Home
ಮೊಬೈಲ್

ಪ್ಯಾಸನೋನಿಕ್ ಮಾಂತ್ರಿಕ ಅಸ್ತ್ರವಾಗಿ ಎಲುಗಾ ಯು ಫೋನ್

By Shwetha

ಜಪಾನಿ ತಾಂತ್ರಿಕ ಮುತ್ಸದ್ದಿ ಕಂಪೆನಿ ಪ್ಯಾನಸೋನಿಕ್ ಅತ್ಯಾಧುನಿಕ ಹ್ಯಾಂಡ್‌ಸೆಟ್‌ನೊಂದಿಗೆ ಮಾರುಕಟ್ಟೆಗೆ ಇಳಿದಿದೆ. ಪ್ಯಾನಸೋನಿಕ್ ಕಂಪೆನಿಯು ಮಾರುಕಟ್ಟೆಯಲ್ಲಿರುವ ಪ್ರಬಲ ಪೈಪೋಟಿಯ ನಡುವೆ ಕೂಡ ತನ್ನ ವ್ಯಾಪಾರವನ್ನು ಕುದುರಿಸುವ ನಿಟ್ಟಿನಲ್ಲಿದೆ. ಪ್ಯಾನಸೋನಿಕ್ ಕಂಪೆನಿಗೆ ಈ ಫೋನ್‌ಗಳ ನಡುವಿನ ಪೈಪೋಟಿಯನ್ನು ಎದುರಿಸುವುದು ತುಸು ಕಷ್ಟವಾಗಿದೆ ಎಂಬುದು ಕಂಡುಬರುತ್ತಿದ್ದರೂ ತನ್ನ ಪ್ರಯತ್ನವನ್ನು ಜಪಾನಿ ಕಂಪೆನಿ ಕೈ ಬಿಟ್ಟಿಲ್ಲ.

ತನ್ನ ಫ್ಲ್ಯಾಗ್‌ಶಿಪ್ ಫೋನ್ ಆದ ಎಲುಗಾ ಯು ನೊಂದಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿರುವ ಪ್ಯಾನಸೋನಿಕ್ ಪ್ರಬಲ ಸ್ಪರ್ಧೆಗೆ ಉತ್ತಮ ಅಸ್ತ್ರದ ತಯಾರಿಯನ್ನು ಮಾಡಿಕೊಂಡು ಬಂದಂತಿದೆ. ಹಾಗಿದ್ದರೆ ಇಂದಿನ ವೀಡಿಯೊ ಲೇಖನದಲ್ಲಿ ಫೋನ್ ಕುರಿತ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಿ.

#1

#1

ಇದು 5 ಇಂಚಿನ HD ಸ್ಮಾರ್ಟ್‌ಫೋನ್ ಆಗಿದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಬೆಂಬಲ ಇದಕ್ಕಿದೆ. ಇದರ ಮನಮೋಹಕ ವಿನ್ಯಾಸ ಮತ್ತು ಕಿಟ್‌ಕ್ಯಾಟ್ ಅಂಶ ಗ್ರಾಹಕರನ್ನು ಸೆಳೆದಿಡುವಲ್ಲಿ ಪಾತ್ರವಹಿಸುವುದು ನಿಜವಾಗಿದೆ.

#2

#2

ಇದರ ಬೆಲೆ ರೂ 18,990 ಆಗಿದ್ದು ಅತ್ಯಪೂರ್ಣ ಕಣ್ಸೆಳೆಯುವ ಹ್ಯಾಂಡ್‌ಸೆಟ್ ಇದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದರೊಂದಿಗೆ ನಮ್ಮ ಅತ್ಯುತ್ತಮ ಸಮಯವನ್ನು ಕಳೆಯುವ ವಿಶೇಷ ಕೊಡುಗೆಯನ್ನು ಈ ಫೋನ್ ತನ್ನೊಂದಿಗೆ ತಂದಿದ್ದು ಖಂಡಿತ ಇದು ಮನಮೋಹಕಗೊಳಿಸುತ್ತದೆ.

#3

#3

ಈ ಫೋನ್ ಎಂದಿನ ಮೆಟಲ್ ದೇಹವನ್ನು ಹೊಂದಿರದೆ ದೀರ್ಘ ಕಾಲ ಬಾಳಿಕೆಯುಳ್ಳ ಸಾಮಾಗ್ರಿಯಿಂದ ಇದನ್ನು ತಯಾರಿಸಲಾಗಿದೆ. ಫೋನ್‌ನ ಮುಂಭಾಗ ಮತ್ತು ಹಿಂಭಾಗ ಕವರ್ ಗಟ್ಟಿಯಾಗಿದ್ದು ಆಕರ್ಷಕವಾಗಿದೆ. ಇದರ ಹಿಂಭಾಗವನ್ನು ಕ್ರಿಸ್ಟಲ್ ಗ್ಲಾಸ್‌ನಿಂದ ತಯಾರಿಸಲಾಗಿದ್ದು ಇದು ಫೋನ್ ಗಾಳಿ ಮತ್ತು ನೀರಿನಿಂದ ರಕ್ಷಿಸುತ್ತದೆ.

#4

#4

ನಿಮಗೆ ಈ ಫೋನ್‌ನಲ್ಲಿ ಪವರ್ ಮತ್ತು ವಾಲ್ಯೂಮ್ ಕೀಗಳನ್ನು ನೋಡಬಹುದಾಗಿದ್ದು ಫೋನ್ ಡ್ಯುಯಲ್ ಸಿಮ್ ಟ್ರೇ ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ನಿಮಗೆ ಫೋನ್‌ನ ಹಿಂಭಾಗ ಕವರ್ ಅನ್ನು ತೆಗೆಯಲಾಗುವುದಿಲ್ಲ ಎಂಬುದೇ ಇಲ್ಲಿರುವ ದುರಾದೃಷ್ಟಕರ ಸಂಗತಿಯಾಗಿದೆ. ಇದು 720p ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು ಗೋರಿಲ್ಲಾ ಗ್ಲಾಸ್ 3 ಮತ್ತು 5 ಇಂಚು ಡಿಸ್‌ಪ್ಲೇಯನ್ನು ಒಳಗೊಂಡಿದೆ.

#5

#5

ಕ್ವಾಡ್ - ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್, 2 ಜಿಬಿ RAM ಮತ್ತು 16 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಫೋನ್ ಹೊಂದಿದ್ದು ದೀರ್ಘ ಕಾಲದ ಕಾರ್ಯಾಚರಣೆಗೆ ಈ ಫೋನ್ ನೆರವನ್ನು ನೀಡಲಿದೆ. ಫೋನ್ ತಯಾರಕರು 2500mAh ಬ್ಯಾಟರಿಯನ್ನು ಫೋನ್‌ನಲ್ಲಿ ಅಳವಡಿಸಿದ್ದು ಇದು ನಾನ್ ರಿಮೂವೇಬಲ್ (ತೆಗೆಯಲಾರದ್ದು) ಬ್ಯಾಟರಿಯಾಗಿದೆ, ಇದು ಹೆಚ್ಚುವರಿ ಫೋನ್ ಬಳಕೆದಾರರಿಗೆ ನೋವಿನ ಸುದ್ದಿಯಾಗಿದೆ. ಇದು 5 ಇಂಚುಗಳಾಗಿದ್ದು ಮಾರುಕಟ್ಟೆಯಲ್ಲಿ ಇತ್ತೀಚೆಗೆ ದೊರೆಯುತ್ತಿದೆ.

#6

#6

ಈ ಬೆಲೆಯಲ್ಲಿ ಇಷ್ಟೊಂದು ಅತ್ಯಾಕರ್ಷಕ ವೀಡಿಯೊ ದೊರೆಯುವುದು ತುಂಬಾ ಕಷ್ಟಕರ ಆದರೂ ಎಲುಗಾ ನಿಮಗೆ ಅತ್ಯಾಕರ್ಷಕ ವೀಡಿಯೋವನ್ನು ಈ ಫೋನ್‌ನಲ್ಲಿ ಒದಗಿಸಿಕೊಟ್ಟಿದೆ. ಪ್ಯಾನಸೋನಿಕ ಎಲುಗಾ 13MP ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು LED ಫ್ಲ್ಯಾಶ್ ಫೋನ್‌ನಲ್ಲಿದೆ. ಫೋನ್‌ನ ಮುಂಭಾಗ ಕ್ಯಾಮೆರಾ 2MP ಆಗಿದ್ದು ಎಚ್‌ಡಿಆರ್ ಮೋಡ್‌ಗೂ ಇದು ಬೆಂಬಲ ನೀಡುತ್ತದೆ.

<center><iframe width="100%" height="450" src="//www.youtube.com/embed/AwnkYEgCvOw" frameborder="0" allowfullscreen></iframe></center>

Best Mobiles in India

English summary
This article tells about Panasonic eluga smartphone video review and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+