ಈ ಕಪ್ಪು ಸುಂದರಿಯನ್ನು ನೀವು ಒಪ್ಪಕೊಳ್ಳದಿರಲು ಕಷ್ಟ!

Posted By: Staff

ಈ ಕಪ್ಪು ಸುಂದರಿಯನ್ನು ನೀವು ಒಪ್ಪಕೊಳ್ಳದಿರಲು ಕಷ್ಟ!
ಜಗತ್ಪ್ರಸಿದ್ಧ ಕಂಪೆನಿ ಪಿಯೋನೀರ್ಸ್ ಎಲೆಕ್ಟ್ರಾನಿಕ್ಸ್ ಡಿವೈಸಸ್ MVL ಗ್ರೂಫ್, ಹೊಸ ಮೊಬೈಲೊಂದರ ಬಿಡುಗಡೆಯನ್ನು ಘೋಷಿಸಿದೆ. ಅದು ಎಮ್ ವಿ ಎಲ್ R6. ಈ ಕಂಪೆನಿಯ ಬರಲಿರುವ ಹೊಸ R6 ಮೊಬೈಲಿನಲ್ಲಿ ಏನೇನಿದೆ ಅಂತ ತಿಳಿದುಕೊಳ್ಳೋಣ...

ಮೊದಲನೆಯದಾಗಿ ಈ ಕಂಪೆನಿಯ ಹೊಸ ಮೊಬೈಲ್ ಉದ್ದೇಶ ಆದಷ್ಟೂ ಕಡಿಮೆ ಬೆಲೆಗೆ ಸಾಧ್ಯವಿದ್ದಷ್ಟೂ ಹೆಚ್ಚು ವಿಶೇಷತೆಗಳನ್ನು ಗ್ರಾಹಕರಿಗೆ ನೀಡುವುದು.

*** ಇರಬಹುದಾದ ವಿಶೇಷತೆಗಳು:
* 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ, MP3, ಮ್ಯೂಸಿಕ್ ಪ್ಲೇಯರ್, ವೈರ್ ಲೆಸ್ FM ರೇಡಿಯೋ, FM ರೆಕಾರ್ಡಿಂಗ್
* A2DP ಸಹಿತ ಬ್ಲೂ ಟೂಥ್
* GPRS ಇಂಟರ್ನೆಟ್ ಸೌಲಭ್ಯ
* ವಿಸ್ತರಿಸಬಹುದಾದ 8 GB ಮೆಮೊರಿ ಸಾಮರ್ಥ್ಯ
* 650 ನಿಮಷಗಳ ಟಾಕ್ ಟೈಮ್ ಜೊತೆ 720 ತಾಸುಗಳ ಸ್ಟ್ಯಾಂಡ್ ಬೈ ಬ್ಯಾಟರಿ ಬ್ಯಾಕಪ್
* ಕರೆನ್ಸಿ ಕನ್ವರ್ಟರ್, ವರ್ಲ್ಡ್ ಕ್ಲಾಕ್, ಸೌಂಡ್ ರೆಕಾರ್ಡರ್ & ಕ್ಯಾಲ್ಕ್ಯುಲೇಟರ್
* ಆಕರ್ಷಕವಾದ ಕಪ್ಪು ಬಣ್ಣದ ವಿಶಿಷ್ಠ ವಿನ್ಯಾಸ

* ಗ್ರಾಹಕರಿಗೆ ಅತಿ ಮುಖ್ಯವಾದ ಬೆಲೆ ವಿಷಯದಲ್ಲಿ ನಂಬಲಸಾಧ್ಯವಾದ ಅತಿ ಕಡಿಮೆ ಬೆಲೆ, ರು. 1,999.

ಬರಲಿರುವ ಈ ಹೊಸ ಮೊಬೈಲ್ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದೀರಿ. ಇಷ್ಟು ಕಡಿಮೆ ಬೆಲೆಗೆ ಅದೆಷ್ಟು ಒಳ್ಳೆಯ ಮೊಬೈಲ್ ಎಂದು ಆಶ್ಚರ್ಯ ಕೂಡ ಹೊಂದಿದ್ದೀರಿ!

ಅಂದಮೇಲೆ ತಡಯಾಕೆ? ಬಿಡುಗಡೆಯಾದ ದಿನಾಂಕದಲ್ಲೇ ನಿಮ್ಮ ಜೊತೆಯಲ್ಲೊಂದು ಕಪ್ಪು ಸುಂದರಿಯಿರಲಿ, ಅಪ್ಪಿಕೊಳ್ಳಿ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot