Subscribe to Gizbot

ಡ್ಯುಯಲ್ ಕ್ಯಾಮೆರಾ, 4000mAh ಬ್ಯಾಟರಿ, ಫಿಂಗರ್‌ಪ್ರಿಂಟ್ ಸ್ಮಾರ್ಟ್‌ಫೋನ್ ಬೆಲೆ ಈಗ 7,450 ರೂ.ಮಾತ್ರ!!

Written By:

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಪ್ರಖ್ಯಾತ ಎಲೆಕ್ಟ್ರಾನಿಕ್ ದೈತ್ಯ ಸಂಸ್ಥೆ ಪ್ಯಾನಸೋನಿಕ್ ಕಂಪೆನಿ ತನ್ನ ನೂತನ ಸ್ಮಾರ್ಟ್‌ಫೋನ್ ಮೇಲೆ ಶೇ.33 ರಷ್ಟು ಬೆಲೆ ಕಡಿಮೆ ಮಾಡಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ಪ್ಯಾನಾಸೋನಿಕ್ 'ಎಲುಗಾ ರೇ 550' ಸ್ಮಾರ್ಟ್‌ಫೋನ್ ಬೆಲೆ ಇದೀಗ ಕೇವಲ 7,450 ರೂಪಾಯಿಗಳಾಗಿವೆ.

ಡ್ಯುಯಲ್ ರಿಯರ್ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಫೀಚರ್ ಮತ್ತು 4000mAh ಬ್ಯಾಟರಿಯಂತಹ ಅತ್ಯದ್ಬುತ ಫೀಚರ್ಸ್ ಹೊಂದಿರುವ ನೂತನ ''ಎಲುಗಾ ರೇ 500'' ಸ್ಮಾರ್ಟ್‌ಫೋನ್ 5 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿರುವ ಕಡಿಮೆ ಬೆಲೆಯ ಬೆಸ್ಟ್ ಬಜೆಟ್ ಸ್ಮಾರ್ಟ್‌ಪೋನ್ ಎಂಬ ಹಣಿಪಟ್ಟಿಯನ್ನು ಪಡೆದುಕೊಂಡಿದೆ.

4000mAh ಬ್ಯಾಟರಿ, ಫಿಂಗರ್‌ಪ್ರಿಂಟ್ ಸ್ಮಾರ್ಟ್‌ಫೋನ್ ಬೆಲೆ ಈಗ 7,450 ರೂ.ಮಾತ್ರ!!

ಪ್ರಖ್ಯಾತ ಆನ್‌ಲೈನ್ ಮಾರುಕಟ್ಟೆ ಫ್ಲಿಪ್‌ಕಾರ್ಟ್ ಮತ್ತು ಪ್ಯಾನಾಸೋನಿಕ್ ಮಳಿಗೆಗಳಲ್ಲಿ ಪ್ಯಾನಾಸೋನಿಕ್ 'ಎಲುಗಾ ರೇ 550' ಸ್ಮಾರ್ಟ್‌ಪೋನ್ ನಾವು ನೀಡುವ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದ್ದು, ಹಾಗಾದರೆ, ಪ್ಯಾನಸೋನಿಕ್ ಎಲುಗಾ ರೇ 5೦೦ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಖರೀದಿಸಲು ಯೋಗ್ಯವೇ ಎಂಬುದನ್ನು ಮುಂದೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಪ್ಯಾನಾಸೋನಿಕ್ 'ಎಲುಗಾ ರೇ 550' ಸ್ಮಾರ್ಟ್‌ಪೋನ್ 5.0 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ನೋಡಲು ಆಕರ್ಷಕವಾಗಿರುವ ಸ್ಮಾರ್ಟ್‌ಫೋನ್ ಹಿಂಬಾಗದಲ್ಲಿ ರಿಯರ್ ಕ್ಯಾಮೆರಾ ಹಾಗೂ ಹೊಮ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿದೆ. ಹಿಂಬಾಗದಲ್ಲಿ ಮಾತ್ರ ಎಲ್‌ಇಡಿ ಫ್ಲಾಶ್ ಅನ್ನು ನೀಡಲಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಪ್ಯಾನಾಸಾನಿಕ್ ಎಲುಗಾ ರೇ 500 1.25GHz ಕ್ವಾಡ್-ಕೋರ್ ಮೀಡಿಯಾಟೆಕ್ MTK6737 ಪ್ರೊಸೆಸರ್ ಹೊಂದಿದೆ. ಇದು 3GB RAM ಮತ್ತು 32GB ಆಂತರಿಕ ಮೆಮೊರಿ ವೆರಿಯಂಟ್‌ನಲ್ಲಿ ಹೊರಬಂದಿರುವ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ಮತ್ತು ಬ್ಯಾಟರಿ!

ಕ್ಯಾಮೆರಾ ಮತ್ತು ಬ್ಯಾಟರಿ!

ಪ್ಯಾನಾಸೋನಿಕ್ 'ಎಲುಗಾ ರೇ 550' ಸ್ಮಾರ್ಟ್‌ಪೋನ್ 13MP + 8MPಯ ಎರಡು ರಿಯರ್ ಕ್ಯಾಮೆರಾಗಳನ್ನು ಹಾಗೂ 5ಎಂಪಿ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಬ್ಯಾಟರಿ ವಿಷಯದಲ್ಲಿಯೂ ಅತ್ಯುತ್ತಮವಾಗಿರುವ ಈ ಸ್ಮಾರ್ಟ್‌ಫೋನ್ 4000mAh ನಾನ್ ರಿಮೂವೆಬಲ್ ಬ್ಯಾಟರಿಯನ್ನು ಹೊಂದಿದೆ.

ಆನ್‌ಲೈನಿನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಹೇಗೆ?..March 31 ಕೊನೆಯ ದಿನ!!
ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಪ್ಯಾನಾಸಾನಿಕ್ ಎಲುಗಾ ರೇ 500 ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದ್ದು , ವೈ-ಫೈ, ಜಿಪಿಎಸ್, ಬ್ಲೂಟೂತ್, ಎಫ್ಎಂ, 3ಜಿ ಮತ್ತು 4ಜಿ (ಭಾರತದಲ್ಲಿ ಕೆಲವು ಎಲ್ ಟಿಇ ನೆಟ್ವರ್ಕ್ಗಳಿಂದ ಬಳಸಲ್ಪಡುವ ಬ್ಯಾಂಡ್ 40ರ ಬೆಂಬಲದೊಂದಿಗೆ) ಫೀಚರ್ಸ್‌ಗಳನ್ನು ಹೊಂದಿದೆ. ಫೋನಿನಲ್ಲಿ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರ್ ಮತ್ತು ಆಂಬಿಯಂಟ್ ಲೈಟ್ ಸೆನ್ಸರ್ ಅನ್ನು ನೀಡಲಾಗಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Neatly encased in a full gold body, the slim and sleek Panasonic Eluga Ray 500 is as good looking as it is powerful. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot