Home
ಮೊಬೈಲ್

Oppo Find X9 ಸರಣಿ ಲಾಂಚ್: ಬೆಲೆ, ವೈಶಿಷ್ಟ್ಯಗಳು ಮತ್ತು ಸಂಪೂರ್ಣ ವಿವರ!

ಇತ್ತೀಚಿಗೆ ಮೊಬೈಲ್ ಲೋಕದಲ್ಲಿ ಭಾರೀ ಸುದ್ದಿಯಾಗಿದ್ದ Oppo ಕಂಪೆನಿಯ ಹೊಸ Oppo Find X9 ಸರಣಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಭರ್ಜರಿಯಾಗಿ ಬಿಡುಗಡೆಯಾಗಿವೆ. ಗುರುವಾರದಂದು ಚೀನಾದಲ್ಲಿ ಕಂಪೆನಿಯು ಆಯೋಜಿಸಿದ್ದ ಹಾರ್ಡ್‌ವೇರ್ ಬಿಡುಗಡೆ ಸಮಾರಂಭದಲ್ಲಿ Oppo Find X9 ಮಾದರಿಯ ಜೊತೆಗೆ Oppo Find X9 Pro ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದೆ. ನಿರೀಕ್ಚೆಯಂತೆಯೇ, ಈ ಹೊಸ ಸರಣಿಯ ಎರಡೂ ಫೋನ್‌ಗಳು Hasselblad-ಬೆಂಬಲಿತ ಕ್ಯಾಮೆರಾಗಳನ್ನು ಹಾಗೂ ಉದ್ಯಮದ ಹಲವಾರು ಆಕರ್ಷಕ ಫೀಚರ್ಸ್ ಹೊಂದಿವೆ. ಹಾಗಾದರೆ, ಹೊಸ Oppo Find X9 ಮತ್ತು Oppo Find X9 Pro ಎರಡೂ ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಫೀಚರ್ಸ್ ಯಾವುವು ಮತ್ತು ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.

Oppo Find X9 Pro ಮತ್ತು Oppo Find X9 : ವಿನ್ಯಾಸ
Oppo Find X9 ಮತ್ತು Find X9 Pro ಎರಡೂ ಒಂದೇ ರೀತಿಯ ಡಿಸೈನ್ ಅನ್ನು ಹೊಂದಿವೆ, ಇದು ತುಂಬಾ ಆಕರ್ಷಕವಾಗಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲಾಟ್ AMOLED ಡಿಸ್ಪ್ಲೇ, ಸಮಾನ ಅಳತೆಯ ಸುಂದರ ಬೇಸೆಲ್‌ಗಳು ಮತ್ತು ಎಡಮೇಲ್ಭಾಗದಲ್ಲಿ ಹಾಸೆಲ್‌ಬ್ಲಾಡ್ ಬ್ರಾಂಡಿಂಗ್ ಇರುವ ಚೌಕಾಕಾರದ ಕ್ಯಾಮೆರಾ ಮೋಡ್ಯೂಲ್ ಇದೆ. ಹಿಂಭಾಗದ ವಿನ್ಯಾಸವು ಸರಳವಾಗಿದ್ದರೂ, ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಅಲ್ಯೂಮಿನಿಯಂ ಫ್ರೇಮ್ ಮತ್ತು ಮ್ಯಾಟ್ ಗ್ಲಾಸ್ ಫಿನಿಷ್‌ಗಳೊಂದಿಗೆ, ಈ ಫೋನ್‌ಗಳನ್ನು ಹಿಡಿದಾಗ ತುಂಬಾ ಸುಲಭ ಮತ್ತು ಆರಾಮದಾಯಕ ಅನುಭವವನ್ನು ನೀಡುತ್ತವೆ!

Oppo Find X9 ಸರಣಿ ಲಾಂಚ್: ಬೆಲೆ, ವೈಶಿಷ್ಟ್ಯಗಳು ಮತ್ತು ಸಂಪೂರ್ಣ ವಿವರ!

