Home
ಮೊಬೈಲ್

ಭಾರತದಲ್ಲಿ Oppo Reno 15 ಸರಣಿ ಲಾಂಚ್ ಟೈಮ್‌ಲೈನ್ ಮತ್ತು ಬೆಲೆ ಲೀಕ್!

ವಿಶ್ವ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ Oppo Reno 15 ಸರಣಿಯು ಇದೇ ನವೆಂಬರ್ 17 ರಂದು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಈ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗುವ ಕುರಿತಂತೆ ಇತ್ತೀಚಿನ ವಿಶ್ವಾಸಾರ್ಹ ವರದಿಯೊಂದು ಸೂಚಿಸಿದ್ದು, ದೇಶದಲ್ಲಿ Oppo Reno 15 ಸರಣಿಯು 2026ರ ಫೆಬ್ರವರಿಯ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.! Oppo ಕಂಪನಿಯ ಈ ಹಿಂದಿನ ಬಿಡುಗಡೆಯ ಪ್ಯಾಟರ್ನ್ ಅನ್ನು ಗಮನಿಸಿದರೆ ಈ ಸಮಯವು ಸಾಕಷ್ಟು ನಿಖರವಾಗಿರಬಹುದು.!

ಹೌದು, ಟಿಪ್‌ಸ್ಟರ್ ಯೋಗೇಶ್ ಬ್ರಾರ್ (@heyitsyogesh) ಅವರನ್ನು ಉಲ್ಲೇಖಿಸಿ ಸ್ಮಾರ್ಟ್‌ಪ್ರಿಕ್ಸ್ ವರದಿ ಮಾಡಿರುವ ಪ್ರಕಾರ, ಫೆಬ್ರವರಿ 2026 ರ ವೇಳೆಗೆ ಭಾರತ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿ Oppo Reno 15 ಸರಣಿಯು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ವರದಿಯು, Reno 15 ಮೂಲ ಮಾದರಿಯ ದರವನ್ನು ₹43,000 ಸುತ್ತಮುತ್ತ ನಿಗದಿಪಡಿಸಬಹುದು ಎಂದು ಹೇಳಿದೆ. ಒಂದು ವೇಳೆ ಇದೇ ಬೆಲೆಯು ಅಧಿಕೃತವಾದರೆ, ಈ ಫೋನ್ ನೇರವಾಗಿ ದೇಶದ ಪ್ರೀಮಿಯಂ ಮಿಡ್-ರೇಂಜ್ ಸೆಗ್ಮೆಂಟ್‌ನಲ್ಲ ಬಾರೀ ಸ್ಪರ್ಧೆಯನ್ನು ನೀಡಬಹುದು.

Oppo Reno 15: ಜಾಗತಿಕ ಆವೃತ್ತಿಯು ಹೇಗಿರಲಿದೆ?
ಮುಂಬರುವ Oppo Reno 15 ಸರಣಿಯು ಚೀನಾದಲ್ಲಿ MediaTek Dimensity 8450 SoC ಚಿಪ್‌ಸೆಟ್ ಹೊಂದಿರಲಿದೆ. ಆದರೆ. ಇದರ ಬದಲಿಗೆ ಜಾಗತಿಕ ಹಾಗೂ ಭಾರತೀಯ ಆವೃತ್ತಿಗಳು Snapdragon 7 Gen 4 ಚಿಪ್‌ಸೆಟ್ ಪಡೆಯಲಿವೆ ಎಂದು ಹೇಳಲಾಗಿದೆ. ಡೇ-ಟು-ಡೇ ಬಳಕೆ ಮತ್ತು ಗೇಮಿಂಗ್‌ನಲ್ಲಿ ಹೆಚ್ಚು ಸ್ಥಿರ ಮತ್ತು ವಿಶ್ವಾಸಾರ್ಹ ಕಾರ್ಯನಿರ್ವಹಣೆಗೆ ಈ ಬದಲಾವಣೆಯನ್ನು ತರುತ್ತಿರಬಹುದು. ಹಾಗೆಯೇ, ಈ ಫೋನ್ Android 16 ಆಧಾರಿತ ColorOS 16 ನೊಂದಿಗೆ ಹೊರ ಬರುವ ನಿರೀಕ್ಷೆ ಇದೆ.

ಭಾರತದಲ್ಲಿ Oppo Reno 15 ಸರಣಿ ಲಾಂಚ್ ಟೈಮ್‌ಲೈನ್ ಮತ್ತು ಬೆಲೆ ಲೀಕ್!

ಡಿಸ್‌ಪ್ಲೇ ವಿಭಾಗದಲ್ಲಿ, ಬೇಸ್ Oppo Reno 15 ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್ ಸಾಮರ್ಥ್ಯದ 6.59-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಮತ್ತು ಇದು 120Hz ರಿಫ್ರೆಶ್ ರೇಟ್ ನೀಡುವ ನಿರೀಕ್ಷಿಸಲಾಗಿದೆ. ಹಿಂದಿನ Reno ಮಾದರಿಗಿಂತ ತೆಳುವಾದ ಬೇಜಲ್‌ಗಳು ಫೋನ್ ಅನ್ನು ಇನ್ನಷ್ಟು ಪ್ರೀಮಿಯಂ ಲುಕ್ ನೀಡುವಂತೆ ಮಾಡಬಹುದು. ಇನ್ನು ಈ ಭಾರಿ ರಿ ಪ್ರಮುಖ ಹಾರ್ಡ್‌ವೇರ್ ಬದಲಾವಣೆಗಳಿಗಿಂತ ಉತ್ತಮ ಕ್ಯಾಮೆರಾ ನಮ್ಯತೆಯ ಮೇಲೆ ಒಪ್ಪೋ ಗಮನಹರಿಸುತ್ತಿದೆ ಎಂದು ಟಿಪ್‌ಸ್ಟರ್ ಹೇಳಿಕೊಂಡಿದ್ದಾರೆ.

ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, Oppo Reno 15 ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಭಾಗದ ಸೆಟಪ್ ಅನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ, ಇದರಲ್ಲಿ ಶಕ್ತಿಯುತ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಶೂಟರ್ ಮತ್ತು 3.5x ಆಪ್ಟಿಕಲ್ ಜೂಮ್ ಹೊಂದಿರುವ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಇರುವ ನಿರೀಕ್ಷೆ ಇದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಈ ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಸಾಮರ್ಥ್ಯ ಮುಂಭಾಗದ ಕ್ಯಾಮೆರಾವನ್ನು ಹೊಂದಿರಬಹುದು ಎಂದು ವರದಿಯಾಗಿದೆ.

ಬ್ಯಾಟರಿ ಮತ್ತು ಇತರ ಫೀಚರ್‌ಗಳಲ್ಲಿ, Oppo Reno 15 ಸ್ಮಾರ್ಟ್‌ಫೋನ್ ದೊಡ್ಡ 6,500mAh ಬ್ಯಾಟರಿಯನ್ನು ಹೊಂದಿರಬಹುದು, ಇದು 80W ವೈರ್ಡ್ SuperVOOC ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಬಹುದು. ಜೊತೆಗೆ Wi-Fi 7, NFC, ಮತ್ತು in-display fingerprint sensor ವೈಶಿಷ್ಟ್ಯಗಳು ಇರಲಿವೆ ಎನ್ನಲಾಗಿದೆ. Oppo Reno 15 ಸರಣಿಯು 2026 ಆರಂಭದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಚರ್ಚೆಯ ವಿಷಯವಾಗುವ ಸಾಧ್ಯತೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+