ಬ್ಲ್ಯಾಕ್ ಬೆರಿ 9930 ಮತ್ತು 9850 ಮೊಬೈಲ್ ಪರಿಷ್ಕರಣೆ

By Super
|
ಬ್ಲ್ಯಾಕ್ ಬೆರಿ 9930 ಮತ್ತು 9850 ಮೊಬೈಲ್ ಪರಿಷ್ಕರಣೆ


ಮೊಬೈಲ್ ಬಿಡುಗಡೆಗೊಳಿಸಿ ಮಾರಾಟವಾದ ನಂತರವೂ ಅವುಗಳ ಸಾಮರ್ಥ್ಯ ಹೆಚ್ಚಿಸಲು ಪರಿಷ್ಕರಣೆ ಮಾಡುವುದರಲ್ಲಿ ನೋಕಿಯಾ ಮತ್ತು ಬ್ಲ್ಯಾಕ್ ಬೆರಿ ಕಂಪನಿ ಹೆಸರುವಾಸಿ. ಗ್ರಾಹಕರ ನಂಬಿಕೆಗರ್ಹವಾದ ಈ ಕಂಪನಿಗಳು ಇಂತಹ ಪ್ರಯತ್ನಗಳನ್ನು ಮುಂದುವರೆಸುತ್ತಿರುತ್ತವೆ.

ಇತ್ತೀಚೆಗಷ್ಟೆ ಬ್ಯಾಕ್ ಬೆರಿ ಕಂಪನಿ ತನ್ನ ಬ್ಲ್ಯಾಕ್ ಬೆರಿ ಬೋಲ್ಡ್ 9930 ಮತ್ತು ಬ್ಲ್ಯಾಕ್ ಬೆರಿ ಟಚ್ 9850 ಮೊಬೈಲ್ ಗಳನ್ನು ಪರಿಷ್ಕ್ರತಗೊಳಿಸುವುದಾಗಿ ತಿಳಿಸಿದೆ. ಕೆಲವು ದಿನಗಳ ಹಿಂದಷ್ಟೇ ಈ ಪರಿಷ್ಕರಣೆ ಬಗ್ಗೆ ಸುದ್ದಿ ಹಬ್ಬಿದ್ದು, ಇದೀಗ ಆ ಸುದ್ದಿ ನಿಶ್ಚಯವಾಗಿದೆ.

ಬ್ಲ್ಯಾಕ್ ಬೆರಿ ತನ್ನ ಎರಡು ಮೊಬೈಲ್ ಗಳ ಆಪರೇಟಿಂಗ್ ಸಿಸ್ಟಮನ್ನು ಪರಿಷ್ಕ್ರತಗೊಳಿಸುತ್ತಿದೆ. ಈ ಪರಿಷ್ಕರಣೆಯಲ್ಲಿ ಮೊಬೈಲ್ ಹಾಟ್ ಸ್ಪಾಟ್ ಕಾರ್ಯವೈಖರಿ ಇರುವುದು ವಿಶೇಷವೆನಿಸಿದೆ. ಇದರಿಂದ ಏನು ಪ್ರಯೋಜನವೆಂದರೆ, ಇನ್ನಿತರ ಸಾಧನಗಳೊಂದಿಗೆ ನಿಮ್ಮ ಮೊಬೈಲನ್ನು ವೈ-ಫೈ ಹಾಟ್ ಸ್ಪಾಟ್ ನಂತೆ ಬಳಸಿಕೊಳ್ಳಬಹುದಾಗಿದೆ. ನಿಮ್ಮ ಡೇಟಾ ಪ್ಲಾನ್ ಗಳನ್ನು ಈ ಮೊಬೈಲ್ ಹಾಟ್ ಸ್ಪಾಟ್ ಬಳಸಿಕೊಳ್ಳಲಿದೆ. ಈ ಮೊಬೈಲ್ ಹಾಟ್ ಸ್ಪಾಟ್ ಕಾರ್ಯ ನಿರ್ವಹಿಸಬೇಕೆಂದರೆ ವೈ-ಫೈ ರೇಡಿಯೋ ಕೂಡ ಆನ್ ಆಗಿರಬೇಕು.

ನಿಮ್ಮ ಮೊಬೈಲ್ ಗೆ ಹೆಚ್ಚು ವೇಗ ಪಡೆಯಲು ಹೆಚ್ಚು ವೇಗದ ಮಾಡೆಮ್ ಅಳವಡಿಸುವ ಅವಕಾಶವನ್ನೂ ನೀಡಲಾಗಿದೆ.

ಮೊಬೈಲ್ 7.1 ಆಯಾಮಕ್ಕೆ ಪರಿಷ್ಕರಣೆಗೊಳ್ಳಲಿದೆ. ಈ ಹೊಸ ಪರಿಷ್ಕರಣೆಯಲ್ಲಿ ಅನೇಕ ಅತ್ಯಾಧುನಿಕ ಮತ್ತು ಆಸಕ್ತಿದಾಯಕ ಲಕ್ಷಣಗಳನ್ನು ಬಳಕೆದಾರರ ಅನುಕೂಲಕ್ಕೆಂದು ಅಳವಡಿಸಲಾಗಿದೆ.

ಈ ಪರಿಷ್ಕರಣೆಗಳನ್ನು ಅಳವಡಿಸಿಕೊಳ್ಳಲು ಎರಡು ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಾಗಿದೆ. ಮೊಬೈಲ್ ನಲ್ಲಿನ ಇಂಟರ್ನೆಟ್ ಮೂಲಕ ಅಪ್ಡೇಟಿಂಗ್ ಅಥವಾ ಲ್ಯಾಪ್ ಟಾಪ್, ಕಂಪ್ಯೂಟರ್ ಮೂಲಕ ಅಪ್ಡೇಟ್ ಮಾಡಿಕೊಂಡು ನಂತರ USB ಡೇಟಾ ಕೇಬಲ್ ಮೂಲಕ ಮೊಬೈಲ್ ಗೆ ಅಳವಡಿಸಿಕೊಳ್ಳಬಹುದು.

ನಿಮಗೆ ಈ ಪರಿಷ್ಕರಣೆ ಬಗ್ಗೆ ಯಾವುದೇ ನೋಟಿಫಿಕೇಶನ್ ಸಿಗದ ಪಕ್ಷದಲ್ಲಿ RIM ವೆಬ್ ಸೈಟ್ ನಲ್ಲಿ ಬ್ಲ್ಯಾಕ್ ಬೆರಿ ಡೆಸ್ಕ್ ಟಾಪ್ ಸಾಫ್ಟ್ ವೇರ್ ಸಹಾಯದಿಂದ ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. Mac ಬಳಕೆದಾರರು ಈ ಪರಿಷ್ಕರಣೆಗೆ ಸ್ವಲ್ಪ ದಿನ ಕಾಯಬೇಕಿದೆ. ಈ ನೂತನ ಮೊಬೈಲ್ ಹಾಟ್ ಸ್ಪಾಟ್ ಬಳಕೆದಾರರಿಗೆ ಹೆಚ್ಚು ಉಪಯೋಗವಾಗಲಿದೆ.

ಈ ಎರಡೂ ಮೊಬೈಲ್ ಗಳು ಮಾತ್ರವಲ್ಲದೆ, ಮುಂದಿನ ವರ್ಷದಲ್ಲಿ ಬ್ಲ್ಯಾಕ್ ಬೆರಿಯ ಅನೇಕ ಮೊಬೈಲ್ ಗಳೂ ಕೂಡ ಪರಿಷ್ಕರಣೆಗೆ ಒಳಪಡಲಿರುವುದು ಬಳಕೆದಾರರಿಗೆ ಸಿಹಿ ಸುದ್ದಿಯಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X