ಪೇಸ್ ಮೇಕರ್ ಇದ್ದರೆ ಮೊಬೈಲ್ ಬಳಕೆ ಮಾಡಬೇಡಿ ಪ್ಲೀಸ್: DoT

By Varun
|
ಪೇಸ್ ಮೇಕರ್ ಇದ್ದರೆ ಮೊಬೈಲ್ ಬಳಕೆ  ಮಾಡಬೇಡಿ ಪ್ಲೀಸ್: DoT

ದೂರಸಂಪರ್ಕ ಇಲಾಖೆಯ ( DoT) ಇತ್ತೀಚಿನ ನಿರ್ದೇಶನದ ಮೇರೆಗೆ ನಿಮಗೆ ಹೃದಯ ಸಂಬಂಧೀ ಖಾಯಿಲೆ ಇದ್ದು ಪೇಸ್ ಮೇಕರ್ ಅಳವಡಿಸಲಾಗಿದ್ದರೆ ಅಥವಾ ಇನ್ನಾವುದೇ ಖಾಯಿಲೆ ಇದ್ದು ಅಂಗ ಕಸಿ ಮಾಡಿದ್ದಲ್ಲಿ ಮೊಬೈಲ್ ಫೋನ್ ಅನ್ನ ಬಳಸುವಾಗ ಕನಿಷ್ಠ ಪಕ್ಷ 15 ಸೆಂಟಿ ಮೀಟರ್ ದೂರವಿರಬೇಕು ಎಂದು ಸ್ಪಷ್ಟ ಪಡಿಸಿದೆ ಹಾಗು ಮೊಬೈಲ್ ತಯಾರಕರೂ ಕೂಡ ಈ ಅಂಶವನ್ನ ಹ್ಯಾಂಡ್ಸೆಟ್ ಕಿರುಹೊತ್ತಿಗೆಯಲ್ಲಿ ಬರುವ ಸೆಪ್ಟೆಂಬರ್ 1 ರೊಳಗೆ ಪ್ರಕಟಿಸಬೇಕೆಂದೂ ಸೂಚನೆ ಹೊರಡಿಸಿದೆ.

ಎಸ್ಕಾರ್ಟ್ಸ್ ಹಾರ್ಟ್ ಸಂಶೋಧನಾ ಕೇಂದ್ರದ ಹಿರಿಯ ಹೃದಯರೋಗ ತಜ್ಞೆ ಡಾ ಅಪರ್ಣಾ ಜಸ್ವಾಲ್ನ ಅವರ ಪ್ರಕಾರ ಪೇಸ್ ಮೇಕರ್ ಇರುವ ವ್ಯಕ್ತಿಗಳು ಮೊಬೈಲ್ ಬಳಸುವುದರಿಂದ ಅಥವಾ ಜೇಬಿನಲ್ಲಿ ಇಟ್ಟುಕೊಂಡಿದ್ದರೆ ಮೊಬೈಲ್ ನ ಸಿಗ್ನಲ್ ನಿಂದಾಗಿ ಪೇಸ್ ಮೇಕರ್ ನ ಪಲ್ಸ್ ಏರು ಪೇರಾಗಿ ವ್ಯಕ್ತಿಗೆ ಸುಸ್ತಾಗಬಹುದು ಇಲ್ಲವೆ ಅದು ಕೆಲಸ ಮಾಡುವುದು ನಿಲ್ಲಿಸುವ ಸಾಧ್ಯತೆ ಇದೆಯಂತೆ.

ಇದನ್ನು ತಡೆಯಲು ಮೊಬೈಲ್ ಅನ್ನ ಜೇಬಿನಲ್ಲಿ ಇಟ್ಟುಕೊಳ್ಳದೆ ಬ್ಲೂ ಟೂತ್ ಅಥವಾ ಹ್ಯಾಂಡ್ಸ್ ಫ್ರೀ ಸಾಧನ ವನ್ನ ಬಳಸುವುದು ಇಲ್ಲವೆ ಎಸ್.ಎಂ.ಎಸ್ ಮೂಲಕ ಸಂಪರ್ಕ ಇಟ್ಟುಕೊಂಡರೆ ಸುರಕ್ಷಿತ ಎಂಬುದು ಅವರ ಅಭಿಪ್ರಾಯ.

ಪೇಸ್ ಮೇಕರ್ ಇರುವ ವ್ಯಕ್ತಿಯ ಪಕ್ಕ ನಾವು ಇದ್ದರೂ ಸಹ ನಮ್ಮ ಮೊಬೈಲ್ ಬಳಸದಿದ್ದರೆ ಒಳ್ಳೆಯದು ಅಲ್ಲವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X