ರೂ.5599ಕ್ಕೆ ಬಜೆಟ್ ಸ್ಮಾರ್ಟ್ ಫೋನ್: ಬೆಸ್ಟ್ ಅಲ್ಲವಾದರೂ ಉತ್ತಮ ಫೋನ್..!

|

ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳ ಹಾವಳಿಯೂ ಹೆಚ್ಚಾಗಿದ್ದು, ಇದೇ ಮಾದರಿಯಲ್ಲಿ ಮತ್ತೊಂದು ಬಜೆಟ್ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಪ್ರವೇಶಿಸುವ ಸನಿಹದಲ್ಲಿದೆ. ಈಗಾಗಲೇ ಹಲವು ಬಜೆಟ್ ಸ್ಮಾರ್ಟ್ ಪೋನ್ ಗಳನ್ನು ಲಾಂಚ್ ಮಾಡಿರುವ ಪ್ಯಾನಾಸೋನಿಕ್ ಕಂಪನಿಯೂ ಪ್ಯಾನಸೋನಿಕ್ P90 ಹೆಸರಿನ ಸ್ಮಾರ್ಟ್ ಫೋನ್ ವೊಂದನ್ನು ರೂ.5599ಕ್ಕೆ ಲಾಂಚ್ ಮಾಡಿದೆ.

ರೂ.5599ಕ್ಕೆ ಬಜೆಟ್ ಸ್ಮಾರ್ಟ್ ಫೋನ್: ಬೆಸ್ಟ್ ಅಲ್ಲವಾದರೂ ಉತ್ತಮ ಫೋನ್..!

ಜೂನ್ 20 ರಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಸ್ಮಾರ್ಟ್ ಫೋನ್ ಹೆಚ್ಚಿನ ಬಳಕೆದಾರರನ್ನು ಸೆಳೆಯಲಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಇದು ಸೆಡ್ಡು ಹೊಡೆಯಲಿದೆ ಎನ್ನುವ ಮಾಹಿತಿಯೂ ಮಾರುಕಟ್ಟೆ ತಜ್ಞರಿಂದ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಮುಂದಿನಂತಿದೆ.

ಡಿಸ್ ಪ್ಲೇ

ಡಿಸ್ ಪ್ಲೇ

ಪ್ಯಾನಸೋನಿಕ್ P90 ಸ್ಮಾರ್ಟ್ ಫೋನಿನಲ್ಲಿ 5 ಇಂಚಿನ LCD ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು 16:9 ಅನುಪಾತದಿಂದ ಕೂಡಿದೆ. ಇದಲ್ಲದೇ ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಈ ಸ್ಮಾರ್ಟ್ ಫೋನಿನಲ್ಲಿ ನೀಡಲಾಗಿದೆ. ಇದಲ್ಲದೇ ವೀಡಿಯೋ ನೋಡಲು ಉತ್ತಮವಾಗಿದೆ.

RAM ಮತ್ತು ROM

RAM ಮತ್ತು ROM

ಪ್ಯಾನಸೋನಿಕ್ P90 ಸ್ಮಾರ್ಟ್ ಫೋನಿನಲ್ಲಿ 1 GB RAM ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 16 GB ಇಂಟರ್ನಲ್ ಮೆಮೊರಿಯನ್ನು ಸಹ ನೀಡಲಾಗಿದೆ. ಅಲ್ಲದೇ 128 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಈ ಸ್ಮಾರ್ಟ್ ಫೋನಿನಲ್ಲಿ ನೋಡಬಹುದು.

ಪ್ರೋಸೆಸರ್

ಪ್ರೋಸೆಸರ್

ಪ್ಯಾನಸೋನಿಕ್ P90 ಸ್ಮಾರ್ಟ್ ಫೋನಿನಲ್ಲಿ 1.5GHz ವೇಗದ ಮೀಡಿಯಾ ಟೆಕ್ MT6737 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದು ವೇಗದ ಪ್ರೋಸೆಸರ್ ಅಲ್ಲದಿದ್ದರೂ ಸಾಮಾನ್ಯ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಡ್ಯುಯಲ್ ಸಿಮ್ ಸ್ಲಾಟ್ ಅನ್ನು ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಪ್ಯಾನಸೋನಿಕ್ P90 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 5 MP ಮೊನೊ ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿಯೂ ಸಹ 5 MP ಮೋನೊ ಕ್ಯಾಮೆರಾವನ್ನು ಅಳವಡಲಾಗಿದೆ. ಇದಲ್ಲದೇ 2400mAh ಬ್ಯಾಟರಿಯನ್ನು ಸಹ ಕಾಣಬಹುದಾಗಿದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ಪ್ಯಾನಸೋನಿಕ್ P90 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ನ್ಯಾಗಾ 7.1.2 ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಕಾಸ್ಟಮ್ UI ಅನ್ನು ನೀಡಲಾಗಿದ್ದು, ಇದು ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ.

Best Mobiles in India

English summary
Panasonic P90 with a 5 inch display launched in india. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X