Home
ಮೊಬೈಲ್

ಭಾರತಕ್ಕೆ ಶೀಘ್ರವೇ Reno 15 Pro Mini ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಆಗಮನ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Oppo ಭಾರತದಲ್ಲಿ ತನ್ನ ಜನಪ್ರಿಯ Reno ಸೀರೀಸ್ ಅಡಿಯಲ್ಲಿ ಹೊಸ ರೀತಿಯ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧವಾಗುತ್ತಿದೆ ಎಂಬ ಹೊಸ ಸುದ್ದಿಯೊಂದು ಸೋರಕೆಯಾಗಿದೆ. Oppo ಹೊಸದಾಗಿ Reno 15 Pro Mini ಎಂಬ ಹೆಸರಿನ ಹೊಸ ಫೋನ್ ಅನ್ನು ಪರಿಚಯಿಸುತ್ತಿದೆ. ಸಣ್ಣ ಗಾತ್ರದಲ್ಲೇ ಪ್ರೀಮಿಯಂ ಫೀಚರ್‌ಗಳನ್ನು ನೀಡುವ ಉದ್ದೇಶದಿಂದ Oppo ಈ ಡಿವೈಸ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗಿದೆ. ಇದೀಗ ಲಭ್ಯವಾಗಿರುವ ಮಾಹಿತಿಯಂತೆ, Oppo Reno 15 Pro Mini ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.

ಹೌದು, ಜನಪ್ರಿಯ ಟಿಪ್‌ಸ್ಟರ್ Gadgetsdata ಇತ್ತೀಚೆಗೆ ಹಂಚಿಕೊಂಡ ಮಾಹಿತಿಯಂತೆ, ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಹೊಸ ಡಿವೈಸ್ 2025ರ ಡಿಸೆಂಬರ್ ಅಂತ್ಯ ಅಥವಾ 2026ರ ಜನವರಿ ವೇಳೆಗೆ ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಸಾಧನವು CPH2813 ಎಂಬ ಮಾದರಿ ಸಂಖ್ಯೆಯನ್ನು ಹೊಂದಿರಲಿದ್ದು, ಕಾರ್ಯಕ್ಷಮತೆಯ ವಿಚಾರದಲ್ಲಿ ರಾಜಿಯಾಗದೆ MediaTek Dimensity 8450 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರೊಸೆಸರ್ ಗೇಮಿಂಗ್, ಹೈ-ಎಂಡ್ ಮಲ್ಟಿಟಾಸ್ಕಿಂಗ್ ಮತ್ತು ದೈನಂದಿನ ಬಳಕೆಗೆ ಅತ್ಯುತ್ತಮ ವೇಗವನ್ನು ಒದಗಿಸಲಿದ್ದು, ಫ್ಲ್ಯಾಗ್‌ಶಿಪ್ ಮಟ್ಟದ ಅನುಭವವನ್ನು ನೀಡಲಿದೆ.

ಲೀಕ್ ಆಗಿರುವ ಮಾಹಿತಿಗಳಂಂತೆ, ಮುಂಬರುವ Oppo Reno 15 Pro Mini ಸ್ಮಾರ್ಟ್‌ಫೋನ್ ಫೋನ್ 6.32-ಇಂಚಿನ 1.5K ಫ್ಲಾಟ್ OLED ಡಿಸ್ಪ್ಲೇಯೊಂದಿಗೆ ಬರಲಿದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಫೋನ್ ಕೇವಲ 187 ಗ್ರಾಂ ತೂಕ ಮತ್ತು 7.99 ಮಿಮೀ ದಪ್ಪವನ್ನು ಹೊಂದಿದ್ದು, ಬಳಕೆಗೆ ಅತ್ಯಂತ ಹಗುರವಾಗಿರಲಿದೆ. ವಿಶೇಷವಾಗಿ 'ಗ್ಲೇಸಿಯರ್ ವೈಟ್' ಬಣ್ಣದ ಆಯ್ಕೆಯಲ್ಲಿ ಬರಲಿರುವ ಈ ಡಿವೈಸ್, ಹಿಂಭಾಗದಲ್ಲಿ ಆಕರ್ಷಕವಾದ 'ರಿಬ್ಬನ್ ಸ್ಟೈಲ್ ಫಿನಿಶ್' ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇದು IP69 ರೇಟಿಂಗ್ ಹೊಂದಿರಲಿದ್ದು, ನೀರು ಮತ್ತು ಧೂಳಿನಿಂದ ಹೆಚ್ಚಿನ ರಕ್ಷಣೆ ಒದಗಿಸಲಿದೆ.

ಭಾರತಕ್ಕೆ ಶೀಘ್ರವೇ Reno 15 Pro Mini ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಆಗಮನ!

ಕ್ಯಾಮೆರಾ ವಿಭಾಗವು ಈ ಫೋನ್‌ನ ಪ್ರಮುಖ ಆಕರ್ಷಣೆಯಾಗಿದ್ದು, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇರಲಿದೆ. ಇದರಲ್ಲಿ 200-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3.5x ಆಪ್ಟಿಕಲ್ ಜೂಮ್ ಸಾಮರ್ಥ್ಯದ 50-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಸೇರಿವೆ. ಸೆಲ್ಫಿ ಪ್ರಿಯರಿಗಾಗಿ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಬ್ಯಾಟರಿ ವಿಚಾರಕ್ಕೆ ಬಂದರೆ, ಇದು 80W ವೇಗದ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯವನ್ನೂ ಸಹ ಬೆಂಬಲಿಸುವ ನಿರೀಕ್ಷೆಯಿದೆ.

ಸದ್ಯಕ್ಕೆ Oppo ಸಂಸ್ಥೆಯಿಂದ ಈ ಫೋನ್‌ನ ಬಿಡುಗಡೆ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಸೋರಿಕೆಯಾದ ಮಾಹಿತಿಗಳು ಗ್ರಾಹಕರಲ್ಲಿ ಭಾರಿ ಕುತೂಹಲ ಮೂಡಿಸಿವೆ. ದೊಡ್ಡ ಫೋನ್‌ಗಳ ಬದಲಿಗೆ ಚಿಕ್ಕದಾದ ಮತ್ತು ಸುಲಭವಾಗಿ ಬಳಸಬಹುದಾದ ಬಲಿಷ್ಠ ಸ್ಮಾರ್ಟ್‌ಫೋನ್ ಬಯಸುವವರಿಗೆ Reno 15 Pro Mini ಒಂದು ಪರಿಪೂರ್ಣ ಆಯ್ಕೆಯಾಗುವ ಸಾಧ್ಯತೆಯಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆಯಿದೆ. ನೀವು ಕೂಡ Oppo Reno 15 Pro Mini ಆಗಮನದ ಬಗ್ಗೆ ನಿರೀಕ್ಷೆ ಹೊಂದಿದ್ದೀರಾ?. ಹಾಗಾದರೆ, ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
OPPO is expected to launch the Reno 15 Pro Mini in India soon, featuring a compact design with flagship-level performance powered by the MediaTek Dimensity 8450 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+