ಇಷ್ಟೊಂದು ಆಫರ್‌ಗಳು..! ಇಂದು Oppo Reno 12 Pro ಫೋನಿನ ಫಸ್ಟ್ ಸೇಲ್: ಬೆಲೆ ಎಷ್ಟು?
ಒಪ್ಪೋ (Oppo) ಇತ್ತೀಚೆಗೆ ಭಾರತದಲ್ಲಿ ತನ್ನ ಬಹುನಿರೀಕ್ಷಿತ Reno 12 ಸರಣಿಯನ್ನು ಪ್ರಾರಂಭಿಸಿದೆ. ಈ ಸರಣಿಯ ಅಡಿಯಲ್ಲಿ Oppo Reno 12 Pro 5G ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಮೊಬೈಲ್ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ, ಈ ಫೋನ್ ಇಂದು (ಜುಲೈ 18) ಅಧಿಕೃತವಾಗಿ ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನ್ ಖರೀದಿ ಮೇಲೆ ಮೊದಲ ದಿನವೇ ಭರ್ಜರಿ ಆಫರ್ ಮತ್ತು ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಫೋನಿನ ಬೆಲೆ ಮತ್ತು ವಿಶೇಷತೆಗಳೇನು? ಎನ್ನುವುದನ್ನು ತಿಳಿಯೋಣ ಬನ್ನಿ.
Oppo Reno 12 Pro ಫೋನ್ ಇಂದು ಒಪ್ಪೋನ ಅಧಿಕೃತ ಆನ್‌ಲೈನ್ ಶಾಪಿಂಗ್ ಅಪ್ಲಿಕೇಶನ್ ಒಪ್ಪೋ ಸ್ಟೋರ್ (OPPO Store) ಮೂಲಕ ಮಾರಾಟ ಪ್ರಾರಂಭಿಸಲಿದೆ. ಇದು ಬಹುತೇಕ Oppo Reno 12 5G ಪೋನಿನಲ್ಲಿರುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಕ್ಯಾಮೆರಾ ಸೆಟಪ್‌ನಿಂದ ಸಾಫ್ಟ್‌ವೇರ್‌ವರೆಗೆ ಸಾಕಷ್ಟು AI ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇದು 50MP ಕ್ಯಾಮೆರಾ, 120Hz AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300-ಎನರ್ಜಿ ಚಿಪ್‌ಸೆಟ್ ಅನ್ನು ಪಡೆದಿದೆ.

Oppo Reno 12 Pro 5G ಬೆಲೆ
ಕಂಪನಿಯು ಒಪ್ಪೋ ರೆನೋ 12 ಪ್ರೊ 5G ಅನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಪರಿಚಯಿಸಿದೆ. 12 + 256GB ಮತ್ತು12 + 512GB ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 12 + 256GB ಸ್ಟೋರೇಜ್ ವೇರಿಯಂಟ್‌ನ ಬೆಲೆ 36,999 ರೂ.ನಿಂದ ಪ್ರಾರಂಭವಾಗಲಿದೆ. 12 + 512GB ಸ್ಟೋರೇಜ್ ಮಾದರಿಯು 40,999 ರೂ. ಬೆಲೆಯಲ್ಲಿ ಲಭ್ಯವಿದೆ. ನೀವು ಇದನ್ನು ಸ್ಪೇಸ್ ಬ್ರೌನ್ ಮತ್ತು ಸನ್‌ಸೆಟ್ ಗೋಲ್ಡ್ ಬಣ್ಣದಲ್ಲಿ ಖರೀದಿಸಬಹುದು.
ಈ ಫೋನಿನ ಮೇಲೆ ಕಂಪನಿಯು ಕೆಲವು ಲಾಂಚ್ ಆಫರ್‌ಗಳನ್ನು ಘೋಷಿಸಿದೆ. ನೀವು ಈ ಸ್ಮಾರ್ಟ್‌ಫೋನ್ ಖರೀದಿಸಿದರೆ 4,000 ರೂ. ವರೆಗಿನ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ, 9 ತಿಂಗಳ ನೋ ಕಾಸ್ಟ್ EMI ಸೌಲಭ್ಯವನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ ಒಪ್ಪೋ ಸ್ಟೋರ್ (OPPO Store) ಮೂಲಕ ಮಾರಾಟವಾಗಲಿದೆ.
ಒಪ್ಪೋ ರೆನೋ 12 ಪ್ರೊ 5Gನ ವಿಶೇಷತೆಗಳೇನು?
ರೆನೋ 12 ಪ್ರೊ 5G ಡಿಸ್ಲ್ಪೇ: ಈ ಫೋನ್ 6.7 ಇಂಚಿನ FHD+ OLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ವರೆಗೆ ರಿಫ್ರೆಶ್ ದರವನ್ನು ನೀಡುತ್ತದೆ. 600nits ಬ್ರೈಟ್‌ನೆಸ್ ಮತ್ತು ಬಿಸಿಲಿನಲ್ಲಿ 1200nits ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಇದು ಕ್ವಾಡ್-ಕರ್ವ್ ಡಿಸ್‌ಪ್ಲೇ ಫ್ಲಾಟ್ ಪ್ಯಾನಲ್ ಡಿಸ್‌ಪ್ಲೇ ಮತ್ತು ಬಾಗಿದ ಡಿಸ್‌ಪ್ಲೇ ಎರಡರ ಅನುಭವವನ್ನು ನೀಡುತ್ತದೆ.
ಪ್ರೊಸೆಸರ್ ಏನು?: ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300-ಎನರ್ಜಿ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 4nm ಅತ್ಯಾಧುನಿಕ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಆಂಡ್ರಾಯ್ಡ್ 14 ಆಧಾರಿತ ColorOS 1.4 ನಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ. ಈ OS 3 ವರ್ಷಗಳ OS ಅಪ್ಡೇಟ್‌ಗಳ ಗ್ಯಾರಂಟಿ ಮತ್ತು 4 ವರ್ಷಗಳ ಭದ್ರತಾ ಪ್ಯಾಚ್ ನವೀಕರಣಗಳೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್: ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50MP (Sony LYT-600) ಪ್ರಾಥಮಿಕ ಕ್ಯಾಮೆರಾ, 50MP (Samsung S5KJN5) ಟೆಲಿಫೋಟೋ ಶೂಟರ್ ಮತ್ತು 8MP (Sony IMX355) ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಬರುತ್ತದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 50MP ಸೆಲ್ಫಿ ಕ್ಯಾಮೆರಾ ಇದೆ. ಇದು ಆಟೋಫೋಕಸ್ ಮತ್ತು ಪೋಟ್ರೇಟ್ ಮೋಡ್ ಎರಡನ್ನೂ ಬೆಂಬಲಿಸುತ್ತದೆ.
ಬ್ಯಾಟರಿ ಬ್ಯಾಕಪ್: Oppo Reno 12 Pro ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 50 ನಿಮಿಷಗಳಲ್ಲಿ 0 ರಿಂದ 100% ಸಂಪೂರ್ಣ ಚಾರ್ಜ್ ಆಗುತ್ತದೆ. ಇದು 161.5 x 74.8x 7.4mm ಅಳತೆ ಮತ್ತು 180 ಗ್ರಾಂ ತೂಕ ಹೊಂದಿದೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್, ಡ್ಯುಯಲ್ 4G VoLTE, 5G SA/ NSA, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.4, GPS, USB ಟೈಪ್-ಸಿ ನಂತಹ ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








