ಭಾರತಕ್ಕೆ Oppo Reno 15 ಸರಣಿ ಆಗಮನದ ಮಾಹಿತಿ ಸೋರಿಕೆ!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮುಂಬರಲಿರುವ Oppo Reno ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬ ಬಗ್ಗೆ ಯಾವಾಗಲೂ ಕುತೂಹಲ ಇದ್ದೇ ಇರುತ್ತದೆ. ಇದೀಗ ಇದೇ ವಿಷಯಕ್ಕೆ Oppo ಚರ್ಚೆಯಲ್ಲಿದೆ. ಹೌದು, ಕಂಪನಿಯು ತನ್ನ ಹೊಸ Oppo Reno 15 ಸರಣಿಯನ್ನು ಡಿಸೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ ಎಂದು ಇತ್ತೀಚಿನ ವರದಿ ಗಳುಸೂಚಿಸಿದೆ. ಈ ಸರಣಿಯಲ್ಲಿ Reno 15, Reno 15 Pro, ಮತ್ತು Reno 15 Mini ಮೂರು ಮಾದರಿಗಳು ಇರಲಿದ್ದು, ಇವುಗಳು ಪ್ರೀಮಿಯಂ ವಿನ್ಯಾಸ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಅತ್ಯಾಧುನಿಕ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಬರಲಿವೆ ಎನ್ನಲಾಗಿದೆ.
ಭಾರತಕ್ಕೆ Oppo Reno 15 ಸರಣಿ ಆಗಮನದ ಕುರಿತು ಪ್ರಸಿದ್ಧ ಟಿಪ್‌ಸ್ಟರ್ ಸುಧಾಂಶು ಅಂಭೋರೆ ಅವರ ಸಹಯೋಗದೊಂದಿಗೆ 91Mobiles ಟೆಕ್ ವೆಬ್‌ಸೈಟ್ ವರದಿ ಮಾಡಿತ್ತು. ಈ ವರದಿಯ ಪ್ರಕಾರ, Oppo ತನ್ನ ಹೊಸ Reno 15 ಸರಣಿಯನ್ನು ಭಾರತದಲ್ಲಿ ಡಿಸೆಂಬರ್ 2025ರಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಹಿಂದಿನ ಕೆಲವು ವರದಿಗಳು ಈ ಮೂರು ಫೋನ್‌ಗಳು "Reno 15, Reno 15 Pro, ಮತ್ತು Reno 15 Pro Max" ಹೆಸರಿನಲ್ಲಿ ಬರಬಹುದು ಎಂದು ಸೂಚಿಸಿದ್ದರೂ, ಇದೀಗ ಹಲವಾರು ವರದಿಗಳಿಂದ "Reno 15 Mini" ಮಾದರಿಯನ್ನು ಸೇರಿಸಲಿದೆ ಎಂಬ ಹೊಸ ಮಾಹಿತಿ ಹೊರಬಂದಿದೆ.
Oppo Reno 15 ಸರಣಿ: ಪ್ರಮುಖ ವೈಶಿಷ್ಟ್ಯಗಳು ಯಾವುವು?
Oppo Reno 15 ಸರಣಿಯಲ್ಲಿ ಬೇಸ್ Reno 15 ಮಾದರಿ ಗೀಕ್‌ಬೆಂಚ್‌ನಲ್ಲಿ Mali-G720 MC7 GPU ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 8450 ಚಿಪ್‌ನೊಂದಿಗೆ ಕಾಣಿಸಿಕೊಂಡಿದೆ. Oppo PLV110 ಮಾದರಿ ಸಂಖ್ಯೆಯ ಫೋನ್ ಅನ್ನೇ Oppo Reno 15 ಎಂದು ನಿರೀಕ್ಷಿಸಲಾಗಿದೆ. ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಪರೀಕ್ಷೆಗಳಲ್ಲಿ ಕ್ರಮವಾಗಿ 1,668 ಮತ್ತು 6,274 ಅಂಕಗಳನ್ನು ಗಳಿಸಿದೆ. ಗೀಕ್‌ಬೆಂಚ್ ಪಟ್ಟಿಯ ಪ್ರಕಾರ, ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 16 ಅನ್ನು ರನ್ ಮಾಡುತ್ತದೆ ಮತ್ತು 16GB RAM ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇತ್ತೀಚಿನ ಸೋರಿಕೆಗಳ ಪ್ರಕಾರ, Oppo Reno 15 Pro ಮತ್ತು Reno 15 Mini ಕ್ರಮವಾಗಿ 6.78-ಇಂಚಿನ ಮತ್ತು 6.32-ಇಂಚಿನ 1.5K ಫ್ಲಾಟ್ ಡಿಸ್ಪ್ಲೇಗಳನ್ನು ಹೊಂದಿವೆ ಎಂದು ವದಂತಿಗಳಿವೆ, ಆದರೆ Reno 15 6.59-ಇಂಚಿನ ಪರದೆಯನ್ನು ಒಳಗೊಂಡಿರಬಹುದು. ಈ ಸರಣಿಯು ಮೆಟಲ್ ಫ್ರೇಮ್ ಮತ್ತು IP68 ಹಾಗೂ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP69 ರೇಟಿಂಗ್‌ಗಳನ್ನು ಸಹ ನೀಡಬಹುದು. ಇವುಗಳಲ್ಲಿ Reno 15 Pro ಮಾದರಿಯು ಹೆಚ್ಚಿನ ಸಾಮರ್ಥ್ಯದ Dimensity 9400 ಪ್ರೊಸೆಸರ್, 6,500mAh ಬ್ಯಾಟರಿ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಹೊಂದಿರುವ ಸಾಧ್ಯತೆ ಇದೆ.
ಫೋಟೋಗ್ರಫಿಗಾಗಿ, Oppo Reno 15 Pro ಮತ್ತು Reno 15 Mini ಎರಡೂ ಮಾದರಿಗಳಲ್ಲಿ ತ್ರಿವಳಿ ಹಿಂಭಾಗದ ಕ್ಯಾಮೆರಾ ವ್ಯವಸ್ಥೆ ಇರಬಹುದು. ಇದರಲ್ಲಿ 200MP Samsung ISOCELL HP5 ಸೆನ್ಸಾರ್ ಇರುವ ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಇರಬಹುದು. ಸೆಲ್ಫಿಗಾಗಿ, 50MP ಸೆಲ್ಫಿ ಕ್ಯಾಮೆರಾ ನೀಡಲಾಗಬಹುದು ಎನ್ನಲಾಗಿದೆ. ಆದರೆ, ಬೇಸ್ Oppo Reno 15 ಫೋನ್ ಕ್ಯಾಮೆರಾದ ಕುರಿತು ನಿರ್ಧರಿಸುವಂತಹ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಶೀಘ್ರದಲ್ಲೇ ಈ ಮಾಹಿತಿಯನ್ನು ಎದುರುನೋಡಬಹುದು.
Oppo Reno 15 ಸರಣಿ: ನಿರೀಕ್ಷಿತ ಬೆಲೆ ವಿವರಗಳು
Oppo Reno 15 ಸರಣಿಯ ಬೆಲೆ ವಿವರಗಳನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಮೊಬೈಲ್ ಮಾರುಕಟ್ಟೆ ತಜ್ಞರ ಅಂದಾಜಿನ ಪ್ರಕಾರ, Reno 15 Mini 30,000 ರೂ. ಸಮೀಪ, Reno 15 40,000 ರೂ. ರಷ್ಟು ಮತ್ತು Reno 15 Pro ರೂ. 50,000ಕ್ಕೂ ಅಧಿಕ ಬೆಲೆಯಲ್ಲಿರಬಹುದು. ಅಧಿಕೃತ ಬಿಡುಗಡೆ ನಂತರ ನಿಖರ ಬೆಲೆ ಮತ್ತು ಆಫರ್‌ಗಳು ಬಹಿರಂಗಗೊಳ್ಳಲಿವೆ. ಒಟ್ಟಾರೆಯಾಗಿ, ಈ Oppo Reno 15 ಸರಣಿಯು ಮಧ್ಯಮದಿಂದ ಪ್ರೀಮಿಯಂ ಸೆಗ್ಮೆಂಟ್‌ವರೆಗೆ ಹೊಸ ಆಯ್ಕೆಯನ್ನು ನೀಡುವ ನಿರೀಕ್ಷೆಯಿದೆ. ಹಾಗಾಗಿ, ನಮ್ಮ ಚಿತ್ತ ಅಧಿಕೃತ ಲಾಂಚ್‌ನತ್ತ.!


Click it and Unblock the Notifications








