ ನಾಲ್ಕು ಮಾದರಿಗಳು ಸೇರಿವೆ. ವಿಶೇಷವೆಂದರೆ, Reno 15 Pro Mini 5G ಮಾದರಿ ಭಾರತದಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದು, ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಫೋನ್ ಬಯಸುವ ಬಳಕೆದಾರರ ಗಮನ ಸೆಳೆಯುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಯು ಈ ಕೆಳಕಂಡಂತಿದೆ.

Oppo Reno 15 5G ಸರಣಿ: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Oppo Reno 15 5G ಫೋನ್ 8GB RAM + 256GB ಸ್ಟೋರೇಜ್ ಆಯ್ಕೆಗೆ ₹45,999 ಆರಂಭಿಕ ಬೆಲೆ ಹೊಂದಿದೆ. 12GB RAM ಇರುವ ರೂಪಾಂತರಗಳು ₹48,999 ಮತ್ತು ₹53,999 ಬೆಲೆಯಲ್ಲಿ ಲಭ್ಯವಿವೆ. ಇನ್ನು Reno 15 Pro 5G ಫೋನ್ ₹67,999 ರಿಂದ ಆರಂಭವಾಗಿದ್ದು, Reno 15 Pro Mini 5G ₹59,999 ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಇದೇ ಫೆಬ್ರವರಿ 13ರಿಂದ Flipkart, Amazon ಮತ್ತು Oppo India ಅಧಿಕೃತ ಆನ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿವೆ. ಆದರೆ, ಲಾಂಚ್ ಆಫರ್ಸ್ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

ಭಾರತದಲ್ಲಿ Oppo Reno 15 5G ಸರಣಿ ಲಾಂಚ್: ಮೊದಲ ಬಾರಿಗೆ Pro Mini ಪರಿಚಯ!

Reno 15 Pro ಮತ್ತು Pro Mini 5G: ಡಿಸ್ಪ್ಲೇ ಮತ್ತು ಕಾರ್ಯಕ್ಷಮತೆ
Oppo Reno 15 Pro ನಲ್ಲಿ 6.78 ಇಂಚಿನ LTPO AMOLED ಡಿಸ್ಪ್ಲೇ ಇದ್ದು, 120Hz ರಿಫ್ರೆಶ್ ರೇಟ್ ಹಾಗೂ 1,800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ. Reno 15 Pro Mini ಯಲ್ಲಿ 6.32 ಇಂಚಿನ 1.5K AMOLED ಡಿಸ್ಪ್ಲೇ ಇದೆ. ಎರಡೂ ಫೋನ್‌ಗಳು ದೃಢವಾದ Gorilla Glass ರಕ್ಷಣೆಯೊಂದಿಗೆ ಬರುತ್ತವೆ. ಕಾರ್ಯಕ್ಷಮತೆಗೆ MediaTek Dimensity 8450 ಪ್ರೊಸೆಸರ್, 12GB RAM ಮತ್ತು 512GB ವರೆಗೆ ಸ್ಟೋರೇಜ್ ಆಯ್ಕೆಯನ್ನು ನೀಡಲಾಗಿದೆ.

200MP ಕ್ಯಾಮೆರಾ ಮತ್ತು ಪ್ರೊ-ಗ್ರೇಡ್ ವೀಡಿಯೋ ಸಪೋರ್ಟ್

ಫೋಟೋಗ್ರಫಿ ವಿಭಾಗದಲ್ಲಿ Reno 15 Pro ಮತ್ತು Pro Mini ಎರಡೂ 200MP ಮುಖ್ಯ ಕ್ಯಾಮೆರಾ (OIS ಸಹಿತ), 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿವೆ. 3.5x ಆಪ್ಟಿಕಲ್ ಜೂಮ್ ಮತ್ತು 4K 60fps HDR ವೀಡಿಯೋ ರೆಕಾರ್ಡಿಂಗ್ ಸಪೋರ್ಟ್ ಈ ಫೋನ್‌ಗಳನ್ನು ಕಂಟೆಂಟ್ ಕ್ರಿಯೇಟರ್‌ಗಳಿಗೆ ಸೂಕ್ತವಾಗಿಸುತ್ತದೆ. ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಮತ್ತು ಪ್ರೀಮಿಯಂ ಸುರಕ್ಷತೆ
Reno 15 Pro ಫೋನ್‌ನಲ್ಲಿ 6,500mAh ಬ್ಯಾಟರಿ, Pro Mini ಯಲ್ಲಿ 6,200mAh ಬ್ಯಾಟರಿ ಇದೆ. ಎರಡೂ ಮಾದರಿಗಳು 80W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತವೆ. Pro ಮಾದರಿಯಲ್ಲಿ ಹೆಚ್ಚುವರಿಯಾಗಿ 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವೂ ಲಭ್ಯ. IP68 ಮತ್ತು IP69 ರೇಟಿಂಗ್‌ಗಳೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಣೆ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಮತ್ತು ಪ್ರೀಮಿಯಂ ಹ್ಯಾಪ್ಟಿಕ್ಸ್ ಈ ಫೋನ್‌ಗಳ ಪ್ರಮುಖ ಹೈಲೈಟ್‌ಗಳು.

ಭಾರತದಲ್ಲಿ Oppo Reno 15 5G ಸರಣಿ ಲಾಂಚ್: ಮೊದಲ ಬಾರಿಗೆ Pro Mini ಪರಿಚಯ!

Oppo Reno 15 5G: ಬೆಲೆ ಮತ್ತು ಫೀಚರ್‌ಗಳ ಸಮತೋಲನ
Oppo Reno 15 5G ಮಾದರಿಯಲ್ಲಿ 6.59 ಇಂಚಿನ AMOLED ಡಿಸ್ಪ್ಲೇ, Snapdragon 7 Gen 4 ಪ್ರೊಸೆಸರ್ ಮತ್ತು 12GB ವರೆಗೆ RAM ನೀಡಲಾಗಿದೆ. 50MP ಮುಖ್ಯ ಕ್ಯಾಮೆರಾ, 50MP ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾ-ವೈಡ್ ಸೆನ್ಸರ್ ಜೊತೆಗೆ ಈ ಫೋನ್ ಫೋಟೋಗ್ರಫಿಯಲ್ಲಿ ಉತ್ತಮ ಅನುಭವ ನೀಡುತ್ತದೆ. ಇದರಲ್ಲಿ 6,500mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ಇದರ ಪ್ರಮುಖ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಈ ಎಲ್ಲಾ ಫೋನ್‌ಗಳು Android 16 ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸುತ್ತವೆ.

Best Mobiles in India

English summary
Oppo has launched the Reno 15 5G series in India, featuring four models—Reno 15, Reno 15 Pro, Reno 15 Pro Mini, and Reno 15C. Starting at ₹45,999, the lineup highlights premium design and marks the India debut of the compact Reno 15 Pro Mini, with sales beginning February 13 on major online platforms.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+