200MP ಕ್ಯಾಮೆರಾ, 6,500mAh ಬ್ಯಾಟರಿ: Oppo Reno 15 ಸರಣಿ ಭರ್ಜರಿ ಎಂಟ್ರಿ!
ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ Oppo Reno ಸರಣಿಯ ಇತ್ತೀಚಿನ Reno 15 ಮಾದರಿಗಳು ಚೀನಾದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿವೆ. ಚೀನಾದಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ನಿರೀಕ್ಷೆಯಂತೆಯೇ Oppo Reno 15 ಮತ್ತು Oppo Reno 15 Pro ಎರಡೂ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದ್ದು, ಇವುಗಳು ಹೊಸ MediaTek Dimensity ಚಿಪ್‌ಸೆಟ್‌ನಿಂದ ಚಾಲಿತವಾಗಿವೆ. ಇದಲ್ಲದೆ, ಇವುಗಳಲ್ಲಿನ 200MP ಕ್ಯಾಮೆರಾ ಮತ್ತು 6,500mAh ಬ್ಯಾಟರಿ ಮತ್ತು 1TB ವರೆಗಿನ ಆನ್‌ಬೋರ್ಡ್ ಮೆಮೊರಿಯಂತಹ ಸಾಕಷ್ಟು ವೈಶಿಷ್ಟ್ಯಗಳು ಗಮನಸೆಳೆದಿವೆ. ಹಾಗಾದರೆ, ಹೊಸ Oppo Reno 15 ಮತ್ತು Oppo Reno 15 Pro ಎರಡೂ ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಸಂಪೂರ್ಣ ಫೀಚರ್ಸ್ ಯಾವುವು?, ಮತ್ತು ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
Oppo Reno 15 ಮತ್ತು Oppo Reno 15 Pro : ಪ್ರಮುಖ ವೈಶಿಷ್ಟ್ಯಗಳು
Oppo Reno 15 Pro 6.78-ಇಂಚಿನ Full-HD+ (1,272x2,772 ಪಿಕ್ಸೆಲ್‌ಗಳು) Flexible AMOLED ಡಿಸ್ಪ್ಲೇಯನ್ನು ಹೊಂದಿದ್ದು, ಇದು 120Hz ವರೆಗೆ ರಿಫ್ರೆಶ್ ರೇಟ್, 95.5 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ, 240Hz ವರೆಗೆ ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 1,800 ನಿಟ್‌ಗಳವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ. ಇದರ ಡಿಸ್‌ಪ್ಲೆಯು 1.07 ಬಿಲಿಯನ್ ಬಣ್ಣಗಳು, 450 ppi ಪಿಕ್ಸೆಲ್ ಸಾಂದ್ರತೆ ಮತ್ತು 100 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಅನ್ನು ಸಹ ಬೆಂಬಲಿಸುತ್ತದೆ. ಮತ್ತೊಂದೆಡೆ, ಸ್ಟ್ಯಾಂಡರ್ಡ್ Oppo Reno 15 ಸಣ್ಣ 6.32-ಇಂಚಿನ Full HD+ Flexible AMOLED ಡಿಸ್ಪ್ಲೇಯನ್ನು ಹೊಂದಿದ್ದು, ಇದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಆದಾಗ್ಯೂ, ಈ Reno 15 ಸಾಧನವು 460 ppi ಪಿಕ್ಸೆಲ್ ಸಾಂದ್ರತೆ ಮತ್ತು 93.4 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.

ಕಾರ್ಯಕ್ಷಮತೆಗಾಗಿ, Oppo Reno 15 ಮತ್ತು Oppo Reno 15 Pro ಎರಡೂ ಸ್ಮಾರ್ಟ್‌ಫೋನ್‌ಗಳು MediaTek Dimensity 8450 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 3.ಗರಿಷ್ಠ 3.25GHz ಪೀಕ್ ಸ್ಪೀಡ್ ನೀಡುತ್ತದೆ ಮತ್ತು ARM G720 MC7 GPU ಇದೆ. ಈ Dimensity ಪ್ರೊಸೆಸರ್ ಒಂದು ಪ್ರೈಮ್ ಕೋರ್, ಮೂರು ಕಾರ್ಯಕ್ಷಮತೆ ಕೋರ್‌ಗಳು ಮತ್ತು ನಾಲ್ಕು ದಕ್ಷತೆಯ ಕೋರ್‌ಗಳನ್ನು ಹೊಂದಿರುವುದನ್ನು ನಾವು ನೋಡಬಹುದು. ಇನ್ನು ಮೆಮೊರಿ ವಿಭಾಗದಲ್ಲಿಯೂ ಸಹ Oppo Reno 15 ಮತ್ತು Oppo Reno 15 Pro ಎರಡೂ ಫೋನ್‌ಗಳು 16GB ವರೆಗೆ LPDDR5X RAM ಮತ್ತು 1TB ವರೆಗೆ UFS 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಒದಗಿಸುತ್ತವೆ. ಈ ಪೀಚರ್ಸ್ ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ಹೈ-ಎಂಡ್ ಆಪ್‌ಗಳನ್ನು ಸುಲಭವಾಗಿ ನಿರ್ವಹಿಸಲು ಸಾಕಷ್ಟು ಶಕ್ತಿಶಾಲಿಯಾಗಿ ಕಾಣಿಸುತ್ತಿವೆ.
ಕ್ಯಾಮೆರಾ ವಿಭಾಗದಲ್ಲಿ, Oppo Reno 15 ಮತ್ತು Oppo Reno 15 Pro ಎರಡೂ ಸ್ಮಾರ್ಟ್‌ಫೋನ್‌ಗಳು ಸಹ ಒಂದೇ ಸಾಮರ್ಥ್ಯದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕಗಳನ್ನು ಹೊಂದಿವ. ಇವುಗಳಲ್ಲಿ 200-ಮೆಗಾಪಿಕ್ಸೆಲ್ (f/1.8) ಮುಖ್ಯ ಶೂಟರ್, 50-ಮೆಗಾಪಿಕ್ಸೆಲ್ (f/2.0) ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 120x ಡಿಜಿಟಲ್ ಜೂಮ್ ಸಾಮರ್ಥ್ಯವನ್ನು ಹೊಂದಿರುವ 50-ಮೆಗಾಪಿಕ್ಸೆಲ್ (f/2.8) ಟೆಲಿಫೋಟೋ ಸೆನ್ಸರ್ ಸೇರಿವೆ. ಮುಂಭಾಗದಲ್ಲಿ, ಎರಡೂ ಸ್ಮಾರ್ಟ್‌ಫೋನ್‌ಗಳು ಆಟೋಫೋಕಸ್‌ನೊಂದಿಗೆ 50-ಮೆಗಾಪಿಕ್ಸೆಲ್ (f/2.0) ಸೆಲ್ಫಿ ಕ್ಯಾಮೆರಾವನ್ನು ಪಡೆದಿವೆ. ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ 60 fps ವರೆಗೆ 4K ರೆಸಲ್ಯೂಶನ್ ವೀಡಿಯೊಗಳನ್ನು ಶೂಟ್ ಮಾಡಲು ಅವಕಾಶ ಮಾಡಿಕೊಡುತ್ತವೆ. ಅಂದರೆ, ವ್ಲಾಗರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗೆ ಸಾಕಷ್ಟು ಶಕ್ತಿಯುತವಾಗಿ ಕಾಣಿಸಲಿದೆ.

