ಶೀಘ್ರದಲ್ಲೇ 'ಒಪ್ಪೊ ರೆನೊ'ಗೆ ಸಿಗಲಿದೆ 'ಆಂಡ್ರಾಯ್ಡ್ 10' ಅಪ್‌ಡೇಟ್!
ಜನಪ್ರಿಯ ಸ್ಮಾರ್ಟ್‌ಫೋನ್ 'ಒಪ್ಪೊ ರೆನೊ' ಕೂಡ ಶೀಘ್ರದಲ್ಲೇ ಆಂಡ್ರಾಯ್ಡ್ 10 ಓಎಸ್ ಅಪ್‌ಡೇಟ್ ಪಡೆಯಲಿದೆ ಎಂದು ತಿಳಿದುಬಂದಿದೆ. ಒಪ್ಪೊ ರೆನೊ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ಬೀಟಾ ಅಪ್‌ಡೇಟ್ ಅನ್ನು ಪಡೆಯುತ್ತಿದ್ದು, ಅದು ಕಲರ್ ಓಎಸ್ 6 ಸ್ಕಿನ್‌ನೊಂದಿಗೆ ಬರುತ್ತದೆ ಎಂದು ವರದಿಗಳು ತಿಳಿಸಿವೆ. ಹೊಸ ಆಂಡ್ರಾಯ್ಡ್ 10 ಓಎಸ್ ನವೀಕರಣವು ಡಾರ್ಕ್ ಮೋಡ್, ಹೊಸ ಶಬ್ದಗಳು, ವಾಲ್‌ಪೇಪರ್‌ಗಳು ಮತ್ತು ಥೀಮ್‌ಗಳಲ್ಲಿ ರೆನೊ ಸ್ಮಾರ್ಟ್‌ಫೋನ್‌ಗಳನ್ನು ಸೇರಲಿದೆ ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿವೆ.

ಹೌದು, ಗೂಗಲ್ ಈ ಹಿಂದೆ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗಾಗಿ ಆಂಡ್ರಾಯ್ಡ್ 10 ನವೀಕರಣವನ್ನು ಬಿಡುಗಡೆ ಮಾಡಿತ್ತು. ಶೀಘ್ರದಲ್ಲೇ ಈ ಅಪ್‌ಡೇಟ್ 'ಒಪ್ಪೊ ರೆನೊ'ಗೆ ಸಿಗಲಿದೆ. ಒಪ್ಪೊ ರೆನೊ ಬಳಕೆದಾರರು ಶೀಘ್ರದಲ್ಲೇ ಆಂಡ್ರಾಯ್ಡ್ 10 ಅಪ್‌ಡೇಟ್‌ನಲ್ಲಿರುವ ಎಲ್ಲಾ ನವೀಕರಣಗಳನ್ನು ನೋಡಲು ಸಾಧ್ಯವಾಗುತ್ತದೆ. ಒನ್‌ಪ್ಲಸ್ ಮತ್ತು ಶಿಯೋಮಿ ಆಯ್ದ ಸ್ಮಾರ್ಟ್‌ಫೋನ್‌ಗಳ ನವೀಕರಣವನ್ನು ಹೊರತರುವ ವೇಳೆಯಲ್ಲೇ ಒಪ್ಪೊ ಕೂಡ ಇತ್ತೀಚೆಗೆ ಬಿಡುಗಡೆ ಮಾಡಿದ ರೆನೊ ಸ್ಮಾರ್ಟ್‌ಫೋನ್‌ಗಾಗಿ ನವೀಕರಣವನ್ನು ನೀಡುತ್ತಿದೆ.

