Subscribe to Gizbot

ಫಿಲಿಪ್ಸ್ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯ ಉತ್ತಮ ಉತ್ಪನ್ನ

Written By:

ಮೈಕ್ರೋಮ್ಯಾಕ್ಸ್, ಕಾರ್ಬನ್ ಅಥವಾ ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ಹೆಚ್ಚು ಮುಂಚೂಣಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳಾಗಿವೆ. ಇನ್ನು ಇದೇ ಸಾಲಿನಲ್ಲಿ ಸ್ಪರ್ಧೆಗೆ ಅಣಿಯಾಗುತ್ತಿರುವ ಇನ್ನೊಂದು ಡಿವೈಸ್ ಆಗಿ ಫಿಲಿಪ್ಸ್ ಅನ್ನು ನಾವು ಪಟ್ಟಿ ಮಾಡಬಹುದಾಗಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಈ ಹ್ಯಾಂಡ್‌ಸೆಟ್ W6610, S308 ಮತ್ತು W3500 ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಇದಕ್ಕೆ ಸೇರ್ಪಡೆಯಾಗಿ ಫಿಲಿಪ್ಸ್ ಇನ್ನೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಇದರ ಹೆಸರು E130 ಆಗಿದೆ. ಮಧ್ಯಮ ಶ್ರೇಣಿಯ ಫೋನ್ ಆಗಿ ಮಿಂಚಿರುವ ಇದರ ಬೆಲೆ ರೂ 8,290 ರಿಂದ ಪ್ರಾರಂಭವಾಗುತ್ತಿದೆ ಮತ್ತು ಫಿಲಿಪ್ಸ್‌ನ ಇತರೆ ಫೋನ್ 1,960 ರ ಅಂದಾಜಿನಲ್ಲಿ ಕೂಡ ಲಭ್ಯವಿದೆ.

ಕಡಿಮೆ ಬೆಲೆಯ ಉತ್ತಮ ಉತ್ಪನ್ನ ಫಿಲಿಪ್ಸ್ ಫೋನ್ಸ್

ಫಿಲಿಪ್ಸ್ W6610 ವಿಶೇಷತೆಗಳು
W6610 ಹ್ಯಾಂಡ್‌ಸೆಟ್ 5 ಇಂಚಿನ qHD (960×540 pixels) ಡಿಸ್‌ಪ್ಲೇಯನ್ನು ಹೊಂದಿದ್ದು, 1.3GHz ಮೀಡಿಯಾ ಟೆಕ್ ಕ್ವಾಡ್ ಕೋರ್ ಚಿಪ್‌ಸೆಟ್ ಜೊತೆಗೆ 1 ಜಿಬಿ RAM ಅನ್ನು ಹೊಂದಿದೆ. ಫೋನ್ 4 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ. ಇನ್ನು ಫೋನ್‌ನ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಆಗಿದೆ. ಬ್ಯಾಟರಿ 5,300mAh ಆಗಿದ್ದು ಇದು 32 ಗಂಟೆಗಳ ಟಾಕ್ ಟೈಮ್ ಅನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.

ಆಂಡ್ರಾಯ್ಡ್ ಜೆಲ್ಲಿಬೀನ್ 4.2 ಓಎಸ್ ಚಾಲನೆಯಾಗುತ್ತಿದ್ದು ಇದು 3 ಜಿ ನೆಟ್‌ವರ್ಕ್, ಡ್ಯುಯಲ್ ಸಿಮ್, ವೈಫೈ, ಬ್ಲ್ಯೂಟೂತ್ ಅನ್ನು ಬೆಂಬಲಿಸುತ್ತಿದೆ. ಫೋನ್ ಕುರಿತ ಸುಂದರ ವೀಡಿಯೊವನ್ನು ನಾವು ಓದುಗರಿಗಾಗಿ ಲಗತ್ತಿಸಿದ್ದು ಫೋನ್ ಕುರಿತ ವಿವರ ಮಾಹಿತಿಯನ್ನು ಇದು ನೀಡಲಿದೆ.

ಫಿಲಿಪ್ಸ್ W3500 ವಿಶೇಷತೆ
5 ಇಂಚಿನ FWVGA ಡಿಸ್‌ಪ್ಲೇ, 1.3GHz ಕ್ವಾಡ್ ಕೋರ್ ಇದರಲ್ಲಿದೆ 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಇದರಲ್ಲಿದೆ. ಫೋನ್ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಅನ್ನು ಬೆಂಬಲಿಸುತ್ತಿದ್ದು ಫೋನ್ ಬೆಲೆ ರೂ 16,195 ಆಗಿದೆ.

<center><iframe width="100%" height="360" src="//www.youtube.com/embed/odyy0C1v9hc" frameborder="0" allowfullscreen></iframe></center>

English summary
This article tells about philips s308 w3500 w6610 smartphones officially launched india.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot