ಭಾರತದಲ್ಲಿ Reno 15 ಸರಣಿ ಲಾಂಚ್ ಡೇಟ್ ಫಿಕ್ಸ್: Pro Mini 5G ಆಕರ್ಷಕ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ OPPO ತನ್ನ ಬಹುನಿರೀಕ್ಷಿತ Reno 15 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಅಧಿಕೃತ ದಿನಾಂಕವನ್ನು ಇಂದು ಪ್ರಕಟಿಸಿದೆ. ಈ ಹೊಸ ಸರಣಿಯಲ್ಲಿ Reno 15 Pro 5G, Reno 15 Pro Mini 5G ಮತ್ತು Reno 15 5G ಎಂಬ ಮೂರು ಸ್ಮಾರ್ಟ್‌ಫೋನ್‌ಗಳು ಇರಲಿವೆ ಎಂಬುದು ಈಗಾಗಲೇ ದೃಢವಾಗಿದೆ. ಪ್ರೀಮಿಯಂ ವಿನ್ಯಾಸ, ಸುಧಾರಿತ ಕ್ಯಾಮೆರಾ ವ್ಯವಸ್ಥೆ ಮತ್ತು AI ಆಧಾರಿತ ಫೀಚರ್‌ಗಳು ಈ ಸರಣಿಯ ಪ್ರಮುಖ ಆಕರ್ಷಣೆಯಾಗಲಿವೆ. ಮುಂಬರುವ Reno 15 ಸರಣಿ ಯ ಕುರಿತಂತೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
OPPO India ಇಂದು (2, ಶುಕ್ರವಾರ) ಅಧಿಕೃತವಾಗಿ ಪ್ರಕಟಿಸಿರುವಂತೆ, ಜನವರಿ 8 ರಂದು ಭಾರತದಲ್ಲಿ Reno 15 ಸರಣಿಯನ್ನು ಅನಾವರಣಗೊಳಿಸಲಾಗುತ್ತದೆ. ಟೀಸರ್‌ನಲ್ಲಿ ಪೋರ್ಟ್ರೇಟ್ (Portrait) ಫೋಟೋಗ್ರಫಿ ಮತ್ತು ವೀಡಿಯೊ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ಹೊಸ ಕ್ಯಾಮೆರಾ ವ್ಯವಸ್ಥೆಯ ಮೇಲೆ ಕಂಪನಿ ವಿಶೇಷ ಒತ್ತು ನೀಡಿದೆ. ಇದರಿಂದ ಈ ಸರಣಿಯಲ್ಲಿ ಅಪ್‌ಗ್ರೇಡ್ ಮಾಡಿದ ಕ್ಯಾಮೆರಾ ಹಾರ್ಡ್‌ವೇರ್ ಬಳಕೆಯಾಗಿರುವುದು ಸ್ಪಷ್ಟವಾಗುತ್ತದೆ. ಈ ಸರಣಿಯು ಪ್ರೀಮಿಯಂ ಮಿಡ್-ರೇಂಜ್ ವಿಭಾಗದಲ್ಲಿ ಹೆಚ್ಚು ಸ್ಪರ್ಧೆಯನ್ನು ತರುವುದು ಖಾತ್ರಿಯಾದಂತಿದೆ.
Reno 15 ಸರಣಿ: ಗಮನಸೆಳೆಯುವ ಕ್ಯಾಮೆರಾ ಫೀಚರ್ಸ್
OPPO ಈ ಹೊಸ Reno 15 ಸರಣಿಯಲ್ಲಿ ಒಪ್ಪೊ ಪೋರ್ಟ್ರೇಟ್ ಫೋಟೋಗ್ರಫಿ ಮತ್ತು ವೀಡಿಯೋ ರೆಕಾರ್ಡಿಂಗ್ ಮೇಲೆ ವಿಶೇಷ ಗಮನ ಹರಿಸಿದೆ. Reno 15 Pro ಮತ್ತು Pro Mini ಮಾದರಿಗಳಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ನೀಡಲಾಗಿದ್ದು, ಇದು ಹೈ-ಡಿಟೇಲ್ ಫೋಟೋಗಳು ಮತ್ತು ಉತ್ತಮ ಲೋ-ಲೈಟ್ ಪ್ರದರ್ಶನಕ್ಕೆ ಸಹಾಯ ಮಾಡಲಿದೆ. ಜೊತೆಯಾಗಿ 50 ಮೆಗಾಪಿಕ್ಸೆಲ್ 3.5x ಟೆಲಿಫೋಟೋ ಪೋರ್ಟ್ರೇಟ್ ಲೆನ್ಸ್ ಹಾಗೂ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಸೇರಿವೆ. 3.5x ಆಪ್ಟಿಕಲ್ ಜೂಮ್ ಬೆಂಬಲದಿಂದ ದೂರದ ವಿಷಯಗಳೂ ಸ್ಪಷ್ಟವಾಗಿ ಸೆರೆಹಿಡಿಯಬಹುದು ಎಂದು ತಿಳಿಸಲಾಗಿದೆ.
ವೀಡಿಯೋ ಪ್ರಿಯರಿಗೆ ಸಹ ಈ ಸರಣಿ ವಿಶೇಷ ಆಕರ್ಷಣೆಯಾಗಲಿದೆ. Reno 15 Pro ಮತ್ತು Pro Mini ಮಾದರಿಗಳು ಎಲ್ಲಾ ಕ್ಯಾಮೆರಾಗಳಲ್ಲೂ 4K HDR ವೀಡಿಯೋ ರೆಕಾರ್ಡಿಂಗ್ (60fps ವರೆಗೆ) ಬೆಂಬಲಿಸುತ್ತವೆ. ಎಲೆಕ್ಟ್ರಾನಿಕ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, ಡ್ಯುಯಲ್ ವ್ಯೂ ವೀಡಿಯೋ, ಮತ್ತು ವೀಡಿಯೋ ಚಿತ್ರೀಕರಣದ ನಡುವೆಯೇ ಫೋಟೋ ತೆಗೆಯುವ ಸೌಲಭ್ಯಗಳು ಕಂಟೆಂಟ್ ಕ್ರಿಯೇಟರ್‌ಗಳಿಗೆ ಉಪಯುಕ್ತವಾಗಲಿವೆ.

ಸ್ಟ್ಯಾಂಡರ್ಡ್ Oppo Reno 15 5G ಕೂಡ ಕ್ಯಾಮೆರಾ ವಿಭಾಗದಲ್ಲಿ ಹಿಂದೆ ಬೀಳುವುದಿಲ್ಲ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್, ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುವುದರಿಂದ ವೀಡಿಯೋ ಕಾಲ್ ಮತ್ತು ಸೆಲ್ಫಿಗಳಿಗೆ ಉತ್ತಮ ಗುಣಮಟ್ಟ ಸಿಗಲಿದೆ.
OPPO ಈ ಬಾರಿ AI ತಂತ್ರಜ್ಞಾನವನ್ನು ಇನ್ನಷ್ಟು ಮುಂದುವರಿಸುತ್ತಾ, ಒಪ್ಪೊ AI Editor 3.0 ಅನ್ನು ಪರಿಚಯಿಸಿದೆ. AI ಪೋರ್ಟ್ರೇಟ್ ಗ್ಲೋ, ಮೋಷನ್ ಫೋಟೋ ಎಡಿಟಿಂಗ್ ಮತ್ತು ಗುಂಪು ಫೋಟೋ ಸುಧಾರಣೆಗಳಂತಹ ಫೀಚರ್‌ಗಳು ಸಾಮಾನ್ಯ ಬಳಕೆದಾರರಿಗೂ ಪ್ರೊಫೆಷನಲ್ ಅನುಭವ ನೀಡಲಿವೆ. ಪರಿಸರದ ಬೆಳಕು ಮತ್ತು ಬಣ್ಣಕ್ಕೆ ತಕ್ಕಂತೆ ಟೋನ್ ಬ್ಯಾಲೆನ್ಸಿಂಗ್ ಮಾಡುವ ತಂತ್ರಜ್ಞಾನವೂ ಈ ಸರಣಿಯಲ್ಲಿ ಅಳವಡಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ
Reno 15 ಸರಣಿ: ಬೆಲೆ ಮತ್ತು ಪ್ರಮುಖ ವೈಶಿಷ್ಟ್ಯಗಳು(ನಿರೀಕ್ಷಿತ)
ಡಿಸ್‌ಪ್ಲೇ ವಿಭಾಗದಲ್ಲಿ, Reno 15 Pro Mini ಮಾದರಿಯು 6.32 ಇಂಚಿನ AMOLED, Reno 15 ಪ್ರೋನಲ್ಲಿ 6.78 ಇಂಚಿನ AMOLED, ಮತ್ತು Reno 15ನಲ್ಲಿ 6.59 ಇಂಚಿನ AMOLED ಡಿಸ್ಪ್ಲೇ ನಿರೀಕ್ಷಿಸಲಾಗಿದೆ. ಡಿಸೈನ್ ಮತ್ತು ಬಿಲ್ಡ್ ಗುಣಮಟ್ಟದ ವಿಷಯದಲ್ಲೂ Reno 15 ಸರಣಿ ಪ್ರೀಮಿಯಂ ಅನುಭವ ನೀಡಬಹುದು. ಈ ಸರಣಿಯ ಎಲ್ಲಾ ಫೋನ್‌ಗಳು ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ ಮತ್ತು ಹೋಲೋಫ್ಯೂಷನ್ ಟೆಕ್ನಾಲಜಿಯೊಂದಿಗೆ ಬರಲಿವೆ. ಜೊತೆಗೆ ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆಗಾಗಿ IP66, IP68 ಮತ್ತು IP69 ರೇಟಿಂಗ್‌ಗಳು ಇರಲಿವೆ.
ಲೀಕ್ ಪ್ರಕಾರ, Reno 15 Pro Mini ಮೀಡಿಯಾಟೆಕ್ ಡೈಮೆನ್ಸಿಟಿ 8450 ಪ್ರೊಸೆಸರ್, 6,200mAh ಬ್ಯಾಟರಿ, ಮತ್ತು 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು. 12GB RAM ಮತ್ತು 256GB ಸ್ಟೋರೇಜ್ ಮಾದರಿಯು ಸುಮಾರು 64,999 ರೂ. ಬೆಲೆ ಹೊಂದಿರಬಹುದು. ಆದರೆ, ಲಾಂಚ್ ಆಫರ್‌ಗಳ ಮೂಲಕ ಕಡಿಮೆ ದರದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಈ ಸರಣಿಯ ಎಲ್ಲಾ ಫೋನ್‌ಗಳು ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಒಪ್ಪೊ ಇಂಡಿಯಾ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಬರಲಿವೆ. ಅಧಿಕೃತ ಬೆಲೆ ಮತ್ತು ಲಭ್ಯತೆ ಕುರಿತ ಸಂಪೂರ್ಣ ಮಾಹಿತಿ ಲಾಂಚ್ ದಿನವೇ ಪ್ರಕಟವಾಗಲಿದೆ.


Click it and Unblock the Notifications








