5000mAh ಬ್ಯಾಟರಿ ಫೋನ್ 'ಪ್ಯಾನಾಸೋನಿಕ್ ಎಲುಗ ಎ4' ಲಾಂಚ್!..ಬೆಲೆ ಕೇವಲ 12,490ರೂ.!!
ಅತ್ಯಂತ ಕಡಿಮೆ ಬೆಲೆಯಲ್ಲಿ 5000mAh ಬ್ಯಾಟರಿ ಸಾಮರ್ಥ್ಯ ಮತ್ತು ಉತ್ತಮ ಫೀಚರ್ಸ್ ಹೊಂದಿರುವ "ಪ್ಯಾನಾಸೋನಿಕ್ ಎಲುಗ ಎ4" ಮಾರುಕಟ್ಟೆಗೆ ಎಂಟ್ರಿ ನೀಡಿದೆ.!!
ಟಿವಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ಎಲೆಕ್ಟ್ರಾನಿಕ್ ಕಂಪೆನಿ ಪ್ಯಾನಾಸೋನಿಕ್ ಕಂಪೆನಿ ಮೊಬೈಲ್ ಮಾರುಕಟ್ಟೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ನಿಂದ ಲಗ್ಗೆ ಹಾಕಿದೆ.! ಅತ್ಯಂತ ಕಡಿಮೆ ಬೆಲೆಯಲ್ಲಿ 5000mAh ಬ್ಯಾಟರಿ ಸಾಮರ್ಥ್ಯ ಮತ್ತು ಉತ್ತಮ ಫೀಚರ್ಸ್ ಹೊಂದಿರುವ "ಪ್ಯಾನಾಸೋನಿಕ್ ಎಲುಗ ಎ4" ಮಾರುಕಟ್ಟೆಗೆ ಎಂಟ್ರಿ ನೀಡಿದೆ.!!
ಇದೇ ಮೊದಲ ಸಾರಿ 5000mAh ಬ್ಯಾಟರಿ ಸಾಮರ್ಥ್ಯ ಮತ್ತು 3GB RAM ಹೊಂದಿರುವ ಸ್ಮಾರ್ಟ್‌ಫೋನ್ ಒಂದು ಕೇವಲ 12,490 ರೂಪಾಯಿಗಳಿಗೆ ಬಿಡುಗಡೆಯಾಗಿದ್ದು, ಈ ಸ್ಮಾರ್ಟ್‌ಫೋನ್ ಶಿಯೋಮಿ ಮತ್ತು ಇತರ ಬಜೆಟ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಸೆಡ್ಡುಹೊಡೆಯುತ್ತಿದೆ.! ಹಾಗಾದರೆ, ಪ್ಯಾನಾಸೋನಿಕ್ ಎಲುಗ ಎ4 ಫೋನ್ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಕಾಲಿಟ್ಟಿರುವ ಪ್ಯಾನಾಸೋನಿಕ್ ಎಲುಗ ಎ4 ಸ್ಮಾರ್ಟ್‌ಫೋನ್ 5.2 ಇಂಚ್ ಹೆಚ್‌ಡಿ (720 x 1280 ಪಿಕ್ಸೆಲ್) ಡಿಸ್‌ಪ್ಲೇ ಹೊಂದಿದೆ.! ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಹೊಂದಿರುವ ಈ ಫೋನ್ ಮುಂಬಾಗದಲ್ಲಿ ಹೋಮ್‌ಬಟನ್ ಅಳವಡಿಸಲಾಗಿದೆ.!!

ಪ್ರೊಸೆಸರ್ ಮತ್ತು ಒಎಸ್!!
ಪ್ಯಾನಾಸೋನಿಕ್ ಎಲುಗ ಎ4 ಸ್ಮಾರ್ಟ್‌ಫೋನ್ 1.15GHz ಕ್ವಾಡ್-ಕೋರ್ ಮೀಡಿಯಾಟೆಕ್ ಪ್ರೊಸೆಸರ್ ಅನ್ನು ಹೊಂದಿದೆ. ಆಂಡ್ರಾಯ್ಡ್ 7.0 ನ್ಯೂಗಾದಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗುವ ಬಗ್ಗೆ ಕಂಪೆನಿ ಮಾಹಿತಿ ನೀಡಿಲ್ಲ.!!

RAM ಮತ್ತು ಮೆಮೊರಿ!!
3GB RAM ಮತ್ತು 32GB ಮೆಮೊರಿ ಹೊತ್ತು ಪ್ಯಾನಾಸೋನಿಕ್ ಎಲುಗ ಎ4 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.!! ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ವಿಸ್ತರಿಸುವ ಅವಕಾಶವನ್ನು ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗಿದೆ.!!

ಕ್ಯಾಮೆರಾ ಹೇಗಿದೆ?
ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಂತೆ ಪ್ಯಾನಾಸೋನಿಕ್ ಎಲುಗ ಎ4 ಫೋನ್ ಕೂಡ 13MP ರಿಯರ್ ಕ್ಯಾಮೆರಾ ಮತ್ತು ಕ್ಯಾಮೆರಾ ಫ್ಲಾಶ್ ಹಾಗೂ 5MP ಸೆಲ್ಫಿ ಕ್ಯಾಮೆರಾ ಹೊಂದಿದೆ.! ಈ ಫೋನ್‌ನಲ್ಲಿ ಕ್ಯಾಮೆರಾ ತಂತ್ರಜ್ಞಾನವನ್ನು ಹೆಚ್ಚಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.!!

ಅತ್ಯದ್ಬುತ ಬ್ಯಾಟರಿ!!
ಕೇವಲ 12,490 ರೂ.ಗೆ ಬಿಡುಗಡೆಯಾಗಿರುವ ಪ್ಯಾನಾಸೋನಿಕ್ ಎಲುಗ ಎ4 ಫೋನ್ ವಿಶೇಷವೆ 5000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವುದು. ಅತ್ಯಂತ ಕಡಿಮೆ ಬೆಲೆಯಲ್ಲಿ ಇಷ್ಟು ಬ್ಯಾಟರಿ ಸಾಮರ್ಥ್ಯ ಹೊಂದಿರುವ ಮೊದಲ ಫೋನ್ ಪ್ಯಾನಾಸೋನಿಕ್ ಎಲುಗ ಎ4!!

ಇತರೆ ಫೀಚರ್ಸ್ ಮತ್ತು ಮಾರಾಟ!!
ಬ್ಲೂಟೂತ್ 4.2, ಜಿಪಿಎಸ್, ಯುಎಸ್‌ಬಿ ಒಟಿಜಿ , ARBO ಪರ್ಸನಲ್ ಅಸಿಸ್ಟೆಂಟ್‌ನಂತಹ ಬಹುತೇಕ ಎಲ್ಲಾ ಫೀಚರ್ಸ್‌ಗಳು ಎಲುಗ ಎ4 ಫೋನ್‌ನಲ್ಲಿ ಲಭ್ಯವಿದ್ದು, ಈ ಫೋನ್ ಖರೀದಿಸಲು ನೀವು ಪ್ಯಾನಾಸೋನಿಕ್‌ನ ಅಧಿಕೃತ ಸ್ಟೋರ್‌ಗಳಿಗೆ ಮಾತ್ರ ತೆರಳಬೇಕು.!!


Click it and Unblock the Notifications








