Home
ಮೊಬೈಲ್

ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್‌ ಲೀಕ್ ಆಯ್ತು..! ಆಪಲ್-ಸ್ಯಾಮ್‌ಸಂಗ್‌ಗೆ ನಡುಕ ಶುರು..!

By Srinidhi

ಈಗಾಗಲೇ ಭಾರತೀಯ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್, ಆಪಲ್‌ ಮತ್ತು ಸ್ಯಾಮ್‌ಸಂಗ್ ಸೇರಿದಂತೆ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ನಿದ್ದೆಗೆಡಿಸಿದೆ. ಟಾಪ್ ಎಂಡ್ ಫೀಚರ್ ಗಳನ್ನು ಹೊಂದಿದ್ದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಗಳಿಸಿಕೊಂಡಿದ್ದು, ಇದೇ ಹಿನ್ನಲೆಯಲ್ಲಿ ಒನ್‌ಪ್ಲಸ್ ಮುಂದಿನ ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೊಂದು ಲೀಕ್ ಆಗಿದೆ.

ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್‌ ಲೀಕ್ ಆಯ್ತು..! ಆಪಲ್-ಸ್ಯಾಮ್‌ಸಂಗ್‌ಗೆ ನಡುಕ

ಒನ್‌ಪ್ಲಸ್ ಮಾರುಕಟ್ಟೆಗೆ ಹೊಸದಾಗಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಅನ್ನು ಶೀಘ್ರವೇ ಲಾಂಚ್ ಆಗಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಲೀಕ್ ಆಗಿದ್ದು, ಅದರ ಬಾಕ್ಸ್ ಫೋಟೋ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನವೆಂಬರ್ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಮುಂದಿದೆ.

ವಾಟರ್ ಡ್ರಾಪ್ ಡಿಸ್‌ಪ್ಲೇ:

ವಾಟರ್ ಡ್ರಾಪ್ ಡಿಸ್‌ಪ್ಲೇ:

ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಹೊಸ ಮಾದರಿಯ ಡಿಸ್‌ಪ್ಲೇ ನೋಚ್ ಅನ್ನು ಕಾಣಬಹುದಾಗಿದೆ. ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಕಾಣಿಸಿಕೊಂಡ ವಾಟರ್ ಡ್ರಾಪ್ ಮಾದರಿಯ ನೋಚ್ ಡಿಸ್‌ಪ್ಲೇಯನ್ನು ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಅಗಲವಾದ ಸ್ಕ್ರಿನ್ ಅನ್ನು ಕಾಣಬಹುದಾಗಿದೆ.

ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್:

ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್:

ಇದಲ್ಲದೇ ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಇದು ಸದ್ಯದ ಮಾರುಕಟ್ಟೆಯ ಟ್ರೆಂಡ್ ಆಗಿದ್ದು, ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಇದು ಮುಖ್ಯ ಆಕರ್ಷಣೆಯಾಗಲಿದೆ.

18:9 ಡಿಸ್‌ಪ್ಲೇ:

18:9 ಡಿಸ್‌ಪ್ಲೇ:

ಈ ಹಿಂದೆ 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿದ್ದ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿಯೂ 18:9 ಅನುಪಾತದ ಡಿಸ್‌ಪ್ಲೇಯನ್ನು ಅಳವಡಿಸಲು ಒನ್‌ಪ್ಲಸ್ ಮುಂದಾಗಿದೆ ಎನ್ನಲಾಗಿದೆ.

ಹೊಸ ಟ್ಯಾಗ್‌ ಲೈನ್:

ಹೊಸ ಟ್ಯಾಗ್‌ ಲೈನ್:

ಪ್ರತಿ ಸ್ಮಾರ್ಟ್‌ಫೋನ್ ಲಾಂಚ್ ಸಂದರ್ಭದಲ್ಲಿಯೂ ಹೊಸ ಮಾದರಿಯ ಟ್ಯಾಗ್ಸ್ ಲೈನ್ ಅನ್ನು ನೀಡುವ ಒನ್‌ಪ್ಲಸ್, ಈ ಬಾರಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್‌ಗೆ 'ಆನ್‌ಲಾಕ್ ದ ಸ್ಪೀಡ್' ಎಂಬ ಟ್ಯಾಗ್ಸ್‌ಲೈನ್‌ ಅನ್ನು ನೀಡಿದ್ದು, ಈ ಸ್ಮಾರ್ಟ್‌ಫೋನ್ ಸಹ ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ತಿಳಿಸಿದೆ.

ವಿಶೇಷತೆ:

ವಿಶೇಷತೆ:

ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ನೊಂದಿಗೆ 8GB RAM ಮತ್ತು 256 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಪೊಕೊ F1 ಲಾಂಚ್ ಆಗಿರುವ ಹಿನ್ನಲೆಯಲ್ಲಿ ಬೆಲೆಯೂ ಕಡಿಮೆ ಇರುವ ಸಾಧ್ಯತೆ ಇದೆ.

Best Mobiles in India

English summary
Photos of OnePlus 6T has a water-drop notch and in-display fingerprint scanner. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+