Home
ಮೊಬೈಲ್

Reno 15 ಸರಣಿ ಲಾಂಚ್ ಡೇಟ್ ಲೀಕ್: ಕಡಿಮೆ ಬೆಲೆಗೆ Reno 15 Pro Mini ಆಗಮನ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ OPPO ತನ್ನ ಬಹು ನಿರೀಕ್ಷಿತ Reno 15 ಸರಣಿಯನ್ನು ಭಾರತದಲ್ಲಿ ಶೀಘ್ರವೇ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ದೃಢಪಡಿಸಿದೆ. ಈ ಹೊಸ Reno ಸರಣಿಯಲ್ಲಿ Reno 15, Reno 15 Pro, Reno 15 Pro Mini ಸ್ಮಾರ್ಟ್‌ಫೋನ್‌ಗಳು ಪರಿಚಯಗೊಳ್ಳುವುದು ಈಗಾಗಲೇ ಖಚಿತವಾಗಿದೆ. ಈ ಸಿಹಿಸುದ್ದಿಗಳ ನಡುವೆಯೇ, ಇದೀಗ ವಿಶ್ವಾಸಾರ್ಹ ಮೂಲಗಳಿಂದ Reno 15 ಸರಣಿಯ ಭಾರತೀಯ ಲಾಂಚ್ ದಿನಾಂಕ ಮತ್ತು ಬೆಲೆ ಶ್ರೇಣಿ ಕುರಿತು ಮಾಹಿತಿ ಲೀಕ್ ಆಗಿದೆ. ಈ ಲೀಕ್‌ಗಳು ಟೆಕ್ ವಲಯದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿವೆ.

ಹೌದು, OPPO ಭಾರತದಲ್ಲಿ ತನ್ನ Reno 15 ಸರಣಿ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಜನಪ್ರಿಯ ಟಿಪ್‌ಸ್ಟಾರ್ ಪಾರಸ್ ಗುಗ್ಲಾನಿ ನೀಡಿರುವ ಮಾಹಿತಿಯ ಪ್ರಕಾರ, OPPO Reno 15 ಸರಣಿ ಜನವರಿ 8ರಂದು ಮಧ್ಯಾಹ್ನ 12 ಗಂಟೆಗೆ (IST) ಭಾರತ ಸೇರಿದಂತೆ ಜಾಗತಿಕವಾಗಿ ಕೆಲವು ಮಾರುಕಟ್ಟೆಗಳಲ್ಲಿ ಅನಾವರಣಗೊಳ್ಳಲಿದೆ. ಜೊತೆಗೆ, ಬೆಲೆ ವಿಚಾರದಲ್ಲಿ, ಸ್ಟ್ಯಾಂಡರ್ಡ್ Reno 15 ಮಾದರಿಯ ಬೆಲೆ ರೂ.50,000 ಒಳಗೇ ಇರಲಿದೆ, ಆದರೆ Reno 15 Pro Mini ರೂ.40,000 ಒಳಗೆ ಪರಿಚಯವಾಗುವ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಸರಣಿಯ ಪ್ರೊ ಮಾದರಿಯಾದ Reno 15 Pro ಈ ಹಿಂದಿನ ತಲೆಮಾರಿಗಿಂತ ಸ್ವಲ್ಪ ದುಬಾರಿಯಾಗಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ Reno 14 Pro ಗೆ ರೂ.5,000 ಬೆಲೆ ಏರಿಕೆ ಕಂಡುಬಂದಿದ್ದನ್ನು ಗಮನಿಸಿದರೆ, ಈ ಮಾಹಿತಿಯು ಬಹುತೇಕ ನಿಜವಾಗುವ ಸಾಧ್ಯತೆ ಇದೆ. ಪಾರಸ್ ಗುಗ್ಲಾನಿ ಅವರ ಪ್ರಕಾರ, ಬಿಡುಗಡೆ ಬಳಿಕ, ಈ ಸ್ಮಾರ್ಟ್‌ಫೋನ್‌ಗಳು Amazon, Flipkart ಮತ್ತು OPPO ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ. ಆನ್‌ಲೈನ್ ಫ್ಲ್ಯಾಶ್ ಸೇಲ್‌ಗಳು ಮತ್ತು ಲಾಂಚ್ ಆಫರ್‌ಗಳಿಗೂ ಅವಕಾಶ ಸಹ ಇರಬಹುದು ಎಂದಿದ್ದಾರೆ.

ಮತ್ತೊಂದೆ, ಟಿಪ್ಸ್ಟರ್ ಸುಧಾಂಶು ಅಂಭೋರೆ ಅವರು Reno 15 ಸರಣಿಯ ಮಾದರಿಗಳು ಮತ್ತು ಜಾಗತಿಕ ಬೆಲೆಗಳ ರೆಂಡರ್‌ಗಳನ್ನು ಹಂಚಿಕೊಂಡಿದ್ದಾರೆ. ಇವರ ಪ್ರಕಾರ OPPO ಜಾಗತಿಕ ಮಾರುಕಟ್ಟೆಯಲ್ಲಿ ರೆನೋ 15 FS ಎಂದು ಕರೆಯಲ್ಪಡುವ ಮತ್ತೊಂದು ಮಾದರಿಯನ್ನು ಬಿಡುಗಡೆ ಮಾಡಲಿದೆ. ಬೆಲೆಗೆ ಸಂಬಂಧಿಸಿದಂತೆ, ಸ್ಟಾಂಡರ್ಡ್ Reno 15 8GB/512GB ಮಾದರಿಗೆ EUR 599 (ಸುಮಾರು ರೂ. 63,275) ಬೆಲೆಯನ್ನು ನಿಗದಿಪಡಿಸಲಾಗಿದೆ ಮತ್ತು ಪ್ರೊ ಮಾದರಿ Reno 15 Pro 12GB/512GB ಆವೃತ್ತಿಗೆ EUR 799 (ಸುಮಾರು ರೂ. 84,395) ಬೆಲೆಯನ್ನು ನಿಗದಿಪಡಿಸಲಾಗಿದೆ.

Reno 15 ಸರಣಿ ಲಾಂಚ್ ಡೇಟ್ ಲೀಕ್: ಕಡಿಮೆ ಬೆಲೆಗೆ Reno 15 Pro Mini ಆಗಮನ!

ಕೊನೆಯದಾಗಿ, Reno 15 FS ಇತರ ಮಾದರಿಗಳಿಗೆ ಹೋಲಿಸಿದರೆ ಕೈಗೆಟುಕುವ ಕೊಡುಗೆಯಾಗಿ ಕಾಣಿಸಿದೆ. ಇದು 8GB/512GB ಮಾದರಿಗೆ EUR 469 (ಸುಮಾರು ರೂ. 49,539) ಬೆಲೆ ಹೊಂದಿರುವ ನಿರೀಕ್ಷೆಯಿದೆ. ಜಾಗತಿಕವಾಗಿ ಕೈಗೆಟುಕುವ ಮಾದರಿಯಾಗಿ ಬರುತ್ತಿರುವ OPPO Reno 15 FS ಪೋನ್ ಭಾರತದಲ್ಲಿ Reno 15 Pro Mini ಆಗಿ ಬರುತ್ತಿರಲೂಬಹುದು ಎಂಬುದು ನಮ್ಮ ಅಭಿಪ್ರಾಯ. ಆದರೆ, ಈ ಮಾಹಿತಿ ಇನ್ನೂ ಅಧಿಕೃತವಾಗಿಲ್ಲ. ಅದಾಗ್ಯೂ, OPPO ಈಗಾಗಲೇ ದೃಢಪಡಿಸಿರುವಂತೆ ಭಾರತಕ್ಕೆ ಬರುತ್ತಿರುವ Reno 15 ಸರಣಿಯ ಕೆಲವು ವೈಶಿಷ್ಟ್ಯಗಳ ಮಾಹಿತಿ ಬಹಿರಂಗವಾಗಿದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, OPPO ಈಗಾಗಲೇ ದೃಢಪಡಿಸಿರುವಂತೆ Reno 15 ಸರಣಿ ಭಾರತದಲ್ಲೇ ಮೊದಲ ಬಾರಿಗೆ HoloFusion ತಂತ್ರಜ್ಞಾನವನ್ನು ಪರಿಚಯಿಸಲಿದೆ. ಇದು ಅತಿ ಸೂಕ್ಷ್ಮ ನ್ಯಾನೋ-ಎಂಗ್ರೇವಿಂಗ್ ಪ್ರಕ್ರಿಯೆಯ ಮೂಲಕ ಗಾಜಿನ ಮೇಲ್ಮೈಯಲ್ಲಿ 3D ತರಹದ ಆಕರ್ಷಕ ದೃಶ್ಯ ಪರಿಣಾಮಗಳನ್ನು ಸೃಷ್ಟಿಸುತ್ತದೆ. ಜೊತೆಗೆ, ಫೋನ್‌ಗಳಲ್ಲಿ ಡೈನಾಮಿಕ್ ಸ್ಟೆಲ್ಲರ್ ರಿಂಗ್ ವಿನ್ಯಾಸ, ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್, ಮತ್ತು AI ಪೋರ್ಟ್ರೇಟ್ ಕ್ಯಾಮೆರಾ ತಂತ್ರಜ್ಞಾನ ಇರಲಿದೆ ಎಂದು ಕಂಪನಿ ತಿಳಿಸಿದೆ.

ಒಟ್ಟಾರೆಯಾಗಿ, OPPO Reno 15 ಸರಣಿಯು ಹೊಸ ವಿನ್ಯಾಸ, ಶಕ್ತಿಯು ಕ್ಯಾಮೆರಾ ಮತ್ತು ಹೊಸ ತಂತ್ರಜ್ಞಾನಗಳ ಸಮತೋಲನದೊಂದಿಗೆ ಭಾರತೀಯ ಗ್ರಾಹಕರ ಗಮನ ಸೆಳೆಯಲು ಸಿದ್ಧವಾಗಿದೆ. ಅಧಿಕೃತ ಲಾಂಚ್ ಬಳಿಕ ನಿಖರ ಬೆಲೆ, ಸಂಪೂರ್ಣ ಸ್ಪೆಸಿಫಿಕೇಶನ್ ಮತ್ತು ಆಫರ್ ವಿವರಗಳು ಬಹಿರಂಗವಾಗಲಿದ್ದು, ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಮಹತ್ವದ ಅಪ್‌ಡೇಟ್ ಆಗಿರಲಿದೆ. ನೀವು ಕೂಡ ಹೊಸ Reno ಸರಣಿಯ ಆಗಮನಕ್ಕಾಗಿ ಕಾಯುತ್ತಿದ್ದೀರಾ?.. ಹಾಗಾದರೆ, ಈ ಕೆಳಗೆ ಹೌದು ಎಂದು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
OPPO is set to launch its much-anticipated Reno 15 series in India soon, with leaks suggesting a January 8 debut. The lineup is expected to include the Reno 15, Reno 15 Pro, and Reno 15 Pro Mini, with prices likely starting under ₹40,000 for the Pro Mini and under ₹50,000 for the standard model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+