'ಪೆನಾಸೋನಿಕ್ ಎಲುಗಾ ಪ್ರಿಮ್' ಸ್ಮಾರ್ಟ್‌ಫೋನ್‌ ರೂ.10,290 ಕ್ಕೆ ಲಾಂಚ್‌: ತಿಳಿಯಲೇಬೇಕಾದ ಫೀಚರ್‌ಗಳು

Written By:

ಪೆನಾಸೋನಿಕ್ ನೆನ್ನೆ(ಶುಕ್ರವಾರ) ಹೊಸ ಆಂಡ್ರಾಯ್ಡ್ ಹ್ಯಾಂಡ್‌ಸೆಟ್ ಅನ್ನು ಬಜೆಟ್‌ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಬಿಡುಗಡೆ ಮಾಡಿದೆ. 4G LTE ಎನೇಬಲ್‌ನ ಪೆನಾಸೋನಿಕ್ ಎಲುಗಾ ಪ್ರಿಮ್‌(Panasonic Eluga Prim) ಎಂಬ ಸ್ಮಾರ್ಟ್‌ಫೋನ್ ಅನ್ನು ರೂ.10,290 ಕ್ಕೆ ಲಾಂಚ್‌ ಮಾಡಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಅನ್ನು ಆಫ್‌ಲೈನ್ ರೀಟೇಲರ್ ಶಾಪ್‌ಗಳಲ್ಲಿ ಭಾರತದಾದ್ಯಂತ ಖರೀದಿಸಬಹುದು. ಡಿವೈಸ್ ಚಿನ್ನ ಮತ್ತು ಗನ್ ಮೆಟಲ್ ಬೆಳ್ಳಿ ಬಣ್ಣಗಳ ವೈವಿಧ್ಯತೆಯಲ್ಲಿ ಲಭ್ಯ.

'ಪೆನಾಸೋನಿಕ್ ಎಲುಗಾ ಪ್ರಿಮ್' ಸ್ಮಾರ್ಟ್‌ಫೋನ್‌ ರೂ.10,290 ಕ್ಕೆ ಲಾಂಚ್‌:

ಪೆನಾಸೋನಿಕ್ ಎಲುಗಾ ಪ್ರಿಮ್‌ 4G LTE ಜೊತೆಗೆ, ವಾಯ್ಸ್ ಓವರ್ VoLTE ಸಪೋರ್ಟ್ ಹೊಂದಿದೆ. ರಿಲಾಯನ್ಸ್ ಜಿಯೋ ರೀತಿಯಲ್ಲಿ ಮೊಬೈಲ್‌ ಡೇಟಾ ಮೂಲಕ ವಾಯ್ಸ್ ಕರೆ ಮಾಡಬಹುದು. ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್‌ ಸಿಮ್ ಸಪೋರ್ಟ್ ಫೀಚರ್ ಇದ್ದು, 16GB ಆಂತರಿಕ ಮೆಮೊರಿ ಇದ್ದು, 32GB ವರೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಸಾಮರ್ಥ್ಯ ವಿಸ್ತರಿಸಬಹುದು.

'ಪೆನಾಸೋನಿಕ್ ಎಲುಗಾ ಪ್ರಿಮ್' ಸ್ಮಾರ್ಟ್‌ಫೋನ್‌ ರೂ.10,290 ಕ್ಕೆ ಲಾಂಚ್‌:

ಪೆನಾಸೋನಿಕ್ ಎಲುಗಾ ಪ್ರಿಮ್‌, 5 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಜೊತೆಗೆ 720x1280p ರೆಶಲ್ಯೂಶನ್ ಮತ್ತು 2.5D ಅಸಾಹಿ ಗ್ಲಾಸ್ ಲೇಯರ್ ಹೊಂದಿದೆ. ಸ್ಮಾರ್ಟ್‌ಫೋನ್‌ ಕ್ವಾಡ್‌ಕೋರ್ 1.2GHz ಪ್ರೊಸೆಸರ್ ಜೊತೆಗೆ 3GB RAM ಹೊಂದಿದೆ.

'ಪೆನಾಸೋನಿಕ್ ಎಲುಗಾ ಪ್ರಿಮ್' ಸ್ಮಾರ್ಟ್‌ಫೋನ್‌ ರೂ.10,290 ಕ್ಕೆ ಲಾಂಚ್‌:

ಸ್ಮಾರ್ಟ್‌ಫೋನ್ 13MP ಆಟೋಫೋಕಸ್ ಹಿಂಭಾಗ ಕ್ಯಾಮೆರಾ ಜೊತೆಗೆ ಮೂರು ಎಲ್‌ಇಡಿ ಫ್ಲ್ಯಾಶ್ ಹೊಂದಿದೆ. 5MP ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ. ಮುಂಭಾಗದಲ್ಲಿ ಫ್ರಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ನಿಂದ ರನ್‌ ಆಗುತ್ತದೆ. ಡಿವೈಸ್ ವೈಯಕ್ತಿಕ ಆಂಡ್ರಾಯ್ಡ್ ವರ್ಕ್‌ ಆಪ್‌ಗಳು, ವಿಶೇಷ ಫೀಚರ್ ಆಪ್‌ಗಳನ್ನು ಹೊಂದಿದೆ. ಸಾಫ್ಟ್‌ವೇರ್‌ ಫೀಚರ್‌ಗಳು ಬಳಕೆದಾರರ ಡೇಟಾವನ್ನು ಸುರಕ್ಷಿತಗೊಳಿಸುತ್ತವೆ.

ಸ್ಮಾರ್ಟ್‌ಫೋನ್ 2,500mAh ಬ್ಯಾಟರಿ ಯುನಿಟ್ ಹೊಂದಿದ್ದು, 3G HSPA+, ವೈಫೈ 802.11 b/g/n, ಬ್ಲೂಟೂತ್ 4.0 ಮತ್ತು ಇತರೆ ಸ್ಟ್ಯಾಂಡರ್ಡ್ ಸಂಪರ್ಕ ಆಪ್ಶನ್‌ಗಳನ್ನು ಹೊಂದಿದೆ.

'ಪೆನಾಸೋನಿಕ್ ಎಲುಗಾ ಪ್ರಿಮ್' ಸ್ಮಾರ್ಟ್‌ಫೋನ್‌ ರೂ.10,290 ಕ್ಕೆ ಲಾಂಚ್‌:

ರೂ.10,290 ಬೆಲೆಯ ಪೆನಾಸೋನಿಕ್ ಎಲುಗಾ ಪ್ರಿಸ್ಮ್, ಫೀಚರ್‌ಗಳನ್ನು ಗಮನಿಸಿ ನೋಡಿದಾಗ, ಚೀನ ಡಿವೈಸ್‌ಗಳ ಮುಂದೆ ಕಠಿಣ ಸ್ಪರ್ಧೆಯನ್ನು ಎದುರಿಸಲಿದೆ. ಯಾಂಕದ್ರೆ ಲೆನೊವೋ ಇತ್ತೀಚೆಗೆ ತಾನೆ ಬಜೆಟ್ ಫೋನ್ ಕೆಟಗರಿಯಲ್ಲಿ ಕೆ6 ಪವರ್ ಡಿವೈಸ್‌ ಲಾಂಚ್ ಮಾಡಿದ್ದು, ಬಿಗ್‌ ಬ್ಯಾಟರಿ ಫೀಚರ್ ಜೊತೆಗೆ ಹಲವು ಹೆಚ್ಚಿನ ಫೀಚರ್‌ಗಳನ್ನೇ ಹೊಂದಿದೆ. ಶ್ಯೋಮಿ ರೆಡ್ಮಿ ನೋಟ್ 3 ಸಹ ಉತ್ತಮ ಮೌಲ್ಯ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
Panasonic Eluga Prim Launched: Everything You Need To Know. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot