Home
ಮೊಬೈಲ್

ಭಾರತದಲ್ಲಿ Oppo Reno 15c 5G ಸೇಲ್ ಆರಂಭ: ಇಲ್ಲಿದೆ ಫುಲ್ ಡೀಟೇಲ್ಸ್!

ಈ ವರ್ಷದ ಆರಂಭದಲ್ಲಿ (ಜನವರಿ 8 ರಂದು) ಭಾರತದ ಮಾರುಕಟ್ಟೆಗೆ ಪರಿಚಯಗೊಂಡಿದ್ದ Oppo Reno 15c 5G ಸ್ಮಾರ್ಟ್‌ಫೋನ್ ಇದೀಗ ಖರೀದಿಗೆ ಲಭ್ಯವಾಗಿದೆ. ದೇಶದಲ್ಲಿ ಅನಾವರಣಗೊಂಡ ಕೆಲವು ವಾರಗಳ ನಂತರ, Oppo Reno 15c 5G ಸ್ಮಾರ್ಟ್‌ಫೋನ್ ಈಗ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ದೇಶದಲ್ಲಿ ಖರೀದಿಗೆ ಲಭ್ಯವಾಗಿದ್ದು, ಪ್ರೀಮಿಯಂ ಡಿಸೈನ್ ಮತ್ತು ಶಕ್ತಿಶಾಲಿ ಬ್ಯಾಟರಿಯೊಂದಿಗೆ ಮಧ್ಯಮ-ಪ್ರೀಮಿಯಂ ಬಳಕೆದಾರರ ಗಮನ ಸೆಳೆಯುತ್ತಿದೆ. ಈ ಹೊಸ ಫೋನ್ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Oppo Reno 15c 5G: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Oppo Reno 15c 5G ಬೆಲೆ 8GB+256GB RAM ಮಾದರಿಗೆ 34,999 ರಿಂದ ಪ್ರಾರಂಭವಾಗುತ್ತದೆ. ಇದರ 12GB RAM ವೇರಿಯಂಟ್‌ಗೆ ರೂ. 37,999 ನಿಗದಿಪಡಿಸಲಾಗಿದೆ. ಬಿಡುಗಡೆಯ ಕೊಡುಗೆಯಾಗಿS BI, HDFC ಬ್ಯಾಂಕ್, IDFC ಫಸ್ಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಕಾರ್ಡ್‌ ಮೂಲಕ ಪಾವತಿ ಮಾಡಿದರೆ ಶೇ.10 ರಷ್ಟು ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಆಫರ್ ದೊರೆಯಲಿದೆ. ಈ ಫೋನ್ ಪ್ರಸ್ತುತ ಅಮೆಜಾನ್ ಮೂಲಕ ಮಾರಾಟಕ್ಕೆ ಬಂದಿದ್ದು, Afterglow Pink ಮತ್ತು Twilight Blue ಎರಡು ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು.

Oppo Reno 15c 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Oppo Reno 15c 5G ಫೋನ್ 6.57-ಇಂಚಿನ ಪೂರ್ಣ-HD+ (1,080x2,372 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೆಯು 120Hz ವರೆಗೆ ರಿಫ್ರೆಶ್ ರೇಟ್, 240Hz ವರೆಗೆ ಟಚ್ ಸ್ಯಾಂಪ್ಲಿಂಗ್ ರೇಟ್, 100 ಪ್ರತಿಶತ DCI-P3 ಬಣ್ಣದ ಗ್ಯಾಮಟ್, 1.07 ಬಿಲಿಯನ್ ಬಣ್ಣಗಳು, 397 ppi ಪಿಕ್ಸೆಲ್ ಸಾಂದ್ರತೆ, 1,400 nits ವರೆಗೆ ಗರಿಷ್ಠ ಹೊಳಪು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ನೀಡುತ್ತದೆ. ಜೀವಂತ ಬಣ್ಣಗಳು ಮತ್ತು ಸ್ಮೂತ್ ಸ್ಕ್ರೋಲಿಂಗ್ ಅನುಭವ ನೀಡುವ ಈ ಡಿಸ್‌ಪ್ಲೆಯು ವೀಡಿಯೊ ಸ್ಟ್ರೀಮಿಂಗ್ ಮತ್ತು ಗೇಮಿಂಗ್‌ಗೆ ಸೂಕ್ತವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಭಾರತದಲ್ಲಿ Oppo Reno 15c 5G ಸೇಲ್ ಆರಂಭ: ಇಲ್ಲಿದೆ ಫುಲ್ ಡೀಟೇಲ್ಸ್!

ಕಾರ್ಯಕ್ಷಮತೆಗಾಗು, ಈ ಸ್ಮಾರ್ಟ್‌ಫೋನ್ Qualcomm Snapdragon 6 Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಇದನ್ನು ಅಡ್ರಿನೊ 710 GPU, 12GB ವರೆಗಿನ LPDDR4x RAM ಮತ್ತು 512GB ವರೆಗಿನ UFS 3.1 ಅಂತರ್ನಿರ್ಮಿತ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. 4nm ತಂತ್ರಜ್ಞಾನದಲ್ಲಿ ತಯಾರಿಸಲಾದ ಈ ಚಿಪ್‌ಸೆಟ್ ಉತ್ತಮ ಎಫಿಷಿಯನ್ಸಿ ಒದಗಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಸಾಫ್‌ವೇರ್ ವಿಭಾಗದಲ್ಲಿ, ColorOS 16 ಆಧಾರಿತ Android 16 ಈ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಫೀಚರ್‌ಗಳು ಮತ್ತು ಸ್ಮೂತ್ ಯೂಸರ್ ಎಕ್ಸ್‌ಪೀರಿಯನ್ಸ್ ನೀಡುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಎರಡು-ಆಕ್ಸಿಸ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50-ಮೆಗಾಪಿಕ್ಸೆಲ್ (f/1.8) ಮುಖ್ಯ ಶೂಟರ್, 8-ಮೆಗಾಪಿಕ್ಸೆಲ್ (f/2.2) ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ (f/2.4) ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ, ರೆನೊ 15c 5G 50-ಮೆಗಾಪಿಕ್ಸೆಲ್ (f/2.0) ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ, ಇದನ್ನು ಹೋಲ್ ಪಂಚ್ ಡಿಸ್ಪ್ಲೇ ಕಟೌಟ್ ಒಳಗೆ ಇರಿಸಲಾಗಿದೆ. ಇದು 4K/30 fps ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬ್ಯಾಟರಿ ವಿಭಾಗದಲ್ಲಿ, 80W SuperVOOC ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 7,000mAh ಬ್ಯಾಟರಿ ಇದೆ. ಸಂಪರ್ಕಕ್ಕಾಗಿ, ಫೋನ್ ವೈ-ಫೈ 5, ಬ್ಲೂಟೂತ್ 5.1, ಯುಎಸ್‌ಬಿ ಟೈಪ್-ಸಿ ಪೋರ್ಟ್, ಜಿಪಿಎಸ್, ಗ್ಲೋನಾಸ್, ಬೀಡೌ, ಗೆಲಿಲಿಯೊ ಮತ್ತು ಕ್ಯೂಝಡ್‌ಎಸ್‌ಎಸ್ ಬೆಂಬಲವನ್ನು ಹೊಂದಿದೆ. ಭದ್ರತೆಗಾಗಿ ಇದು ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಪಡೆಯುತ್ತದೆ. ತೂಕ ಮತ್ತು ಅಳತೆಯನ್ನು ನೋಡುವುದಾದರೆ, ಈ ಫೋನ್ 158.2x74.9mmx8.1mm ಆಯಾಮಗಳನ್ನು ಹೊಂದಿದೆ ಮತ್ತು ಸುಮಾರು 195g ತೂಗುತ್ತದೆ.

Best Mobiles in India

English summary
The Oppo Reno 15c 5G is now available for purchase in India via Amazon. Priced starting at ₹34,999, the smartphone offers a premium design, powerful battery, up to 12GB RAM, and attractive bank cashback offers, making it a strong mid-premium option for buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+