ಆಂಡ್ರಾಯ್ಡ್ 10 ಅಪ್‌ಡೇಟ್‌ನಲ್ಲಿ ಗೆಸ್ಚರ್ ನ್ಯಾವಿಗೇಷನ್, ವೇಗದ ಭದ್ರತಾ ನವೀಕರಣಗಳು ಮತ್ತು ಫೋಕಸ್ ಮೋಡ್‌ನಂತಹ ವೈಶಿಷ್ಟ್ಯಗಳಿವೆ. ಸ್ಮಾರ್ಟ್ ರಿಪ್ಲೈ, ಲೈವ್ ಶೀರ್ಷಿಕೆಗಳು ಮತ್ತು ವರ್ಧಿತ ಗೌಪ್ಯತೆಯಂತಹ ವೈಶಿಷ್ಟ್ಯಗಳು ಸಹ ಹೆಚ್ಚು ಗಮನಸೆಳೆದಿವೆ. ಒಟ್ಟಿನಲ್ಲಿ ಒಪ್ಪೊವಿನ ಜನಪ್ರಿಯ ಸ್ಮಾರ್ಟ್‌ಫೋನ್ 'ಒಪ್ಪೊ ರೆನೊ' ಕೂಡ ಶೀಘ್ರದಲ್ಲೇ ಆಂಡ್ರಾಯ್ಡ್ 10 ಓಎಸ್ ಅಪ್‌ಡೇಟ್ ಪಡೆಯುತ್ತಿರುವುದು ಒಪ್ಪೊ ಅಭಿಮಾನಿಗಳಿಗೆ ಸಿಹಿಸುದ್ದಿಯಾಗಿದೆ. ಹಾಗಾದರೆ, ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಒಪ್ಪೊ ರೆನೊ ಫೋನ್ ಹೇಗಿದೆ ನೋಡೋಣ ಬನ್ನಿ.

'ಒಪ್ಪೊ ರೆನೊ' ಸ್ಮಾರ್ಟ್‌ಫೋನ್ O-Dot ಸಿರಾಮಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ಗೆ 3D ಗ್ಲಾಸ ರಕ್ಷಣೆ ಒದಗಿಸಲಾಗಿದೆ. O-Dot ಸಿರಾಮಿಕ್ ಲುಕ್ ಹೆಚ್ಚು ಗಮನಸೆಳೆಯುತ್ತಿದೆ. ಸೆಲ್ಫಿಗಾಗಿ ಶಾರ್ಕ್ ಫಿನ್ಸೈಡ್ ಸ್ವಿಂಗ್ ಮಾದರಿಯ ಕ್ಯಾಮೆರಾ ಪರಿಚಯಿಸಲಾಗಿದ್ದು, ಅಲ್ಟ್ರಾ ಸಾನಿಕ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಹೊಂದಿದೆ.ಒಪ್ಪೊ ರೆನೊ ಡಿಸ್‌ಪ್ಲೇಯು 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಫುಲ್ ಹೆಚ್‌ಡಿ ಪನೋರಮಿಕ್ AMOLED ಡಿಸ್‌ಪ್ಲೇ ನೀಡಲಾಗಿದ್ದು, ಸ್ಕ್ರೀನ್‌ನಿಂದ ಬಾಹ್ಯಾ ಬಾಡಿಯ ನಡುವಿನ ಅಂತರ ಶೇ.93.1 ಆಗಿದೆ. ಸ್ಕ್ರೀನ್ ರಕ್ಷಣೆಗೆ ಆರನೇ ತಲೆಮಾರಿನ ಗೊರಿಲ್ಲಾ ಗ್ಲಾಸ್ ಅನ್ನು ನೀಡಲಾಗಿದೆ.

ಒಪ್ಪೊ ರೆನೊ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 SoC ಸಾಮರ್ಥ್ಯದ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 9 ಓಎಸ್ ಇದರಲ್ಲಿ ಕಾರ್ಯ ನಿರ್ವಹಿಸಲಿದೆ. 6GB RAM ಮತ್ತು 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒದಗಿಸಲಾಗಿದೆ.ಈ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 18ಎಂಪಿ ಯೊಂದಿಗೆ ಸೋನಿಯ IMX586 ಸೆನ್ಸಾರ್ ಅನ್ನು ಸಹ ಹೊಂದಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಒಂದಿಗೆ ಡೆಪ್ತ್ ಸೆನ್ಸಾರ್ ಹೊಂದಿದೆ. ಸೆಲ್ಫಿಗಾಗಿ ಐಕಾನಿಕ್ ಶಾರ್ಕ್ ಫಿನ್ ಸ್ವಿಂಗ್ ಕ್ಯಾಮೆರಾ ಪರಿಚಯಿಸಿದ್ದು, ಸೆಲ್ಫಿಯು 16ಎಂಪಿ ಸಾಮರ್ಥ್ಯದಲ್ಲಿದೆ. 3,765mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದರೊಂದಿಗೆ VOOC 3.0 ತಂತ್ರಜ್ಞಾನದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ.


Click it and Unblock the Notifications