ಇನ್ನು ಬ್ಯಾಟರಿ ವಿಭಾಗದಲ್ಲಿ, Oppo Reno 15 Pro 6,500mAh ಬ್ಯಾಟರಿಯನ್ನು ಪ್ಯಾಕ್ ಮಾಡಿದರೆ, Oppo Reno 15 15 6,200mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಎರಡೂ ಫೋನ್‌ಗಳು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಆದಾಗ್ಯೂ, ಪ್ರೊ ಮಾದರಿ ಮಾತ್ರ 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಇನ್ನುಳಿದಂತೆ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್, 5G + Wi-Fi 6 ಬೆಂಬಲ, Bluetooth 5.4, NFC, ಮಲ್ಟಿ-ಸಿಸ್ಟಂ GPS (BeiDou, QZSS, GLONASS), IR Blaster ಫೀಚರ್ಸ್‌ಗಳು ಲಭ್ಯವಾಗಿವೆ. ಕೊನೆಯದಾಗಿ, Oppo Reno 15 Pro 161.26x76.46x7.65mm ಆಯಾಮಗಳನ್ನು ಹೊಂದಿದೆ ಮತ್ತು ಸುಮಾರು 205g ತೂಗುತ್ತದೆ. ಇತ್ತ, Reno 15 151.21x72.42x7.99mm ಆಯಾಮಗಳನ್ನು ಹೊಂದಿದ್ದು, 188g ವರೆಗೆ ತೂಗುತ್ತದೆ.
Oppo Reno 15 ಮತ್ತು Oppo Reno 15 Pro : ಬೆಲೆ ಮತ್ತು ಲಭ್ಯತೆ
ಚೀನಾದಲ್ಲಿ Reno 15 Pro ಮಾದರಿಯ ಬೆಲೆ CNY 3,699 (ಸು. ₹46,000) ನಿಂದ ಪ್ರಾರಂಭವಾಗುತ್ತಿದ್ದು, 1TB ವರೆಗೆ ಸ್ಟೋರೇಜ್ ಹೊಂದಿರುವ ಟಾಪ್ ಮಾದರಿಯ ಬೆಲೆ CNY 4,799 (ಸು. ₹60,000) ಇದೆ. ಸ್ಟಾಂಡರ್ಡ್ Reno 15 ಮಾದರಿಯ ಬೆಲೆ CNY 2,999 (ಸು. ₹37,000) ನಿಂದ ಆರಂಭವಾಗುತ್ತದೆ ಮತ್ತು ಗರಿಷ್ಠ 1TB ಸ್ಟೋರೇಜ್ ಆಯ್ಕೆ ಇಲ್ಲಿ ಕೂಡ ಲಭ್ಯವಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ನವೆಂಬರ್ 21ರಿಂದ ಮಾರಾಟಕ್ಕೆ ಬರುತ್ತಿದ್ದು, ಗ್ರಾಹಕರು Starlight Bow, Honey Gold, Aurora Blue, Canele Brown ಮುಂತಾದ ಆಯ್ಕೆಯ ಬಣ್ಣಗಳನ್ನು ಫೋನ್‌ಗಳನ್ನು ಖರೀದಿಸಬಹುದು. ಇನ್ನು Oppo Reno 15 ಸರಣಿಯು ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಸಧ್ಯಕ್ಕೆ ದೊರೆತಿಲ್ಲ. ಆದರೆ, ಖಂಡಿಯವಾಗಿಯೂ ಶೀಘ್ರ ಬಿಡುಗಡೆಯನ್ನು ನಿರೀಕ್ಷಿಸಬಹುದು.ಏಕೆಂದರೆ, ಬಹುಶಃ ಈ ಸರಣಿಗೆ ಭಾರತದಲ್ಲೇ ಅತಿ ಹೆಚ್ಚು ಅಭಿಮಾನಿಗಳು ಇರುವುದು.!


Click it and Unblock the Notifications








