ಫಿಲಿಪ್ಸ್ ನೀಡುತ್ತಿದೆ ಫುಲ್ ಟಚ್ ಸ್ಮಾರ್ಟ್ ಫೋನ್

Posted By: Staff
ಫಿಲಿಪ್ಸ್ ನೀಡುತ್ತಿದೆ ಫುಲ್ ಟಚ್ ಸ್ಮಾರ್ಟ್ ಫೋನ್

 

ಪ್ರತಿಷ್ಟಿತ ಫಿಲಿಪ್ಸ್ ಕಂಪನಿ ಇದೀಗ ನೂತನ ಮೊಬೈಲನ್ನು ಹೊರತರುವ ಯೋಜನೆಯಲ್ಲಿದೆ. ಬಾರ್ ಫೋನ್ ವಿನ್ಯಾಸದಲ್ಲಿರುವ ಫಿಲಿಪ್ಸ್ X622 ಮೊಬೈಲ್ ಕಪ್ಪು ಬಣ್ಣದ ಫಿನಿಶಿಂಗ್ ನಿಂದ ಒಳ್ಳೆ ಲುಕ್ ಪಡೆದುಕೊಂಡಿದೆ. GSM ಬೆಂಬಲಿತವಾಗಿರುವ ಈ ಹ್ಯಾಂಡ್ ಸೆಟ್ GSM 900/1800/1900 ಫ್ರಿಕ್ವೆನ್ಸಿ ಬೆಂಬಲಿಸುತ್ತದೆ.

ಫಿಲಿಪ್ಸ್ X622 ಮೊಬೈಲ್ ವಿಶೇಷತೆ:

* ಡ್ಯೂಯಲ್ ಸಿಮ್ ಮೊಬೈಲ್

* 114.5 ಎಂಎಂ x 57.5 ಎಂಎಂ x 14.5 ಎಂಎಂ ಸುತ್ತಳತೆ

* 158.8 ಗ್ರಾಂ ತೂಕ

* 3.2 ಇಂಚಿನ ಅಮೊಲೆಡ್ ಡಿಸ್ಪ್ಲೇ

* TFT ಟಚ್ ಸ್ಕ್ರೀನ್, 320x480 ಪಿಕ್ಸಲ್ ರೆಸೊಲ್ಯೂಷನ್, 180ppi ಡೆನ್ಸಿಟಿ

* 2, 56,000 ಬಣ್ಣ ಬೆಂಬಲಿತ ಸ್ಕ್ರೀನ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್, LED ಫ್ಲಾಶ್

* 44 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್

* GPRS, ವೈ-ಫೈ 802.11 b/g, EDGE, 2.1 ಬ್ಲೂಟೂಥ್, A2DP

* USB 2.0

ಜಿಪಿಆರ್ ಎಸ್ ಜೊತೆ ಕ್ಲಾಸ್ 12 ಆಯಾಮವು 32-48 kbps ವೇಗವನ್ನು ನೀಡುತ್ತದೆ. ಈ ಮೊಬೈಲಿನಲ್ಲಿ ಮನರಂಜನೆಗೆಂದು ಎಫ್. ಎಂ, ಮೀಡಿಯಾ ಪ್ಲೇಯರ್ ಮತ್ತು ಜಾವಾ ಗೇಮ್ ಗಳನ್ನು ನೀಡಲಾಗಿದೆ.

Li-ion 2100mAh ಬ್ಯಾಟರಿ ಹೊಂದಿರುವ ಈ ಮೊಬೈಲಿಂದ 1800 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 20 ಗಂಟೆ ಟಾಕ್ ಟೈಂ ಪಡೆಯಬಹುದು. ಆದರೆ ಫಿಲಿಪ್ಸ್ X622 ಮೊಬೈಲ್ ಬೆಲೆಯನ್ನು ಇನ್ನೂ ಘೋಷಿಸಿಲ್ಲ.

Please Wait while comments are loading...
Opinion Poll

Social Counting