ಸೆಲ್ಫಿಗಾಗಿಯೇ ಹೊಸ ತಂತ್ರಜ್ಞಾನ ಹೊಂದಿರುವ ವಿಶ್ವದ ಮೊದಲ ಫೋನ್..!
ಮೂಲಗಳ ಪ್ರಕಾರ ನವೆಂಬರ್ 2 ರಂದು ಹೊಸ ಸ್ಮಾರ್ಟ್‌ಫೋನ್ ಒಪ್ಪೋ F5 ಲಾಂಚ್ ಆಗುವ ಸಾಧ್ಯತೆ ಇದೆ. ಈ ಫೋನ್ 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿರಲಿದೆ.
ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒಪ್ಪೋ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ತಯಾರಿ ನಡೆಸಿದೆ. ಈ ಹೊಸ ಸ್ಮಾರ್ಟ್‌ಫೋನ್ ಒಪ್ಪೋ F5 ಶೀಘ್ರವೇ ಲಾಂಚ್ ಆಗಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ನವೆಂಬರ್ 2 ರಂದು ಹೊಸ ಸ್ಮಾರ್ಟ್‌ಫೋನ್ ಒಪ್ಪೋ F5 ಲಾಂಚ್ ಆಗುವ ಸಾಧ್ಯತೆ ಇದೆ. ಈ ಫೋನ್ 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿರಲಿದೆ.

ಬಿಜಿಲ್ ಲೈಸ್ 6 ಇಂಚಿನ FHD+ ಸ್ಕ್ರಿನ್:
ಒಪ್ಪೋ F5 ಸ್ಮಾರ್ಟ್‌ಫೋನ್ ಬಿಜಿಲ್ ಲೈಸ್ 6 ಇಂಚಿನ FHD+ ಡಿಸ್‌ಪ್ಲೆಯನ್ನು ಹೊಂದಿರಲಿದ್ದು, 2160x1080 ಪಿಕ್ಸಲ್ ಗುಣಮಟ್ಟದಾಗಿರಲಿದೆ. ಇದು 18:9 ಅನುಪಾತದ ಡಿಸ್‌ಪ್ಲೇಯಾಗಿರಲಿದ್ದು, ಈ ಅನುಪಾತದಲ್ಲಿ ಒಪ್ಪೋ ಬಿಡುಗಡೆ ಮಾಡುತ್ತಿರುವ ಮೊದಲ ಫೋನ್ ಇದಾಗಿದೆ. ಇದು ಡಿಸ್‌ಪ್ಲೇಯನ್ನು ಇಷ್ಟು ನೋಡಲು ಸುಂದರವಾಗಿಸಲಿದೆ.

ಸೆಲ್ಪಿಗಾಗಿ ಕೃತಕ ಬುದ್ದಿಮತ್ತೆ:
ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟಿಹಾಕಿರುವ AI(ಕೃತಕ ಬುದ್ದಿಮತ್ತೆ)ಯನ್ನು ಈ ಫೋನಿನಲ್ಲಿ ಮೊಟ್ಟಮೊದಲ ಬಾರಿಗೆ ಸೆಲ್ಫಿ ಪೋಟ್‌ರೆಟ್ ತೆಗೆಯಲು ಬಳಕೆ ಮಾಡಿಕೊಳ್ಳಲಾಗಿದ್ದು, ಅತ್ಯುತ್ತಮ ಸೆಲ್ಫಿಗಳನ್ನು ಸೆರೆಹಿಡಿಯಲು ಈ ಫೋನ್ ಸೂಕ್ತವಾಗಿದೆ ಎನ್ನಲಾಗಿದೆ. ಇದಕ್ಕಾಗಿಎ ಬ್ಯೂಟಿಫೈ ಅನ್ನು ಮತ್ತಷ್ಟು ಆಪ್‌ಡೇಟ್ ಮಾಡಿದೆ.

ದೊಡ್ಡ 6 ಇಂಚಿನ FHD+ ಡಿಸ್‌ಪ್ಲೇ:
ದೊಡ್ಡ 6 ಇಂಚಿನ FHD+ ಡಿಸ್‌ಪ್ಲೇಯನ್ನು ಒಪ್ಪೋ F5 ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದಾಗಿದೆ. ಇದು ಗೇಮ್ ಆಡಲು, ವಿಡಿಯೋಗಳನ್ನು ನೋಡಲು ಉತ್ತಮ ಅನುಭವನ್ನು ನೀಡಲಿದೆ. ಅಲ್ಲದೇ ನಿಮ್ಮ ಸೆಲ್ಪಿ ತೆಗೆದುಕೊಳ್ಳುವ ಸಂದರ್ಭದಲ್ಲಿಯೂ ಉತ್ತಮವಾಗಿ ಕಾಣುವಂತೆ ಮಾಡಲಿದೆ. ವಿಡಿಯೋ ಮಾಡಲು ಸಹ ಉತ್ತಮವಾಗಿರಲಿದೆ.

4GB ಮತ್ತು 6GB ಆವೃತ್ತಿಯಲ್ಲಿ ಲಭ್ಯವಿದೆ:
ಒಪ್ಪೋ F5 ಸೆಲ್ಫಿ ಎಕ್ಸ್ ಪರ್ಟ್ ಸ್ಮಾರ್ಟ್‌ಫೋನ್ 4GB RAM ಮತ್ತು 6GB RAM ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯ ಒಂದು ಆವೃತ್ತಿ, 6GB RAM ಮತ್ತು 128GB ಇಂಟರ್ನಲ್ ಮೆಮೊರಿಯ ಇನ್ನೊಂದು ಆವೃತ್ತಿಯೂ ದೊರೆಯಲಿದೆ.

ಸ್ನಾಪ್‌ಡ್ರಾಗನ್ 660 ಪ್ರೋಸೆಸರ್:
ಇದಲ್ಲದೇ ಒಪ್ಪೋ F5 ಸೆಲ್ಫಿ ಎಕ್ಸ್ ಪರ್ಟ್ ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 660 ಪ್ರೋಸೆಸರ್ ಕಾಣಬಹುದಾಗಿದ್ದು, ಇದು ವೇಗದ ಕಾರ್ಯಚರಣೆಗೆ ಸಹಾಯ ಮಾಡಲಿದೆ. ಅಲ್ಲದೇ 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಗೊಲ್ಡ್, ರೆಡ್, ಬ್ಲಾಕ್ ಬಣ್ಣದಲ್ಲಿ ದೊರೆಯಲಿದೆ.


Click it and Unblock the Notifications