ಆದರೆ, Find X9 Pro ಮಾದರಿಯಲ್ಲಿ ಕೆಲವು ಪ್ರೀಮಿಯಂ ಟಚ್‌ಗಳು ಇವೆ. ಇದು ಗ್ಲಾಸ್ ಜೊತೆಗೆ ವೀಗನ್ ಲೆದರ್ ಬ್ಯಾಕ್ ಆಯ್ಕೆಯನ್ನೂ ನೀಡುತ್ತದೆ ಮತ್ತು ಕ್ಯಾಮೆರಾ ಮೋಡ್ಯೂಲ್‌ನ ಸುತ್ತಲೂ ಮೆಟಾಲಿಕ್ ಗ್ಲೋಸಿ ರಿಂಗ್ ಇದೆ. ಫ್ರೇಮ್ ಹೆಚ್ಚು ಹೊಳೆಯುವ ಅಲ್ಯೂಮಿನಿಯಂ ಅಥವಾ ಟೈಟೇನಿಯಂ ಮಿಶ್ರಲೋಹದಿಂದ ತಯಾರಾಗಿದೆ, ಜೊತೆಗೆ IP69 ರೇಟಿಂಗ್‌ನಿಂದ ಹೆಚ್ಚಿನ ನೀರು ಮತ್ತು ಧೂಳಿನ ರಕ್ಷಣೆ ದೊರೆಯುತ್ತದೆ. Find X9 ಮಾದರಿ ಸ್ವಲ್ಪ ಹಗುರವಾಗಿದ್ದು (ಸುಮಾರು 203 ಗ್ರಾಂ), ಪ್ರೋ ಮಾದರಿ ಹೆಚ್ಚು ಗಟ್ಟಿಯಾದ ಮತ್ತು ಪ್ರೀಮಿಯಂ ಹ್ಯಾಂಡ್‌ಫೀಲ್ ನೀಡುತ್ತದೆ.

Oppo Find X9 Pro ಮತ್ತು Oppo Find X9 : ಸಂಪೂರ್ಣ ವೈಶಿಷ್ಟ್ಯಗಳು
Oppo Find X9 Pro ಮತ್ತು Find X9 ಎರಡು ಫೋನ್‌ಗಳು ಪ್ರೀಮಿಯಂ AMOLED ಡಿಸ್ಪ್ಲೇ ಹೊಂದಿವೆ. ಇವುಗಳಲ್ಲಿ Find X9 Pro 6.78-ಇಂಚಿನ LTPO ಡಿಸ್‌ಪ್ಲೇ ಹೊಂದಿದ್ದರೆ, Find X9 6.59-ಇಂಚಿನ ಡಿಸ್‌ಪ್ಲೇ ಹೊಂದಿದೆ. ಎರಡೂ ಡಿಸ್‌ಪ್ಲೇಗಳು 1.5K ರೆಸಲ್ಯೂಷನ್ (Find X9 Pro 2772×1272 ಪಿಕ್ಸೆಲ್, Find X9: 2760×1256 ಪಿಕ್ಸೆಲ್) ಅನ್ನು ನೀಡುತ್ತವೆ. ಡಿಸ್‌ಪ್ಲೇಗಳು HDR10+, Dolby Vision ಮತ್ತು HDR Vivid ಅನ್ನು ಬೆಂಬಲಿಸುತ್ತವೆ.

ProXDR ತಂತ್ರಜ್ಞಾನದಿಂದ ಚಿತ್ರಗಳು ಮತ್ತು ವಿಡಿಯೋಗಳು ಹೆಚ್ಚು ಬಾಳಿಕೆ ಹಾಗೂ ಸ್ಪಷ್ಟತೆಯನ್ನು ಹೊಂದಿರುತ್ತವೆ. ಇನ್ನು 120Hz ರಿಫ್ರೆಶ್ ರೇಟ್ ಸ್ಮೂತ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್‌ಗೆ ಉತ್ತಮ ಅನುಭವವನ್ನು ನೀಡುತ್ತದೆ. 1800nits ಜಾಗತಿಕ ಗರಿಷ್ಠ ಹೊಳಪು ಮತ್ತು 3600nits ಸ್ಥಳೀಯ ಗರಿಷ್ಠ ಹೊಳಪು ಎಂದರೆ ಬಾಹ್ಯ ಪ್ರಕಾಶದಲ್ಲಿಯೂ ಸ್ಪಷ್ಟವಾಗಿ ನೋಡಬಹುದು. ಹಾಗೆಯೇ Always-On Display (AOD) ಮೂಲಕ ಅಗತ್ಯ ಮಾಹಿತಿಯನ್ನು ಪರದೆಯ ಮೇಲೆಯೇ ನಿರಂತರವಾಗಿ ತೋರಿಸಲು ಸಾಧ್ಯ.

Oppo Find X9 Pro ಮತ್ತು Find X9 ಎರಡು ಫೋನ್‌ಗಳಲ್ಲಿ MediaTek Dimensity 9500 ಚಿಪ್‌ಸೆಟ್ ಬಳಸಲಾಗಿದೆ, ಇದು ಅತ್ಯಂತ ಶಕ್ತಿಶಾಲಿ 5G ಪ್ರೊಸೆಸರ್ ಆಗಿದೆ. ಇದಕ್ಕೆ ಪೂರಕವಾಗಿ 16GB ವರೆಗೆ RAM 1TB ವರೆಗೆ ಸ್ಟೋರೆಜ್ ಇದೆ. Find X9 Pro ನಲ್ಲಿ ದೊಡ್ಡದಾದ 7500mAh ಬ್ಯಾಟರಿ ಇದೆ, Find X9 ನಲ್ಲಿ 7025mAh ಬ್ಯಾಟರಿ ನೀಡಲಾಗಿದೆ. ಇವೆರಡೂ ಬಳಕೆದಾರರಿಗೆ 1.5 ದಿನದಷ್ಟು ಬ್ಯಾಟರಿ ಬ್ಯಾಕಪ್ ನೀಡುವ ಸಾಮರ್ಥ್ಯ ಹೊಂದಿವೆ. ಎರಡೂ ಮಾದರಿಗಳೂ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿವೆ.

Oppo Find X9 ಸರಣಿ ಲಾಂಚ್: ಬೆಲೆ, ವೈಶಿಷ್ಟ್ಯಗಳು ಮತ್ತು ಸಂಪೂರ್ಣ ವಿವರ!

ಕ್ಯಾಮೆರಾ ವಿಭಾಗದಲ್ಲಿ, Find X9 Pro ಮತ್ತು Find X9 ಎರಡೂ ಅತ್ಯುತ್ತಮವಾಗಿವೆ. Find X9 Pro ನಲ್ಲಿ 50MP Sony LYT-828 ಪ್ರಾಥಮಿಕ ಕ್ಯಾಮೆರಾ, 50MP Samsung JN5 ಅಲ್ಟ್ರಾ-ವೈಡ್ ಮತ್ತು 200MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (3x ಡಿಜಿಟಲ್ ಜೂಮ್) ಇವೆ. ಈ ಕ್ಯಾಮೆರಾ ಸೆಟಪ್‌ಗಳು ಹೆಚ್ಚು ನಿಖರವಾದ, ವೈಶಿಷ್ಟ್ಯಪೂರ್ಣ ಝೂಮ್ ಮತ್ತು ವಿಶಾಲ ಫೋಟೋಗಳನ್ನು ತೆಗೆಯಲು ಸಹಕಾರಿಯಾಗುತ್ತವೆ. ಮುಂಭಾಗದಲ್ಲಿ, ಈ ಫೋನ್ 50MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ಇತ್ತ Oppo Find X9 ಮಾದರಿಯಲ್ಲೂ 50MP ಮುಖ್ಯ ಕ್ಯಾಮೆರಾ (Sony LYT-828), 50MP ಪೆರಿಸ್ಕೋಪ್ ಟೆಲಿಫೋಟೋ (Sony LYT-600), ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ (Samsung JN5) ಇವೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi, Bluetooth, GPS ಮತ್ತು USB Type-C ವೈಶೀಷ್ಟ್ಯಗಳುವೆ, ಎರಡೂ ಫೋನ್‌ಗಳು IP66, IP68 ಮತ್ತು IP69 ಪ್ರಮಾಣಿತ ಧೂಳು ಮತ್ತು ನೀರಿನಿಂದ ರಕ್ಷಣೆ ಹೊಂದಿವೆ ಮತ್ತು Android 16 ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸಲಿವೆ.

Oppo Find X9 ಸರಣಿ ಲಾಂಚ್: ಬೆಲೆ, ವೈಶಿಷ್ಟ್ಯಗಳು ಮತ್ತು ಸಂಪೂರ್ಣ ವಿವರ!

Oppo Find X9 Pro ಮತ್ತು Oppo Find X9 :ಬೆಲೆಗಳು ಎಷ್ಟು?
Oppo Find X9 ಮತ್ತು Oppo Find X9 Pro ಎರಡೂ ಪೋನ್‌ಗಳು ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿವೆ. ಅಲ್ಲಿ ಬೆಲೆಗಳು ಈ ಕೆಳಕಂಡಂತಿವೆ,

Oppo Find X9 ಬೆಲೆಗಳು
12GB + 256GB - CNY 4,399 (ಅಂದಾಜು ₹54,000)
16GB + 256GB - CNY 4,699 (ಅಂದಾಜು ₹58,000)
12GB + 512GB - CNY 4,999 (ಅಂದಾಜು ₹61,000)
16GB + 512GB - CNY 5,299 (ಅಂದಾಜು ₹65,000)
16GB + 1TB - CNY 5,799 (ಅಂದಾಜು ₹71,000)

Oppo Find X9 Pro ಬೆಲೆಗಳು
12GB + 256GB - CNY 5,299 (ಅಂದಾಜು ₹65,000)
12GB + 512GB - CNY 5,699 (ಅಂದಾಜು ₹70,000)
16GB + 512GB - CNY 5,999 (ಅಂದಾಜು ₹74,000)
16GB + 1TB - CNY 6,699 (ಅಂದಾಜು ₹82,000)

ಒಟ್ಟಾರೆಯಾಗಿ, Oppo Find X9 Pro ಮತ್ತು Find X9 ಎಂಬ ಎರಡೂ ಫೋನ್‌ಗಳು ಅತ್ಯುತ್ತಮ ತಂತ್ರಜ್ಞಾನ ಹೊಂದಿವೆ. ಫೋನ್‌ಗಳ ಕ್ಯಾಮೆರಾ ವಿಭಾಗದ ಕುರಿತು ಒಂದು ಮಾತಿನಲ್ಲಿ ಹೇಳಬೇಕೆಂದರೆ, ನಿಮಗೆ ಹೆಚ್ಚು ಕ್ಯಾಮೆರಾ ಫೋಕಸ್ ಬೇಕಾದರೆ Pro ಮಾದರಿ ಅತ್ಯುತ್ತಮ ಆಯ್ಕೆ. ಆದರೆ ಸಾಮಾನ್ಯ ಉಪಯೋಗಕ್ಕೆ Find X9 ಕೂಡ ಉತ್ತಮವಾಗಿದೆ. ಇನ್ನು ಜನಪ್ರಿಯ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರನ್ನು ಮೂಲವಾಗಿ ಉಲ್ಲೇಖಿಸಿರುವ ಕೆಲವು ವರದಿಗಳು, Oppo Find X9 ಸರಣಿಯು ನವೆಂಬರ್ 18 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಬಹಿರಂಗಪಡಿಸಿವೆ. ಆದರೆ, ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ. ನನ್ನ ಊಹೆಯಂತೆ, Oppo Find X9 ಸರಣಿಯು ಭಾರತದ ಮಾರುಕಟ್ಟೆಗೆ ನವೆಂಬರ್‌ನಲ್ಲಿ ಬರಲಿವೆ. ಏಕೆಂದರೆ, Oppo ಕಂಪೆನಿಯ ನೆಚ್ಚಿನ ಮಾರುಕಟ್ಟೆ ಭಾರತವೇ ಆಗಿದೆ.

Best Mobiles in India

English summary
Oppo has officially launched the Find X9 and Find X9 Pro smartphones with flagship-grade performance, advanced cameras, and premium design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+