Subscribe to Gizbot

5,299 ರೂ.ಗೆ ಫಿಂಗರ್‌ಪ್ರಿಂಟ್ ಆಯ್ಕೆಯ "ಪ್ಯಾನಾಸೋನಿಕ್ ಪಿ 100" ಸ್ಮಾರ್ಟ್‌ಫೋನ್!!

Written By:

ಭಾರತದಲ್ಲಿ ಬಜೆಟ್ ಫೋನ್‌ಗಳಿಗಿರುವ ಬೇಡಿಕೆಯನ್ನು ನೋಡಿಕೊಂಡು ಪ್ರಖ್ಯಾತ ಎಲೆಕ್ಟ್ರಾನಿಕ್ ಮಾರಾಟಗಾರ ಕಂಪೆನಿ ಪ್ಯಾನಾಸೋನಿಕ್ ಅತ್ಯುತ್ತಮ ಬಜೆಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪ್ಯಾನಾಸೋನಿಕ್ ಇಂಡಿಯಾ ಸಂಸ್ಥೆಯ ಆಕರ್ಷಕ ವಿನ್ಯಾಸದ 'ಪಿ 100' ಹೆಸರಿನ ಹೊಸ ಸ್ಮಾರ್ಟ್‍ಫೋನ್ ಬಿಡುಗಡೆಯಾಗಿದೆ.!!

 5,299 ರೂ.ಗೆ ಫಿಂಗರ್‌ಪ್ರಿಂಟ್ ಆಯ್ಕೆಯ

8MP ಮೆಗಾಪಿಕ್ಸೆಲ್ ಸಾಮರ್ಥ್ಯದ ಮಲ್ಟಿ-ಮೋಡ್ ಹಿಂಬದಿ ಕ್ಯಾಮೆರಾ ಜೊತೆಗೆ ಅತ್ಯುತ್ತಮ ಡ್ಯೂರಾಸ್ಪೀಡ್ ತಂತ್ರಜ್ಞಾನದ ಮೂಲಕ ನೂತನ ಪ್ಯಾನಾಸೋನಿಕ್ 'ಪಿ 100' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕೇವಲ 5,299 ರೂಪಾಯಿಗಳಿಗೆ ಬಿಡುಗಡೆಯಾಗಿದೆ.!! ಹಾಗಾದರೆ, ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಏನು? ಫೋನಿನ ವಿಶೇಷತೆಗಳೇನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಪ್ಯಾನಾಸೋನಿಕ್ ‘ಪಿ 100' ಸ್ಮಾರ್ಟ್‌ಫೋನ್ 5 ಇಂಚಿನ ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಕಾರ್ನಿಂಗ್ ಗೋರಿಲ್ಲ ಗ್ಲಾಸ್‌ನಿಂದ ಪ್ರೊಟೆಕ್ಷನ್ ಹೊಂದಿದ್ದು, ಸ್ಕ್ರಾಚ್ ಮತ್ತು ಇತರೆ ಡ್ಯಾಮೆಜ್‌ ತೊಂದರೆಯಿಂದ ದೂರ ಉಳಿಯಲಿದೆ ಎಂದು ಪ್ಯಾನಾಸೋನಿಕ್ ಕಂಪೆನಿ ತಿಳಿಸಿದೆ.!!

ಪ್ರೊಸೆಸರ್ ಮತ್ತು RAM !!

ಪ್ರೊಸೆಸರ್ ಮತ್ತು RAM !!

1.25GHz ವೇಗದ ಮೀಡಿಯಾ ಟೆಕ್ MT6737 ಕ್ವಾಡ್-ಕೋರ್ ಪ್ರೊಸೆಸರ್ ಹಾಗೂ 1/2 ಜಿಬಿ RAM ಮತ್ತು 16 ಜಿಬಿ ಮೆಮೊರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಸ್ಮಾರ್ಟ್‌ಫೋನ್ ಮೆಮೊರಿಯನ್ನು 128GB ವರೆಗೆ ವಿಸ್ತರಿಸಬಹುದಾದ ಆಯ್ಕೆಯನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಮೊದಲೇ ಹೇಳಿದಂತೆ ಪ್ಯಾನಾಸೋನಿಕ್ ‘ಪಿ 100' ಸ್ಮಾರ್ಟ್‌ಫೋನ್ 8MP ಮೆಗಾಪಿಕ್ಸೆಲ್ ಸಾಮರ್ಥ್ಯದ ಮಲ್ಟಿ-ಮೋಡ್ ರಿಯರ್ ಹಾಗೂ 5MP ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ. ಕ್ಯಾಮೆರಾಗೆ ಬಳಸಿಕೊಂಡಿರುವ ತಂತ್ರಜ್ಞಾನವೂ ಉತ್ತಮವಾಗಿದ್ದು, ಫೋನಿನಲ್ಲಿ ಅತ್ಯುತ್ತಮ ಚಿತ್ರಗಳನ್ನು ತೆಗೆಯಬಹುದು.!!

ಡ್ಯೂರಾಸ್ಪೀಡ್ ತಂತ್ರಜ್ಞಾನ!!

ಡ್ಯೂರಾಸ್ಪೀಡ್ ತಂತ್ರಜ್ಞಾನ!!

ಪ್ಯಾನಾಸೋನಿಕ್ ‘ಪಿ 100' ಸ್ಮಾರ್ಟ್‌ಫೋನ್ ಡ್ಯೂರಾಸ್ಪೀಡ್ ತಂತ್ರಜ್ಞಾನ ಹೊಂದಿರುವುದರಿಂದ ಬಳಕೆ ಮಾಡದ ಆಪ್‌ಗಳಿಂದ ಬ್ಯಾಟರಿ ಮತ್ತು ಡೇಟಾ ಉಳಿತಾಯ ಮಾಡಲಿದೆ. ಇದರಿಂದ ಗ್ರಾಹಕರು ಹಿಂಬದಿಯಲ್ಲಿ ಡೇಡಾ ವೇಸ್ಟ್ ಆಗುವುದನ್ನು ತಡೆಯುವುದರ ಜತೆಗೆ ಬ್ಯಾಟರಿಯ ಅತ್ಯುತ್ತಮ ಅನುಭವವನ್ನು ಪಡೆಯಬಹುದಾಗಿದೆ.!!

ಇತರೆ ಫೀಚರ್ಸ್ ಏನಿವೆ?

ಇತರೆ ಫೀಚರ್ಸ್ ಏನಿವೆ?

2200mAh ಬ್ಯಾಟರಿ, ಫಿಂಗರ್‌ಪ್ರಿಂಟ್ ಆಯ್ಕೆ, ಒಟಿಜಿ ಸಪೋರ್ಟ್, ಆಂಡ್ರಾಯ್ಡ್ ನೌಗಾಟ್ ನಂತಹ ಫೀಚರ್‌ಗಳನ್ನು ಪ್ಯಾನಾಸೋನಿಕ್ ‘ಪಿ 100' ಸ್ಮಾರ್ಟ್‌ಫೋನ್ ಒಳಗೊಂಡಿದೆ. ಹಾಗಾಗಿ, ಒಂದು ಬಜೆಟ್ ಸ್ಮಾರ್ಟ್‌ಫೋನಿನಲ್ಲಿರಬೇಕಾದ ಎಲ್ಲಾ ಫೀಚರ್ಸ್ ಸ್ಮಾರ್ಟ್‌ಫೋನಿನಲ್ಲಿದೆ ಎಂದು ಹೇಳಬಹುದು.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
'ಗೋಲ್ಡ್ ಉತ್ಸವ್’!!

'ಗೋಲ್ಡ್ ಉತ್ಸವ್’!!

ಫ್ಲಿಪ್‍ಕಾರ್ಟ್‍ ಮತ್ತು ಪ್ಯಾನಾಸೋನಿಕ್ ಮಳಿಗೆಗಳಲ್ಲಿ ಮಾರಾಟಕ್ಕಿರುವ 'ಪ್ಯಾನಾಸೋನಿಕ್ ಪಿ 100' ಸ್ಮಾರ್ಟ್‌ಫೋನ್ ಖರೀದಿಗೆ ಪ್ಯಾನಾಸೋನಿಕ್ ಸಂಸ್ಥೆಯು `ಗೋಲ್ಡ್ ಉತ್ಸವ್'ಕೊಡುಗೆ ನೀಡಿದೆ. ಅದೃಷ್ಟಶಾಲಿ ಗ್ರಾಹಕರು ಈ ಫೋನ್ ಖರೀದಿಸುವಾಗ ವಿಶೇಷ ಉಡುಗೊರೆ ರೂಪದಲ್ಲಿ 10 ಗ್ರಾಂ ಚಿನ್ನ ಗೆಲ್ಲುವ ಅವಕಾಶವಿದೆ' ಎಂದು ತಿಳಿಸಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Panasonic launched a new budget smartphone in the Indian market, the Panasonic P100 which is priced at Rs. 5,299 for 1GB variant.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot