Home
ಮೊಬೈಲ್

ಭಾರತಕ್ಕೆ ಬರುತ್ತಿರುವ ಹೊಸ Reno 15 Pro Mini ಫೋನ್ ಹೇಗಿದೆ ನೋಡಿ!

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ Oppo ಭಾರತದಲ್ಲಿ ತನ್ನ ಬಹುನಿರೀಕ್ಷಿತ Oppo Reno 15 ಸರಣಿಯ ಬಿಡುಗಡೆ ಕುರಿತು ಟೀಸರ್ ಒಂದನ್ನು ಪ್ರಕಟಿಸಿ ಈಗಾಗಲೇ ಅಧಿಕೃತ ಮುದ್ರೆ ಹಾಕಿತ್ತು. ಇದೀಗ ಈ ಸರಣಿಯಲ್ಲಿ Oppo Reno 15, Reno 15 Pro ಮತ್ತು ಹೊಸದಾಗಿ ಪರಿಚಯಿಸಲಾಗುತ್ತಿರುವ Reno 15 Pro Mini ಎಂಬ ಮೂರು ಸ್ಮಾರ್ಟ್‌ಫೋನ್‌ಗಳನ್ನು ಶೀಘ್ರವೇ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಇನ್ನು ವಿಶೇಷವಾಗಿ ಕಾಂಪ್ಯಾಕ್ಟ್ ಫೋನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು Pro Mini ಮಾದರಿಯನ್ನು ಭಾರತಕ್ಕೆ ತರಲಾಗುತ್ತಿದೆ.

Oppo ಕಂಪೆನಿ ಇಂದು ಅಧಿಕೃತಪಡಿಸಿರುವಂತ, Oppo Reno 15 ಸರಣಿಯ ಫೋನ್‌ಗಳು ಸಂಪೂರ್ಣ ಹೊಸ HoloFusion Technology ವಿನ್ಯಾಸದೊಂದಿಗೆ ಬರಲಿದ್ದು, ಪ್ರೀಮಿಯಂ ಲುಕ್ ಮತ್ತು ಆಧುನಿಕ ಫಿನಿಶ್ ನೀಡುತ್ತವೆ. ಸಾಮಾನ್ಯ Oppo Reno 15 ಮಾದರಿ Glacier White, Twilight Blue ಮತ್ತು Aurora Blue ಎಂಬ ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸರಣಿಗೆ ಸಂಬಂಧಿಸಿದಂತೆ Flipkart ನಲ್ಲಿ ವಿಶೇಷ ಮೈಕ್ರೋಸೈಟ್ ಈಗಾಗಲೇ ಲೈವ್ ಆಗಿದೆ, ಇದರಿಂದ Oppo Reno 15 ಸರಣಿ ಭಾರತದಲ್ಲಿ Flipkart ಮೂಲಕ ಮಾರಾಟವಾಗಲಿದೆ ಎಂಬುದು ದೃಢವಾಗಿದೆ.

ಮೊಬೈಲ್ ಉದ್ಯಮದ ನಿರೀಕ್ಷೆಯಂತೆಯೇ, ಈ Oppo Reno 15 ಸರಣಿಯಲ್ಲಿ ಹೊಸದಾಗಿ ಪರಿಚಯಿಸಲಾಗುತ್ತಿರುವ Oppo Reno 15 Pro Mini ಕಾಂಪ್ಯಾಕ್ಟ್ ಫೋನ್ ವಿಭಾಗದಲ್ಲಿ ದೊಡ್ಡ ಗಮನ ಸೆಳೆಯುವ ಸಾಧ್ಯತೆ ಇದೆ. ಈ ಫೋನ್‌ 6.32-ಇಂಚಿನ AMOLED ಡಿಸ್ಪ್ಲೇ ಹೊಂದಿದ್ದು, ಅತಿ ತೆಳುವಾದ 1.6mm ಬೆಸೆಲ್‌ಗಳೊಂದಿಗೆ 93.35% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ ಎಂದು ದೃಢಪಡಿಸಲಾಗಿದೆ. ಇಷ್ಟೇ ಅಲ್ಲದೆ, ಈ ಫೋನ್ ಸುಮಾರು 187 ಗ್ರಾಂ ತೂಕ ಮತ್ತು ಕೇವಲ ಸುಮಾರು 7.99 ಮಿಮೀ ದಪ್ಪವನ್ನು ಅಳೆಯುತ್ತದೆ ಎಂದು ಟೀಸ್ ಮಾಡಲಾಗಿದೆ.

ಭಾರತಕ್ಕೆ ಬರುತ್ತಿರುವ ಹೊಸ Reno 15 Pro Mini ಫೋನ್ ಹೇಗಿದೆ ನೋಡಿ!

ಇನ್ನೊಂದೆಡೆ, Oppo Reno 15 Pro ಮಾದರಿ 7.65mm ದಪ್ಪ ಮತ್ತು ಸುಮಾರು 205 ಗ್ರಾಂ ತೂಕ ಹೊಂದಿದ್ದು, ಪ್ರೀಮಿಯಂ ಫ್ಲ್ಯಾಗ್‌ಶಿಪ್ ಅನುಭವವನ್ನು ನೀಡುತ್ತದೆ. ಸಾಮಾನ್ಯ Reno 15 ಮಾದರಿ ಬಣ್ಣದ ಆಧಾರದಲ್ಲಿ 7.89mm ದಪ್ಪವಿದ್ದು, 197 ಗ್ರಾಂ ತೂಕ ಹೊಂದಿದೆ. ಈ ಫೋನ್‌ನಲ್ಲಿ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ ಬಳಸಲಾಗಿದೆ. ಮೂರು ಮಾದರಿಗಳಲ್ಲೂ IP66, IP68 ಮತ್ತು IP69 ರೇಟಿಂಗ್‌ಗಳು ಲಭ್ಯವಿದ್ದು, ಧೂಳು ಮತ್ತು ನೀರಿನಿಂದ ಉನ್ನತ ಮಟ್ಟದ ರಕ್ಷಣೆ ಸಿಗುತ್ತದೆ. ಜೊತೆಗೆ, USB Type-C ಪೋರ್ಟ್‌ಗೆ ಪ್ಲಾಟಿನಂ ಕೋಟಿಂಗ್ ನೀಡಲಾಗಿದೆ.

ಡಿಸ್ಪ್ಲೇ ವಿಭಾಗದಲ್ಲಿ Oppo Reno 15 Pro ಫೋನ್‌ವು 6.78-ಇಂಚಿನ AMOLED ಡಿಸ್ಪ್ಲೇ, 1.15mm ಅತಿ ಸಣ್ಣ ಬೆಸೆಲ್‌ಗಳು, 95.5% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು Corning Gorilla Glass Victus 2 ರಕ್ಷಣೆಯೊಂದಿಗೆ ಬರುತ್ತದೆ. ಸಾಮಾನ್ಯ Reno 15 ಫೋನ್‌ನಲ್ಲಿ 6.59-ಇಂಚಿನ AMOLED ಡಿಸ್ಪ್ಲೇ ಮತ್ತು 93.4% ಸ್ಕ್ರೀನ್-ಟು-ಬಾಡಿ ಅನುಪಾತ ಇದೆ. ಈ ಸರಣಿಯ ಎಲ್ಲಾ ಫೋನ್‌ಗಳು 120Hz ರಿಫ್ರೆಶ್ ರೇಟ್ ಮತ್ತು Full HD+ ರೆಸಲ್ಯೂಶನ್ ಬೆಂಬಲಿಸುತ್ತವೆ. Pro ಮತ್ತು Pro Mini ಮಾದರಿಗಳು ಗರಿಷ್ಠ 3,600 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡಲಿದ್ದು, Reno 15 ಮಾದರಿಯಲ್ಲಿ 1,200 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್ ಲಭ್ಯವಿರುತ್ತದೆ.

Oppo Reno 15 ಸರಣಿಯ ಕುರಿತಂತೆ ಸಧ್ಯಕ್ಕೆ ಇಷ್ಟು ಮಾಹಿತಿಗಳು ಅಧಿಕೃವಾಗಿದೆ ಬಹಿರಂಗವಾಗಿದೆ. ಆದರೆ, ಈ ಫೋನ್‌ಗಳ ನಿಖರ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.ಒಟ್ಟಾರೆಯಾಗಿ, Oppo Reno 15 ಸರಣಿ ಆಕರ್ಷಕ ವಿನ್ಯಾಸ, ಶಕ್ತಿಶಾಲಿ AMOLED ಡಿಸ್ಪ್ಲೇ, ಉನ್ನತ ರಕ್ಷಣಾ ರೇಟಿಂಗ್‌ಗಳು ಮತ್ತು ಕಾಂಪ್ಯಾಕ್ಟ್ ಆಯ್ಕೆಯೊಂದಿಗೆ ಭಾರತದ ಮಧ್ಯಮ-ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ಬೆಲೆ ಮತ್ತು ಬಿಡುಗಡೆ ದಿನಾಂಕದ ಅಧಿಕೃತ ಘೋಷಣೆಗಾಗಿ ಈಗ ಟೆಕ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Best Mobiles in India

English summary
Oppo has confirmed the upcoming launch of its Reno 15 series in India, featuring the Reno 15, Reno 15 Pro, and the new compact Reno 15 Pro Mini. The smartphones will come with a premium HoloFusion design and will be sold via Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+