Home
ಮೊಬೈಲ್

"ಒಪ್ಪೊ ಎಫ್5" ಸೆಲ್ಫಿ ಕ್ಯಾಮೆರಾ ದಿಗ್ಗಜನಾಗಲು ಕಾರಣ AI ತಂತ್ರಜ್ಞಾನ!! ಏನಿದು ಗೊತ್ತಾ?

ಅತ್ಯಾಧುನಿಕ ಗುಣಮಟ್ಟದ ಚಿತ್ರಗಳು, ಡೆಪ್ತ್ ಚಿತ್ರಗಳನ್ನು ತೆಗೆಯಬಹುದಾದ ಫೀಚರ್ಸ್ ಮತ್ತು ಸ್ಲೋ ಮೋಷನ್ ಆಯ್ಕೆ ಹೊಂದಿರುವ ನಂಬರ್ ಒನ್ ಬೆಸ್ಟ್ ಕ್ಯಾಮೆರಾ ಆಧಾರಿತ ಸ್ಮಾರ್ಟ್‌ಫೋನ್ ಆಗಿ "ಒಪ್ಪೊ ಎಫ್ 5" ಹೊರಹೊಮ್ಮಿದೆ.!!

By Bhaskar N J

ಒಂದು ಡಿಸ್‌ಎಲ್‌ಎಲ್‌ಆರ್ ಕ್ಯಾಮೆರಾ ಖರೀದಿಸುವುದಕ್ಕಿಂತ ಒಂದು ಉತ್ತಮ ಕ್ಯಾಮೆರಾ ಹೊಂದಿರುವ ಫೋನ್ ಖರೀದಿದರೆ ಹೇಗಿರುತ್ತದೆ ಎಂದು ಯೋಚಿಸುತ್ತಿದ್ದರೆ ಒಪ್ಪೊ ಎಫ್5 ಒಂದು ಬೆಸ್ಟ್ ಸ್ಮಾರ್ಟ್‌ಫೋನ್ ಎನ್ನಬಹುದು.! ಹೌದು, ಒಪ್ಪೊ ಕಂಪೆನಿ ನೂತನವಾಗಿ ಲಾಂಚ್ ಮಾಡಿರುವ ಒಪ್ಪೊ ಎಫ್ 5 ಸ್ಮಾರ್ಟ್‌ಫೋನ್‌ ಕ್ಯಾಮೆರಾ ತಂತ್ರಜ್ಞಾನದಲ್ಲಿ ಅಗಣಿತ ಸಾಧನೆ ತೋರಿದ್ದು, ಎಲ್ಲರನ್ನು ನಿಬ್ಬೆರಗಾಗಿಸಿದೆ.!!

ಅತ್ಯಾಧುನಿಕ ಗುಣಮಟ್ಟದ ಚಿತ್ರಗಳು, ಡೆಪ್ತ್ ಚಿತ್ರಗಳನ್ನು ತೆಗೆಯಬಹುದಾದ ಫೀಚರ್ಸ್ ಮತ್ತು ಸ್ಲೋ ಮೋಷನ್ ಆಯ್ಕೆ ಹೊಂದಿರುವ ನಂಬರ್ ಒನ್ ಬೆಸ್ಟ್ ಕ್ಯಾಮೆರಾ ಆಧಾರಿತ ಸ್ಮಾರ್ಟ್‌ಫೋನ್ ಆಗಿ "ಒಪ್ಪೊ ಎಫ್ 5" ಹೊರಹೊಮ್ಮಿದೆ.!! ಕೇವಲ 19,990 ರೂಪಾಯಿಗಳಲ್ಲಿ ಈ ಸ್ಮಾರ್ಟ್‌ಫೋನ್ ನಿಮ್ಮದಾಗಲಿದ್ದು, ಹಾಗಾದರೆ, ಒಪ್ಪೊ ಎಫ್ 5 ಹೊಂದಿರುವ ಕ್ಯಾಮೆರಾ ತಂತ್ರಜ್ಞಾನ ಏನೆಲ್ಲಾ ಅತ್ಯಾಧುನಿಕ ಅಂಶಗಳನ್ನು ಒಳಗೊಂಡಿದೆ.ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಒಪ್ಪೊ ಎಫ್ 5 ಸೆಲ್ಫಿ ಅನುಭವ ಅಚ್ಚರಿಗೊಳಿಸುತ್ತದೆ.!!

ಒಪ್ಪೊ ಎಫ್ 5 ಸೆಲ್ಫಿ ಅನುಭವ ಅಚ್ಚರಿಗೊಳಿಸುತ್ತದೆ.!!

ಮನುಷ್ಯನ ಮುಖವನ್ನು ಸ್ವಯಂಚಾಲಿತವಾಗಿ ರೀಡ್ ಮಾಡುವಂತಹ ಅತ್ಯದ್ಬುತ ತಂತ್ರಜ್ಞಾನ ಒಪ್ಪೊ ಎಫ್ 5 ಸೆಲ್ಫಿ ಕ್ಯಾಮೆರಾ ಹೊಂದಿದೆ. ಮುಖದ ಬಣ್ಣ, ಟೋನ್ ಹಾಗೂ ನೀವು ಗಂಡೊ ಅಥವಾ ಹೆಣ್ಣೊ ಎಂಬುದನ್ನು ಸ್ವಯಂಚಾಲಿತ ಗುರಿತಿಸುವ ತಂತ್ರಜ್ಞಾನ ಇದರಲ್ಲಿದೆ. ನಿಮ್ಮ ವಯಸ್ಸಿನ ಚಹರೆಯನ್ನು ಮರೆಮಾಚಿ ಎಐ ಬ್ಯೂಟಿ ಟೆಕ್ನಾಲಜಿ ಮೂಲಕ 200ಕ್ಕೂ ಹೆಚ್ಚು 200ಕ್ಕೂ ಹೆಚ್ಚು ರೆಕಗ್ನೈಶನ್ ಸ್ಪಾಟ್‌ಗಳಲ್ಲಿ ಮುಖದ ಎಲ್ಲಾ ಲಕ್ಷಣಗಳನ್ನು ಗುರಿತಿಸಿಕೊಳ್ಳುವ ಈ ತಂತ್ರಜ್ಞಾನ ನಿಮ್ಮನ್ನು ಅಚ್ಚರಿಗೊಳಿಸದೆ ಇರುವುದಿಲ್ಲ.!!

ಕಸ್ಟಮೈಸ್‌ ಬ್ಯೂಟಿ ಎಫೆಕ್ಟ್!!

ಕಸ್ಟಮೈಸ್‌ ಬ್ಯೂಟಿ ಎಫೆಕ್ಟ್!!

ಮೊದಲೇ ಹೇಳಿದಂತೆ ಒಪ್ಪೊ ಎಫ್ 5 ಸೆಲ್ಫಿ ಕ್ಯಾಮೆರಾ 200ಕ್ಕೂ ಹೆಚ್ಚು ಪಾಯಿಂಟ್‌ಗಳಲ್ಲಿ ಮುಖದ ಎಲ್ಲಾ ಲಕ್ಷಣಗಳನ್ನು ಗುರಿತಿಸಿಕೊಳ್ಳುವುದಿಲ್ಲದೇ, ನಿಮ್ಮ ಮುಖಕ್ಕೆ ಅನುಗುಣವಾಗಿ ಕಸ್ಟಮೈಸ್‌ ಬ್ಯೂಟಿ ಎಫೆಕ್ಟ್‌ಗಳನ್ನು ಆರಿಸಿಕೊಳ್ಳು ಅಗತ್ಯ ಸೂಚನೆಗಳನ್ನು ನೀಡುತ್ತದೆ. ಅಂದರೆ, ಪ್ರತಿಯೊಬ್ಬರೂ ನೈಸರ್ಗಿಕವಾಗಿ ಸುಂದರವಾದ ಚರ್ಮದ ಟೋನ್‌ಗಳನ್ನು ಹೊಂದಿರುವ ಬಗ್ಗೆ ಖಾತ್ರಿಗೊಳಿಸುವ ಚಿತ್ರಗಳು ಒಪ್ಪೊ ಎಫ್ 5 ಸೆಲ್ಫಿ ಕ್ಯಾಮೆರಾದಿಂದ ಮೂಡುತ್ತವೆ.

ಸೆಲ್ಫಿ AI ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ?

ಸೆಲ್ಫಿ AI ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ?

ಒಪ್ಪೊ ಎಫ್ 5 ಸೆಲ್ಫಿ ಕ್ಯಾಮೆರಾ ಎಐ ಬ್ಯೂಟಿ ಟೆಕ್ನಾಲಜಿ ಹೊಂದಿದೆ ಎಂದು ನಾವು ನಿಮಗೆ ಹೇಳಿದ್ದೇವೆ ಅಲ್ಲವೇ? ಹಾಗಾದರೆ, ಈ ಎಐ ಬ್ಯೂಟಿ ಟೆಕ್ನಾಲಜಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ನಿಮಗೆ ಗೊತ್ತಾ?! ಎಐ ಬ್ಯೂಟಿ ಟೆಕ್ನಾಲಜಿ ಒಬ್ಬ ಮನುಷ್ಯನ ಮುಖದ ಸಂಪೂರ್ಣಮಾಹಿತಿಯನ್ನು ಕ್ಷಣಾರ್ಧದಲ್ಲಿ ಕಲೆಹಾಕುತ್ತದೆ. ನಿಮ್ಮ ಮುಖದ ಮೇಲಿನ ಉಬ್ಬುತಗ್ಗುಗಳನ್ನು ಗುರುತಿಸಿ ಒಬ್ಬ ಕಲಾವಿದನಂತೆ ನಿಮ್ಮ ಚಿತ್ರಗಳನ್ನು ಚಿತ್ರಿಸುತ್ತದೆ. ಈವರೆಗೂ ಮಾರುಕಟ್ಟೆಯಲ್ಲಿರುವ ಯಾವ ಸ್ಮಾರ್ಟ್‌ಫೋನ್ ಕೂಡ ಇಷ್ಟೊಂದು ಟೆಕ್ನಾಲಜಿಯನ್ನು ಅಳವಡಿಸಿಕೊಂಡಿಲ್ಲ.!!

200ಕ್ಕೂ ಹೆಚ್ಚು ರೆಕಗ್ನೈಶನ್ ಸ್ಪಾಟ್!!

200ಕ್ಕೂ ಹೆಚ್ಚು ರೆಕಗ್ನೈಶನ್ ಸ್ಪಾಟ್!!

ಒಪ್ಪೊ ಎಫ್ 5 ಸೆಲ್ಫಿ ಸ್ಮಾರ್ಟ್‌ಫೋನ್‌ನಲ್ಲಿ ಎಒನ್ ಟೆಕ್ನಾಲಿಜಿ ಹೊಂದಿರುವುದಿಲ್ಲದೇ, ಆರ್‌ ಮತ್ತು ಡಿ ಟೆಕ್ನಾಲಜಿಯಿಂದ ಸೆಲ್ಫಿ ಅನುಭವವನ್ನು ಹೆಚ್ಚಿಸಿದೆ. ಈ ತಂತ್ರಜ್ಞಾನದ ಬಳಕೆಯಿಂದಾಗಿ ಬೆಳಕು, ಬಣ್ಣ ಮತ್ತು ನೀವಿರುವ ಸ್ಥಳದ ತಾಪಾಮಾನವನ್ನು ಕೂಡ ಸ್ವಯಂಚಾಲಿತವಾಗಿ ಅರಿತು ಉತ್ತಮ ಸೆಲ್ಫಿ ಚಿತ್ರಗಳನ್ನು ಮೂಡಿಸುತ್ತದೆ.! ಈ ಎಒನ್ ಟೆಕ್ನಾಲಜಿಯಲ್ಲಿ ಗ್ರೂಪ್‌ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮೂಡಿಬರುತ್ತವೆ.

20MP ಮತ್ತು 16MP ಕ್ಯಾಮೆರಾ!!

20MP ಮತ್ತು 16MP ಕ್ಯಾಮೆರಾ!!

ಒಪ್ಪೊ ಸ್ಮಾರ್ಟ್‌ಫೋನ್‌ಗಳು ಎಂದರೆ ಕ್ಯಾಮೆರಾ ಕ್ಯಾಮೆರಾಗಾಗಿಯೇ ಮೀಸಲು ಎಂಬ ಮಾತಿದೆ. ಹಾಗೆಯೇ ಒಪ್ಪೋ ಎಫ್5 20MP F/2.0 ಅಪಾರ್ಚರ್ ಸೆಲ್ಫಿ ಕ್ಯಾಮೆರಾ ಹಾಗೂ 16MP F/1.8 ರಿಯರ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಎರಡೂ ಕ್ಯಾಮೆರಾಗಳಿಗೂ ಎಲ್ಇಡಿ ಫ್ಲಾಶ್‌ ಲೈಟ್ ಸಹ ಲಭ್ಯವಿದ್ದು, ಸೆಲ್ಫಿ ಸ್ಮಾರ್ಟ್‌ಫೋನ್ ಎನಿಸಲು ಇಷ್ಟು ಸಾಕು.!!

Best Mobiles in India

English summary
OPPO F5 a one-of-its kind Selfie Smartphone in the market .to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+