Subscribe to Gizbot

4000Amh, 5.5 ಇಂಚ್ ಡಿಸ್‌ಪ್ಲೇ ಹೊಂದಿದೆ ಪ್ಯಾನಾಸಾನಿಕ್ ಎಲುಗ!..ಬೆಲೆ ಮಾತ್ರ ಕಮ್ಮಿ!!

Written By:

ಎಲೆಕ್ಟ್ರಾನಿಕ್ ಉತ್ಪನ್ನಗಳ ಬಹುದೊಡ್ಡ ಸಂಸ್ಥೆ ಪ್ಯಾನಾಸಾನಿಕ್ ಭಾರತದಲ್ಲಿ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಷ್ಟೇನು ಹೆಸರು ಮಾಡದ ಪ್ಯಾನಾಸಾನಿಕ್ ಇದೀಗ ಅತ್ಯದ್ಬುತ ಫೀಚರ್ ಹೊಂದಿರುವ ಪ್ಯಾನಾಸಾನಿಕ್ ಎಲುಗ ಐ3 ಮೆಗಾ ಎಂಬ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ತಂದಿದೆ.!!

ಪ್ಯಾನಾಸಾನಿಕ್ ಎಲುಗ ಐ3 ಮೆಗಾ' ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯಲ್ಲಿಯೇ ಅತ್ಯದ್ಬುತ ಫೀಚರ್‌ಗಳನ್ನು ಹೊಂದಿದ್ದು, 5.5 ಇಂಚಿನ ಹೆಚ್‌ಡಿ ಐಪಿಎಸ್ ಡಿಸ್ಪ್ಲೇ ಮತ್ತು 4000 ಎಎಂಹೆಚ್ ಬ್ಯಾಟರಿಯನ್ನು ಹೊಂದಿದೆ. ಹಾಗಾದರೆ, ಪ್ಯಾನಾಸಾನಿಕ್ ಎಲುಗ ಸ್ಮಾರ್ಟ್‌ಫೋನ್ ಹೇಗಿದೆ? ಬೆಲೆ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚಿನ ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇ!!

5.5 ಇಂಚಿನ ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇ!!

ಇಂದಿನ ಯುವಜನತೆ ಬಹುತೇಕ 5.5 ಇಂಚಿನ ಡಿಸ್‌ಪ್ಲೆ ಆಯ್ಕೆ ಮಾಡುವುದರಿಂದ ಪ್ಯಾನಾಸಾನಿಕ್ ಸಹ ಎಲುಗ ಐ3 ಮೆಗಾ ಸ್ಮಾರ್ಟ್‌ಫೋನ್ ಅನ್ನು 5.5 ಇಂಚಿನಲ್ಲಿ ಹೊರತಂದಿದೆ. ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಮಾಡುವ ಗಟ್ಟಿಮುಟ್ಟಾದ ಸ್ಕ್ರೀನ್ ಇದು ಎಂದು ಪ್ಯಾನಾಸಾನಿಕ್ ಹೆಳಿದೆ.!!

ಪ್ರೊಸೆಸರ್ ಮತ್ತು RAM ಎಷ್ಟು?

ಪ್ರೊಸೆಸರ್ ಮತ್ತು RAM ಎಷ್ಟು?

1.3GHz ಕ್ವಾಡ್ ಕೋರ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 6.0 ಮಾರ್ಷಮಲ್ಲೊ 'ಪ್ಯಾನಾಸಾನಿಕ್ ಎಲುಗ ಐ3 ಮೆಗಾ' ಸ್ಮಾರ್ಟ್‌ಫೋನ್ ಹೊಂದಿರುವ ಅತ್ಯದ್ಬುತ ಫಿಚರ್‌ಗಳಾಗಿವೆ.! 3 ಜಿಬಿ ರ್ಯಾಮ್ ಮತ್ತು 16 ಜಿಬಿ ಸ್ಟೋರೇಜ್ (128 ಜಿಬಿ ಗೆ ವಿಸ್ತರಿಸಬಲ್ಲ) ಅನ್ನು ಸ್ಮಾರ್ಟ್‌ಫೋನ್ ಹೊಂದಿದೆ.!!

ವಿನ್ಯಾಸ ಮತ್ತು ಕ್ಯಾಮೆರಾ ಹೇಗಿದೆ?

ವಿನ್ಯಾಸ ಮತ್ತು ಕ್ಯಾಮೆರಾ ಹೇಗಿದೆ?

ಎಲುಗ ಐ3 ಮೆಗಾ ಸ್ಮಾರ್ಟ್‌ಫೋನ್ ಗಟ್ಟಿಮುಟ್ಟಾದ ಮೆಟಲ್ ಬಾಡಿಯಿಂದ ರೂಪುಗೊಂಡಿದೆ. ಇನ್ನು ಬೆಲೆಗೆ ತಕ್ಕಂತೆ 5 ಎಂಪಿ ಸೆಲ್ಫಿ ಕ್ಯಾಮೆರಾ ಮತ್ತು 13 ಎಂಪಿ ರಿಯರ್ ಕ್ಯಾಮರಾ ಹೊಂದಿದೆ. ಅತ್ಯುತ್ತಮ ಗುಣಮಟ್ಟದ ಫೋಟೊ ತೆಗೆಯಲು ಅತ್ಯಾಧುನಿಕ ಸಾಫ್ಟ್‌ವೇರ್ ಅಳವಡಿಸಿರುವುದಾಗಿ ಪ್ಯಾನಾಸಾನಿಕ್ ಹೆಳಿದೆ.!

ಬೆಲೆ ಎಷ್ಟು?

ಬೆಲೆ ಎಷ್ಟು?

ದೇಶದಾದ್ಯಂತ ಅಧಿಕೃತ ಪ್ಯಾನಾಸಾನಿಕ್ ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಮಾತ್ರ ಈ ಸ್ಮಾರ್ಟ್‌ಫೋನ್ ಲಭ್ಯವಿದ್ದು, ಸ್ಮಾರ್ಟ್‌ಫೋನ್ ಬೆಲೆ ಕೇವಲ 11,490 ರೂಪಾಯಿಗಳಾಗಿದೆ.!! 4 ಜಿ ವೋಲ್ಟೆ, ಡಯಲ್ ಸಿಮ್, ಜಿಪಿಎಸ್ ಸೇರಿದಂತೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಸ್ಯಾಮ್‌ಸಂಗ್ ಹೊಂದಿದೆ.!!

ಓದಿರಿ:ಫೆಸ್‌ಬುಕ್‌ನಲ್ಲಿ ಆಟೋರನ್ ಆಗುವ ವಿಡಿಯೋ ನಿಲ್ಲಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
The Panasonic Eluga I3 Mega is 4G enabled and will be available at all Panasonic authorized dealer outlets.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot