ಫಿಲಿಪ್ಸ್ ನಿಂದ ಬಂದಿದೆ ಡ್ಯೂಯಲ್ ಸಿಮ್ ಆಂಡ್ರಾಯ್ಡ್ ಫೋನ್

ಇದು ಆಂಡ್ರಾಯ್ಡ್ ಜಮಾನ. ಆದ್ದರಿಂದ ಫಿಲಿಪ್ಸ್ ಕೂಡ ತನ್ನ ವಿನೂತನ ಆಂಡ್ರಾಯ್ಡ್ ಮೊಬೈಲನ್ನು ಹೊರತಂದಿದೆ. ಇತ್ತೀಚಿಗಷ್ಟೆ ಕಂಪನಿ ಫಿಲಿಪ್ಸ್ W626 ಎಂಬ ಮೊಬೈಲನ್ನು ಬಿಡುಗಡೆಗೊಳಿಸಿದೆ.
ಪೂರ್ಣ ಟಚ್ ಸ್ಕ್ರೀನ್ ಮೊಬೈಲ್ ಇದಾಗಿದ್ದು, ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಡ್ಯೂಯಲ್ ಸಿಮ್ ಆಯ್ಕೆ ಇದರಲ್ಲಿರುವುದು ವಿಶೇಷವಾಗಿದೆ.
ಫಿಲಿಪ್ಸ್ W626 ಮೊಬೈಲ್ ವಿಶೇಷತೆ:
* 116 ಎಂಎಂ x 62 ಎಂಎಂ x 14.3 ಎಂಎಂ ಸುತ್ತಳತೆ
* 102 ಗ್ರಾಂ ತೂಕ
* 256 K ಬೆಂಬಲಿತ TFT ಟಚ್ ಸ್ಕ್ರೀನ್
* 3.5 ಇಂಚಿನ ಡಿಸ್ಪ್ಲೇ, 320 x 480 ಪಿಕ್ಸಲ್ ರೆಸೊಲ್ಯೂಷನ್
* ಮಲ್ಟಿ ಟಚ್ ಸೌಲಭ್ಯ
* 3.5 ಎಂಎಂ ಆಡಿಯೋ ಜ್ಯಾಕ್
* 180 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ
* 256 ಎಂಬಿ RAM
* 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊSD ಕಾರ್ಡ್ ಸ್ಲಾಟ್
* GPRS ಮತ್ತು EDGE
* ವೈ-ಫೈ ಹಾಟ್ ಸ್ಪಾಟ್
* A2Dp ಜೊತೆ ಬ್ಲೂಟೂಥ್, USB 2.0
* 3.15 ಮೆಗಾ ಪಿಕ್ಸಲ್ ಕ್ಯಾಮೆರಾ, ಸೆಕಂಡರಿ ಕ್ಯಾಮೆರಾ
* ಆಟೊ ಫೋಕಸ್ ಮತ್ತು LED ಫ್ಲಾಶ್
* HTML ಬ್ರೌಸರ್, GOS ಜೊತೆ A-GPS ಬೆಂಬಲಿತ
* ಜಾವಾ ಬೆಂಬಲಿತ
* ಮಲ್ಟಿ ಮೀಡಿಯಾ ಪ್ಲೇಯರ್
1530 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 437 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 2ಜಿನಲ್ಲಿ 10 ಗಂಟೆ 10 ನಿಮಿಷ ಟಾಕ್ ಟೈಂ ಮತ್ತು 3ಜಿನಲ್ಲಿ 8 ಗಂಟೆ 30 ನಿಮಿಷ ಟಾಕ್ ಟೈಂ ನೀಡುತ್ತದೆ.
ಭಾರತದಲ್ಲಿ ಈ ಫಿಲಿಪ್ಸ್ W626 ಮೊಬೈಲ್ ಬೆಲೆಯ ಬಗ್ಗೆ ಮಾಹಿತಿ ಇಲ್ಲ. ಆದರೆ ಮಧ್ಯಮ ವರ್ಗದ ಮೊಬೈಲ್ ಗಳಷ್ಟೇ ಬೆಲೆಯನ್ನು ಇದು ಹೊಂದಿರುತ್ತದೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications








