Home
ಮೊಬೈಲ್

'ಪ್ಯಾನಸೋನಿಕ್ ಪಿ9' ಬಿಡುಗಡೆ!..ಕೇವಲ 3,999 ರೂ.ಗಳಿಗೆ ಖರೀದಿಸಿ 4G ಸ್ಮಾರ್ಟ್‌ಫೋನ್!!

By Bhaskar N J

ಭಾರತದ ಮೊಬೈಲ್ ಮಾರುಕಟ್ಟೆಯ ಮೇಲೆ ದೃಷ್ಟಿನೆಟ್ಟಿರುವ ಪ್ರಖ್ಯಾತ ಎಲೆಕ್ಟ್ರಾನಿಕ್ಸ್ ದೈತ್ಯ ಸಂಸ್ಥೆ ಪ್ಯಾನಸೋನಿಕ್ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಈಗಾಗಲೇ ತನ್ನ ಛಾಪನ್ನು ಒತ್ತಿದೆ. ಬಜೆಟ್ ಸ್ಮಾರ್ಟ್‌ಫೋನ್ ಪ್ರಿಯ ಭಾರತೀಯರಿಗೆ ಇಷ್ಟವಾಗುವಂತಹ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಕಳೆದ ಎರಡು ತಿಂಗಳಿನಲ್ಲಿ 4 ಕ್ಕೂ ಅಧಿಕ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದ್ದ ಪ್ಯಾನಸೋನಿಕ್ ಕಂಪೆನಿ ಇದೀಗ 'ಪ್ಯಾನಸೋನಿಕ್ ಪಿ95' ಹೆಸರಿನಲ್ಲಿ ಭಾರತದಲ್ಲಿ ಅತಿ ನೂತನ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಉತ್ತಮ ಎನ್ನಬಹುದಾದ ಈ ಸ್ಮಾರ್ಟ್‌ಫೋನಿನ ಪ್ರಸ್ತುತ ಬೆಲೆ ಕೇವಲ 3,999 ರೂಪಾಯಿಗಳಾಗಿವೆ.

'ಪ್ಯಾನಸೋನಿಕ್ ಪಿ9' ಬಿಡುಗಡೆ!..ಕೇವಲ 3,999 ರೂ.ಗಳಿಗೆ ಖರೀದಿಸಿ 4G ಫೋನ್!!

1.3GHz ಕ್ವಾಡ್-ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ ಪ್ರೊಸೆಸರ್, 1000 ರೂ.ಗಳ ಫ್ಲಿಪ್‌ಕಾರ್ಟ್ ಆಫರ್ ಎಲ್ಲವನ್ನೂ ಹೊಂದಿರುವ ಈ ಫೋನ್ ಮಾರಾಟ ಈಗಾಗಲೇ ಶುರುವಾಗಿದೆ. ಹಾಗಾದರೆ, ಪ್ಯಾನಸೋನಿಕ್ ಪಿ95 ಬಜೆಟ್ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಯಾವುವು? ಖರೀದಿಸಲು ಯೋಗ್ಯ ಫೋನ್ ಇದುವೆ ಎಂಬುದನ್ನು ಮುಂದೆ ತಿಳಿಯಿರಿ.

ಫ್ಲಿಫ್‌ಕಾರ್ಟ್ ಎಕ್ಸ್‌ಕ್ಲೂಸಿವ್

ಫ್ಲಿಫ್‌ಕಾರ್ಟ್ ಎಕ್ಸ್‌ಕ್ಲೂಸಿವ್

ಬ್ಲೂ, ಗೋಲ್ಡ್ ಮತ್ತು ಡಾರ್ಕ್ ಗ್ರೇ ಬಣ್ಣಗಳಲ್ಲಿ ಬಿಡುಗಡೆಯಾಗಿರುವ ಪ್ಯಾನಸೋನಿಕ್ ಪಿ95' ಸ್ಮಾರ್ಟ್‌ಫೋನಿನ ಬಿಡುಗಡೆ ಬೆಲೆ 4,999 ರೂಪಾಯಿಗಳಾಗಿವೆ. ಆದರೆ, ಫಿಫ್‌ಕಾರ್ಟ್ ಬಿಗ್ ಶಾಂಪಿಂಗ್ ಡೇಯ್ಸ್ ಸೇಲ್‌ನಲ್ಲಿ (ಮೇ 13ರಿಂದ 16ರ ವರೆಗೆ) 1000 ರೂ.ಗಳ ಆಫರ್ ಲಭಗಯವಿದ್ದು, ಫೋನ್ ಅನ್ನು 3,999 ರೂ.ಗಳಿಗೆ ಖರೀದಿಸಬಹುದು.

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

5 ಇಂಚುಗಳ ಐಪಿಎಸ್ ಎಲ್‌ಸಿಡಿ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ ಪ್ಯಾನಸೋನಿಕ್ ಪಿ95 ಬಜೆಟ್ ಸ್ಮಾರ್ಟ್‌ಫೋನ್ ಸಾಮಾನ್ಯ ಫೋನುಗಳು ಎನಿಸುವಂತಹ ವಿನ್ಯಾಸವನ್ನು ಹೊಂದಿದೆ. ಪ್ರೊಟೆಕ್ಟಿವ್ ಸ್ಕ್ರೀನ್ ಗಾರ್ಡ್,ಪ್ರೊಟೆಕ್ಟಿವ್ ಕೇಸ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ವಿನ್ಯಾಸ ಬೆಲೆಗೆ ತಕ್ಕಂತೆ ಇದೆ ಎನ್ನಬಹುದು.

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಪ್ಯಾನಸೋನಿಕ್ ಪಿ95 ಸ್ಮಾರ್ಟ್‌ಫೋನ್ 1.3GHz ಕ್ವಾಡ್-ಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ MSM8909 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. 1GB RAM ಮತ್ತು 16GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಈ ಸ್ಮಾರ್ಟ್‌ಫೋನಿನ ಮೆಮೊರಿಯನ್ನು ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ 128GB ವರೆಗೂ ವರ್ಧಿಸಬಹುದು.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

8MP ರಿಯರ್ ಕ್ಯಾಮೆರಾ ಎಲ್ಇಡಿ ಫ್ಲ್ಯಾಶ್, 4 ಪಿ ಎಲಿಮೆಂಟ್ ಲೆನ್ಸ್, ಎಫ್ 2.0, ಆಟೋ ಫೋಕಸ್, ಪನೋರಮಾ, ಹೆಚ್ಡಿಆರ್, ಫೇಸ್ ಡಿಟೆಕ್ಷನ್, ಫಿಲ್ಟರ್, ಸೀನ್ ಮೋಡ್ ತಂತ್ರಜ್ಞಾನಗಳನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇನ್ನು 5MP ಸೆಲ್ಫಿ ಕ್ಯಾಮೆರಾ ಫೇಸ್‌ ಡಿಟೆಕ್ಷನ್ ತಂತ್ರಜ್ಞಾನದಿಂದ ಬಂದಿದೆ.

How to send WhatsApp Payments invitation to others - GIZBOT KANNADA
ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಡ್ಯುಯಲ್ ಸಿಮ್, 4G ವೋಲ್ಟ್, ಆಂಡ್ರಾಯ್ಡ್ 7.1.2 ನೌಗಾಟ್ ಓಪರೇಟಿಂಗ್ ಸಿಸ್ಟಂ, 2300 mAh ಲೀ ಪಾಲಿಮರ್ ಬ್ಯಾಟರಿ, ಬ್ಲೂಟೂತ್ 4.1, ಮೈಕ್ರೊ USB 2.0 ಫೀಚರ್ಸ್‌ಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ. ಚಾರ್ಜರ್, ಯುಎಸ್‌ಬಿ ಕೇಬಲ್, ಪ್ರೊಟೆಕ್ಟಿವ್ ಸ್ಕ್ರೀನ್ ಗಾರ್ಡ್, ಸಿಮ್ ಟೂಲಿಂಗ್ ಪಿನ್ ಆಕ್ಸೆಸರಿಸ್‌ಗಳು ಪೋನಿನ ಜೊತೆಯಲ್ಲಿ ಸಿಗಲಿವೆ.

Best Mobiles in India

English summary
It’s got the look, and it definitely has the features which ensure its smooth functionality - the Panasonic P95 is a smartphone which has a lot to offer.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+