ಸ್ಪರ್ಧೆಯಲ್ಲಿದೆ ಫಿಲಿಪ್ಸ್ ನ ನೂತನ ಸ್ಮಾರ್ಟ್ ಫೋನ್

ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಯಲ್ಲಿ ಮುಂದಿರುವ ಫಿಲಿಪ್ಸ್ ಇದೀಗ ತನ್ನ ಮೊಬೈಲ್ ಮಾರುಕಟ್ಟೆಯನ್ನು ವಿಸ್ತಾರಗೊಳಿಸುವತ್ತ ಚಿಂತನೆ ನಡೆಸುತ್ತಿದೆ. ಫಿಲಿಪ್ಸ್ ಇತ್ತೀಚೆಗಷ್ಟೆ W920 ಸ್ಮಾರ್ಟ್ ಫೋನನ್ನು ಬಿಡುಗಡೆಗೊಳಿಸಿದೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್ ಫೋನ್ ಗಳಲ್ಲಿ ಒಂದಾಗಿರುವ ಈ ಮೊಬೈಲ್ ಗೆ ಭಾರೀ ಸ್ಪರ್ಧೆಯೂ ಇದೆ.
ಕ್ಯಾಂಡಿ ಬಾರ್ ವಿನ್ಯಾಸದಲ್ಲಿ ಮೂಡಿಬಂದಿರುವ ಈ ಮೊಬೈಲ್ ಆಂಡ್ರಾಯ್ಡ್ 2.2 ಫ್ರೋಯೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಕಪ್ಪು ಮತ್ತು ಚಿನ್ನದ ಬಣ್ಣದ ಮಿಶ್ರಣದಲ್ಲಿ ಹೊರಬಂದಿರುವ ಈ ಮೊಬೈಲ್ ಅತ್ಯಾಕರ್ಷಕವಾಗಿದ್ದು, ಗ್ರಾಹಕರ ಅನುಕೂಲಕ್ಕೆಂದು 3ಜಿ ಸಂಪರ್ಕವನ್ನೂ ಹೊಂದಿದೆ.
ಫಿಲಿಪ್ಸ್ W920 ಮೊಬೈಲ್ ವಿಶೇಷತೆ:
* 4.3 ಇಂಚಿನ ಡಿಸ್ಪ್ಲೇ, 800 x 480 ಪಿಕ್ಸಲ್ ರೆಸೊಲ್ಯೂಷನ್
* 262 K ಬಣ್ಣ ಬೆಂಬಲಿತ TFT ಟಚ್ ಸ್ಕ್ರೀನ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* ಆಟೊ ಫೋಕಸ್, LED ಫ್ಲಾಶ್
* 3ಜಿ ಸಂಪರ್ಕ
* ಬ್ಲೂಟೂಥ್, ವೈ-ಫೈ ಸಂಪರ್ಕ, GPS
* 512 ಎಂಬಿ RAM
ಫಿಲಿಪ್ಸ್ W 920 ಮೊಬೈಲ್ ನ ದರ ಭಾರತದಲ್ಲಿ ಎಷ್ಟಿರಬಹುದೆಂಬ ಕುರಿತು ಮಾಹಿತಿ ಇಲ್ಲ. ಆದರೆ ಕೈಗೆಟುಕುವ ದರದಲ್ಲೇ ಲಭ್ಯವಿರುವುದೆಂದು ತಿಳಿದುಬಂದಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications