Home
ಮೊಬೈಲ್

ಒಂದು ಸೆಕೆಂಡ್ ಗೆ ಒಂದು ಪೈಸೆ ಪ್ಲಾನ್:ಟ್ರಾಯ್

By Varun
ಒಂದು ಸೆಕೆಂಡ್ ಗೆ ಒಂದು ಪೈಸೆ ಪ್ಲಾನ್:ಟ್ರಾಯ್

ಟಾಟಾ ಡೋಕೊಮೋ ದ ಜಾಹೀರಾತನ್ನು ನೀವು ನೋಡಿರಬಹುದು. ವಯಸ್ಸಾದ ರಣಬೀರ್ ಕಪೂರ್ ನ ಹೋಟೆಲಿಗೆ ಒಬ್ಬ ಗ್ರಾಹಕ ಯಾವುದೋ ತಿನ್ನುವ ಐಟಂ ಬಗ್ಗೆ ಕೇಳುತ್ತಾನೆ. ಅದಕ್ಕೆ ರಣಬೀರ್, 2 ಕೊಡಕ್ಕೆ ಆಗಲ್ಲ ಪ್ಲೇಟ್ ಗೆ 3 ಬರೋದು ಅದೇ ತಿನ್ನು ಎನ್ನುತ್ತಾನೆ. ಇದನ್ನು ಕೇಳಿ ಕಕ್ಕಾಬಿಕ್ಕಿಯಾದ ಗ್ರಾಹಕ ಅವನನ್ನೇ ನೋಡುತ್ತಾ ಬಿಲ್ ಕೊಡೋದು 2 ಕ್ಕೆ ತಾನೇ ಎಂದು ಕೇಳುತ್ತಾನೆ. ಕೇಳಿಯೂ ಕೇಳಿಸಿಕೊಳ್ಳದ ಹಾಗೇ ರಣಬೀರ್ ನಡೆದುಕೊಂಡು ಹೋಗುತ್ತಾನೆ. ಇದೇ ರೀತಿ ಆಗಿದೆ ಮೊಬೈಲ್ ಬಳಕೆದಾರರ ಪರಿಸ್ಥಿತಿ.

ನಾವು ಕೇಳುವ ಪ್ಲಾನ್ ಕೊಡುವದನ್ನು ಬಿಟ್ಟು ಇಷ್ಟ ಬಂದ ಟಾರಿಫ್ ಇರುವ ಪ್ಲಾನ್ ಅನ್ನೇ ಕೊಡುತ್ತವೆ ನಮಗೆ ಮೊಬೈಲ್ ಸೇವೆ ಕೊಡುವ ಕಂಪನಿಗಳು. ಇದಕ್ಕೆಲ್ಲಾ ತೆರೆ ಎಳೆಯಲು ನಿರ್ಧರಿಸಿರುವ ಟ್ರಾಯ್, ಮೊಬೈಲ್ ಸೇವೆ ನೀಡುವ ಕಂಪನಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದ್ದು, ನೀವು ಯಾವುದಾದರೂ ಪ್ಲಾನ್ ಅನ್ನು ಕೊಡಿ, ಆದರ ಜೊತೆ "ಸೆಕೆಂಡ್ ಪಲ್ಸ್" ಇರುವಒಂದು ಪ್ಲಾನ್ ಅನ್ನು ಗ್ರಾಹಕರಿಗೆ ಕಡ್ಡಾಯವಾಗಿ ಕೊಡಲೇಬೇಕು ಎಂದು ಆದೇಶಿಸಿದೆ.

ಪೇ ಪರ್ ಸೆಕಂಡ್ ಪ್ಲಾನ್ ನ ಈ ಆದೇಶ, ಹಗಲು ದರೋಡೆ ನಡೆಸುತ್ತಿದ್ದ ಕಂಪನಿಗಳಿಗೆ ಚಾಟಿ ಏಟು ಕೊಟ್ಟಂತಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+